»   » ಅಂಬರೀಶ್ ಹುಟ್ಟುಹಬ್ಬಕ್ಕೆ 'ದೊಡ್ಮನೆ'ಯಿಂದ ಸಿಕ್ಕ ಉಡುಗೊರೆ ಇದು.!

ಅಂಬರೀಶ್ ಹುಟ್ಟುಹಬ್ಬಕ್ಕೆ 'ದೊಡ್ಮನೆ'ಯಿಂದ ಸಿಕ್ಕ ಉಡುಗೊರೆ ಇದು.!

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್ ರವರ 64ನೇ ಹುಟ್ಟುಹಬ್ಬವನ್ನು ಇಂದು ಅಭಿಮಾನಿಗಳು ಸಡಗರದಿಂದ ಆಚರಿಸುತ್ತಿದ್ದಾರೆ. ರೆಬೆಲ್ ಫ್ಯಾನ್ಸ್ ಖುಷಿಯನ್ನ ಡಬಲ್ ಮಾಡೋಕೆ 'ದೊಡ್ಮನೆ ಹುಡ್ಗ' ತಂಡ ಇಂದು ಒಂದು ಸ್ಪೆಷಲ್ ಟೀಸರ್ ಬಿಡುಗಡೆ ಮಾಡಿದೆ.

'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಅಂಬರೀಶ್ ಅಕ್ಷರಶಃ 'ರೆಬೆಲ್ ಸ್ಟಾರ್' ಆಗಿದ್ದಾರೆ. ಬೇಕಾದ್ರೆ ಈಗಷ್ಟೇ ರಿಲೀಸ್ ಆಗಿರುವ ಟೀಸರ್ ನ ನೀವೇ ನೋಡಿ....


Ambareesh Birthday special: Watch 'Dodmane Huduga' teaser

''ನೀನ್ ಯಾವನ್ ಆದ್ರೆ, ನನಗೇನೋ...ನನ್ ಲೈಫ್ ನಲ್ಲಿ ವಿಸಿಟಿಂಗ್ ಕಾರ್ಡ್ ಕೊಟ್ಟು ಯಾವ ನನ್ನ ಮಗನಿಗೂ ಪರಿಚಯ ಮಾಡಿಕೊಂಡಿಲ್ಲ'' ಎಂಬ ಅಬ್ಬರದ ಡೈಲಾಗ್ ನಡುವೆ ಅಂಬರೀಶ್ ಘನತೆಗೆ ತಕ್ಕಂತೆ ಇರುವ ''ನಾವು ದೊಡ್ಮನೆಯವರು, ಕೊಡೋದು ಅಷ್ಟೇ ಗೊತ್ತು. ವಾಪಸ್ ಏನನ್ನೂ ಅಪೇಕ್ಷೆ ಪಡೋದಿಲ್ಲ'' ಎಂಬ ಸಂಭಾಷಣೆ ರೆಬೆಲ್ ಅಭಿಮಾನಿಗಳಿಂದ ಶಿಳ್ಳೆ ಗಿಟ್ಟಿಸಿಕೊಳ್ಳುವುದು ಗ್ಯಾರೆಂಟಿ. [ದೊಡ್ಮನೆಯಿಂದ ಅಭಿಮಾನಿಗಳಿಗೆ ಸಂತಸದ ಸುದ್ದಿ]


ಅಂದ್ಹಾಗೆ, ಇವತ್ತು ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿರುವ ಈ ಸ್ಪೆಷಲ್ ಟೀಸರ್ ನಲ್ಲಿ ಅಂಬರೀಶ್ ಮಾತ್ರ ಹೈಲೈಟ್. ಪುನೀತ್ ರಾಜ್ ಕುಮಾರ್, ರಾಧಿಕಾ ಪಂಡಿತ್, ಸುಮಲತಾ ಸೇರಿದಂತೆ ಉಳಿದ ಪಾತ್ರಗಳನ್ನ ಸದ್ಯಕ್ಕೆ ಅನಾವರಣ ಮಾಡಿಲ್ಲ. ['ದೊಡ್ಮನೆ ಹುಡುಗ'ನಿಗೆ ನಂಜನಗೂಡಿನಲ್ಲಿ ಆಗಿದ್ದೇನು?]


ದುನಿಯಾ ಸೂರಿ ನಿರ್ದೇಶಿಸಿರುವ 'ದೊಡ್ಮನೆ ಹುಡ್ಗ' ಚಿತ್ರದಿಂದ ಅಂಬರೀಶ್ ಹುಟ್ಟುಹಬ್ಬಕ್ಕೆ ಒಳ್ಳೆ ಗಿಫ್ಟ್ ಸಿಕ್ಕಿದೆ. ಅಂಬಿ ಅಭಿಮಾನಿಗಳಿಗೆ ಇದಕ್ಕಿಂತ ಬೇರೇನು ಬೇಕು?

English summary
Kannada Actor, Rebel Star, Congress Politician, Housing Minister Ambareesh is celebrating 64th birthday today (May 29th). On this occasion, 'Dodmane Huduga' special teaser is out. Watch the video here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada