»   » ಚಂದನ್ ಶೆಟ್ಟಿಗೆ ಯಾಕೆ ಕ್ಷಮೆ ಕೇಳಬೇಕು ಗುರು.?

ಚಂದನ್ ಶೆಟ್ಟಿಗೆ ಯಾಕೆ ಕ್ಷಮೆ ಕೇಳಬೇಕು ಗುರು.?

Posted By:
Subscribe to Filmibeat Kannada

ಕನ್ನಡ Rappers ಅಲೋಕ್ ಹಾಗೂ ರಾಹುಲ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. 'ನಂಗನ್ಸಿದ್ದು' ಹಾಡಲ್ಲಿ ಚಂದನ್ ಶೆಟ್ಟಿ ಕಾಲೆಳೆಯಲಾಗಿದೆ ಎಂಬ ಕಾರಣಕ್ಕೆ ಅಲೋಕ್ ಹಾಗೂ ರಾಹುಲ್ ಸದ್ಯ ಟ್ರೋಲ್ ಆಗ್ತಿದ್ದಾರೆ.

ಫೇಸ್ ಬುಕ್ ನಲ್ಲಿ ಟ್ರೋಲ್ ಗಳು ಹೆಚ್ಚಾದಂತೆ ಅಲೋಕ್ ಹಾಗೂ ರಾಹುಲ್ ಲೈವ್ ಮಾಡುವ ಮೂಲಕ ವಿವಾದಕ್ಕೆ ಶುಭಂ ಹಾಡಲು ಮುಂದಾದರು. ''ಜನರಿಗೆ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇವೆ'' ಎಂದು ಅಲೋಕ್ ಹೇಳಿದರೆ, ''ಚಂದನ್ ಶೆಟ್ಟಿಗೆ ಯಾಕೆ ಕ್ಷಮೆ ಕೇಳಬೇಕು ಗುರು.? ನಾವೇನು ಅವರ ಹೆಸರನ್ನ ವಿಡಿಯೋದಲ್ಲಿ ಹೇಳಿದ್ದೇವಾ.?'' ಅಂತ ರಾಹುಲ್ ಪ್ರಶ್ನೆ ಮಾಡಿದ್ದಾರೆ.

ಹಾಗಾದ್ರೆ, ಫೇಸ್ ಬುಕ್ ಲೈವ್ ಮಾಡಿ ಅಲೋಕ್ ಹಾಗೂ ರಾಹುಲ್ ಏನಂತ ಹೇಳಿದರು ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ನೋಡಿ...

ಸ್ಪಷ್ಟನೆ ಕೊಡಲು ಫೇಸ್ ಬುಕ್ ಲೈವ್

''ಎಲ್ಲ ಕಡೆ ಬೇಡದೇ ಇರುವ ಪೋಸ್ಟ್ ಗಳು ಬರ್ತಿವೆ. ಈ ಬಗ್ಗೆ ಕ್ಲಾರಿಫೈ ಮಾಡೋಕೆ ಫೇಸ್ ಬುಕ್ ಲೈವ್ ಗೆ ಬಂದ್ವಿ. ನಾವು ಯಾರಿಗೋ ಕಾಲೆಳೆಯುತ್ತಿದ್ದೇವೆ ಅಂತ ಸಾಕಷ್ಟು ಜನ ಅಂದುಕೊಂಡಿದ್ದಾರೆ. ಈಗ ಬಗ್ಗೆ ಕ್ಲಾರಿಟಿ ಕೊಡುತ್ತೇನೆ. ನಾವು ಯಾರಿಗೂ ಕಾಲೆಳೆದಿಲ್ಲ'' ಎಂದು ಫೇಸ್ ಬುಕ್ ಲೈವ್ ನಲ್ಲಿ ಅಲೋಕ್ ಸ್ಪಷ್ಟ ಪಡಿಸಿದರು.

ಯದ್ವಾತದ್ವಾ ಟ್ರೋಲ್ ಆಗ್ತಿದ್ದಾರೆ ಟೀಮ್ ALLOK.! ಇದೆಲ್ಲ ಬೇಕಿತ್ತಾ.?

ಫೇಕ್ Rappers ಇದ್ದಾರೆ

''ಫೇಕ್ Rappers ಯಾರಿದ್ದಾರೆ, ಅವರಿಗೆ ಮಾಡಿರುವ satire rap ವಿಡಿಯೋ ಹಾಡು ಇದು. ಮೊದಲ ಬಾರಿಗೆ satire rap ಪ್ರಯೋಗ ಮಾಡಿದ್ದೇವೆ. ಮುಂದೆಯೂ ಮಾಡ್ತೇವೆ. ನಿಮಗೆ ಏನಾದರೂ ಇದರಿಂದ ಬೇಸರ ಆಗಿದ್ದರೆ ಕ್ಷಮಿಸಿ. ಆದ್ರೆ, ನಮ್ಮ ಪ್ರಯತ್ನ ನಿಲ್ಲಿಸಲ್ಲ'' - ಅಲೋಕ್

ಚಂದನ್ ಶೆಟ್ಟಿ ಕಾಲೆಳೆದು, ಟಾಂಗ್ ಕೊಟ್ರಾ ಕನ್ನಡ rapper ಅಲೋಕ್, ರಾಹುಲ್.?

ಸುಮ್ಮನೆ ಗಾಸಿಪ್ ಸೃಷ್ಟಿಸಬೇಡಿ

''ಚಂದನ್ ಶೆಟ್ಟಿ ಮತ್ತು ನಾನು ಒಳ್ಳೆಯ ಸ್ನೇಹಿತರು. ನಾನು ಚಂದನ್ ನ ಬಹಳ ಹಿಂದಿನಿಂದಲೂ ನೋಡಿಕೊಂಡು ಬಂದಿದ್ದೇನೆ. ಹೀಗಾಗಿ, ಈ ಹಾಡಿನಿಂದ ಬೇಡದ ಗಾಸಿಪ್ ಕ್ರಿಯೇಟ್ ಮಾಡಬೇಡಿ. ಭಾರತದಲ್ಲಿ ಎಷ್ಟೋ ಜನ ಫೇಕ್ Rappers ಇದ್ದಾರೆ. ನೀವ್ಯಾಕೆ ಅದು ಚಂದನ್ ಶೆಟ್ಟಿನೇ ಅಂತಿದ್ದೀರಾ.?'' - ಅಲೋಕ್

ಚಂದನ್ ಶೆಟ್ಟಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿರುವ 'ನಂಗನ್ಸಿದ್ದು' ಹಾಡಿನ ಸಾಹಿತ್ಯದಲ್ಲೇನಿದೆ.?

ಚಂದನ್ ಶೆಟ್ಟಿ ಹೆಸರು ಹೇಳಿಲ್ಲ

''ಸಾಹಿತ್ಯದಲ್ಲಿ ನಾವು ಎಲ್ಲೂ ಅವರ ಹೆಸರು ಹೇಳಿಲ್ಲ. ಮತ್ಯಾಕೆ ಚಂದನ್ ಶೆಟ್ಟಿ ಹೆಸರು ಬರ್ತಿದೆ.? ಚಂದನ್ ಶೆಟ್ಟಿ ಜನಪ್ರಿಯತೆಯನ್ನ ನಾವು ಬಳಸಿಕೊಳ್ತಿದ್ದೇವೆ ಅಂತ ಸುಮಾರು ಜನ ಹೇಳ್ತಿದ್ದಾರೆ. ಇನ್ನೊಬ್ಬರ ಜನಪ್ರಿಯತೆ ಬಳಸಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ. ಯಾರು ಯಾಕೆ ಹೊಟ್ಟೆ ಉರಿ ಪಡಬೇಕು ಇಲ್ಲಿ.? ಯಾರು ಯಾರನ್ನ ನೋಡಿ ಉರ್ಕೊಳ್ಳುವ ಅವಶ್ಯಕತೆ ಇಲ್ಲ. ಸುಮ್ಮನೆ ತಂದಿಡುವ ಕೆಲಸ ಯಾಕೆ ಮಾಡ್ತಿದ್ದೀರಾ.?'' - ಅಲೋಕ್

ಯಾಕೆ ಕ್ಷಮೆ ಕೇಳಬೇಕು ಗುರು.?

''ಚಂದನ್ ಶೆಟ್ಟಿಗೆ ಯಾಕೆ ಕ್ಷಮೆ ಕೇಳಬೇಕು ಗುರು.? ನಾವೇನು ಅವರ ಹೆಸರು ಹೇಳಿದ್ದೀವಾ ವಿಡಿಯೋದಲ್ಲಿ.? ಚಂದನ್ ಶೆಟ್ಟಿ ಒಳ್ಳೆಯ ಆರ್ಟಿಸ್ಟ್. ಜನರಿಗೆ ರಾಪ್ ಯಾವುದು, ಪಾಪ್ ಯಾವುದು ಅಂತ ಗೊತ್ತಾಗುತ್ತಿಲ್ಲ. ಜಡ್ಜ್ ಮಾಡೋಕೂ ಮುನ್ನ ಗ್ರೌಂಡ್ ವರ್ಕ್ ಮಾಡಿ.. ಬೇಕಾಬಿಟ್ಟಿ ಕಾಮೆಂಟ್ ಮಾಡಬೇಡಿ'' - ರಾಹುಲ್

ಇದು ಗ್ಯಾಂಗ್ ಸ್ಟರ್ ರಾಪ್ ಅಂತೆ

''ಯಾರೋ ಮಧ್ಯ ಹುಳಿ ಹಿಂಡುತ್ತಿದ್ದಾರೆ. ಸಮಾಜದಲ್ಲಿ ಇರೋದನ್ನ ಇದ್ಹಂಗೆ ಹೇಳುವುದು ಗ್ಯಾಂಗ್ ಸ್ಟರ್ ರಾಪ್. ಅದನ್ನ ನಾನು ಮಾಡಿದ್ದೇನೆ'' - ರಾಹುಲ್

ಕಾಪಿ ಅಲ್ಲ, ಸ್ಫೂರ್ತಿ

''ಮ್ಯೂಸಿಕ್ ಕಾಪಿ ಆಗಿದೆ ಅಂತ ಎಷ್ಟೋ ಜನ ಹೇಳಿದರು. 100% ಅದು ಸ್ಫೂರ್ತಿ ಪಡೆದದ್ದು. ಆದ್ರೆ, ಕಾಪಿ ಅಲ್ಲ'' - ಅಲೋಕ್

ವಿವಾದ ಯಾಕೆ ಆಗುತ್ತಿದೆ.?

''ಕ್ರ್ಯಾಪ್ ಅಂದ್ರೆ ಶಿಟ್ ಅಂತ ಅರ್ಥ. ಚೆನ್ನಾಗಿಲ್ಲದೇ ಇರುವುದನ್ನು ಹೊಡೆದಾಕಿ, ರಾಪ್ ಮಾಡುವುದನ್ನು ತೋರಿಸಿದ್ದೇವೆ ಅಷ್ಟೇ. ಬೇಡದೆ ಇರುವ ಕಲ್ಪನೆ ಮಾಡಿಕೊಂಡು, ವಿವಾದ ಯಾಕೆ ಸೃಷ್ಟಿಸ್ತಿದ್ದೀರಾ ಅಂತ ಗೊತ್ತಾಗುತ್ತಿಲ್ಲ'' - ಅಲೋಕ್

English summary
Kannada Rappers Alok and Rahul clarifies regarding Nangansiddu song controversy in Facebook live.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada