For Quick Alerts
  ALLOW NOTIFICATIONS  
  For Daily Alerts

  ಬಿಕಿನಿ ಹಾಕಿಕೊಳ್ಳಿ ಎಂದಿದ್ದಕ್ಕೆ ಆ ಸಿನಿಮಾನೇ ಬಿಟ್ಟ ಅಮಲಾ ಪೌಲ್

  By Bharath Kumar
  |

  ಅಮಲಾ ಪೌಲ್ ದಕ್ಷಿಣ ಭಾರತದ ಖ್ಯಾತ ನಟಿ. ಕಿಚ್ಚ ಸುದೀಪ್ ಅಭಿನಯಿಸಿದ್ದ 'ಹೆಬ್ಬುಲಿ' ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಈ ಚೆಲುವೆ ಮತ್ಯಾವ ಕನ್ನಡ ಚಿತ್ರದಲ್ಲೂ ನಟಿಸಿಲ್ಲ.

  ಇದೀಗ, ಸೌತ್ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿ ಇರುವ ಅಮಲಾ, ಅಚ್ಚರಿ ವಿಷ್ಯವೊಂದನ್ನ ಬಹಿರಂಗಪಡಿಸಿದ್ದಾರೆ. ಇಂದಿನ ಬಹುತೇಕ ನಟಿಯರು ಬಿಕಿನಿ ಹಾಕೋದಕ್ಕೆ ಯಾವುದೇ ಅಭ್ಯಂತರ ವ್ಯಕ್ತಪಡಿಸುವುದಿಲ್ಲ. ಆದ್ರೆ, ಅಮಲಾ ಪೌಲ್ ಬಿಕಿನಿ ಕಾರಣದಿಂದಲೇ ಅನೇಕ ಚಿತ್ರಗಳನ್ನ ಕೈಬಿಟ್ಟಿದ್ದಾರಂತೆ.

  ಈ ಸಂಗತಿಯನ್ನ ಖುದ್ದು ಅಮಲಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಹಾಗಂತ ಅಮಲಾ ಬಿಕಿನಿ ಹಾಕಿಲ್ಲ ಅಥವಾ ಹಾಕೋದೇ ಇಲ್ಲ ಅಂತಲ್ಲ. ಬಟ್, ಯಾವ ಕಾರಣದಿಂದ ಅಂತಹ ಚಿತ್ರಗಳನ್ನ ಕೈಬಿಟ್ಟರು ಎಂಬುದನ್ನ ತಿಳಿಯಲು ಮುಂದೆ ಓದಿ....

  ಬಾಲಿವುಡ್ ಗೆ ಎಂಟ್ರಿ ಕೊಟ್ಟ ಅಮಲಾ

  ಬಾಲಿವುಡ್ ಗೆ ಎಂಟ್ರಿ ಕೊಟ್ಟ ಅಮಲಾ

  ಇಷ್ಟು ದಿನ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದ ಅಮಲಾ ಪೌಲ್ ಈಗ ಬಾಲಿವುಡ್ ಗೆ ಕಾಲಿಟ್ಟಿದ್ದಾರೆ. ಬಿಟೌನ್ ಇಂಡಸ್ಟ್ರಿಯಲ್ಲಿ ತಮ್ಮ ಚೊಚ್ಚಲ ಸಿನಿಮಾ ಮಾಡ್ತಿದ್ದಾರೆ. ಈ ಬಗ್ಗೆ ಮಾತನಾಡುವಾಗ ಬಿಕಿನಿಯಿಂದ ನಾನು ಅನೇಕ ಚಿತ್ರಗಳನ್ನ ಕೈಬಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

  ಆಫರ್ ಇದ್ರು ಮಾಡಿಲ್ಲ ಯಾಕೆ

  ಆಫರ್ ಇದ್ರು ಮಾಡಿಲ್ಲ ಯಾಕೆ

  ಬಾಲಿವುಡ್ ನಿಂದ ಈ ಹಿಂದೆಯೇ ಅನೇಕ ಬಾರಿ ಅಮಲಾ ಪೌಲ್ ಗೆ ಆಫರ್ ಬಂದಿತ್ತು. ಆದ್ರೆ, ಕಾರಣಾಂತರಗಳಿಂದ ಮಾಡೋಕೆ ಆಗಲ್ಲವಂತೆ. ''ಬಿಕಿನಿ ಹಾಕೋಕೆ ನಾನು ರೆಡಿ. ಆದ್ರೆ ಕೆಲವು ಕೆಟ್ಟ ಸನ್ನಿವೇಶಗಳಲ್ಲಿ ಬಿಕಿನಿ ಹಾಕಿಕೊಳ್ಳಿ ಎಂದು ಹೇಳಿದಕ್ಕೆ ನಾನು ಅವರ ಮುಖಕ್ಕೆ ಹೊಡೆದ ಹಾಗೆ ಹೇಳಿ ನಾನು ಈ ಸಿನಿಮಾ ಮಾಡಲ್ಲ ಅಂತ ಬಂದಿದ್ದೆ'' ಎಂದು ನೆನಪಿಸಿಕೊಂಡಿದ್ದಾರೆ.

  ಯಾವುದು ಬಾಲಿವುಡ್ ಸಿನಿಮಾ

  ಯಾವುದು ಬಾಲಿವುಡ್ ಸಿನಿಮಾ

  ಅಂತಹ ಬಾಲಿವುಡ್ ನ ಮತ್ತೊಂದು ಚಿತ್ರದಲ್ಲಿ ಅಮಲಾ ನಟಿಸುತ್ತಿದ್ದಾರೆ. ಅರ್ಜುನ ರಾಂಪಾಲ್ ನಾಯಕನಾಗಿರುವ ಈ ಚಿತ್ರದಲ್ಲಿ ಅಮಲಾ ಪೌಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನರೇಶ್ ಮಲ್ಹೋತ್ರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಆಡಿಷನ್ ಇಲ್ಲದೇ ಆಯ್ಕೆ

  ಆಡಿಷನ್ ಇಲ್ಲದೇ ಆಯ್ಕೆ

  ಸಾಮಾನ್ಯವಾಗಿ ಸೌತ್ ನಿಂದ ಬಾಲಿವುಡ್ ಗೆ ಹೋದ ಬಹುತೇಕ ನಟಿಯರು ಆಡಿಷನ್ ಮೂಲಕವೇ ಸಿನಿಮಾಗೆ ಆಯ್ಕೆಯಾಗ್ತಾರೆ. ಆದ್ರೆ, ಅಮಲಾ ಪೌಲ್ ಆಡಿಷನ್ ಕೊಟ್ಟಿಲ್ಲವಂತೆ. ನಿರ್ದೇಶಕ ನರೇಶ್ ಮಲ್ಹೋತ್ರ ಅವರು ಅಮಲಾ ಸಿನಿಮಾಗಳನ್ನ ನೋಡಿದ್ದಾರೆ. ಈ ಪಾತ್ರಕ್ಕೆ ಸೂಕ್ತವಾಗ್ತಾರೆ ಎಂದು ಆಡಿಷನ್ ಕೂಡ ಮಾಡಿಲ್ಲ' ಎಂದು ಹೇಳಿಕೊಂಡಿದ್ದಾರೆ. ಹಿಮಾಲಯದಲ್ಲಿ ಈ ಸಿನಿಮಾ ಚಿತ್ರೀಕರಣ ನಡೆಯಲಿದೆ.

  English summary
  Amala paul revealed that she has been getting offers from Bollywood for some time now. Once she was asked if she will be comfortable in a bikini, and Amala replied with a 'yes'. But she has rejected many such projects since it didn't have enough scope for her characters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X