»   » ಫಿಲ್ಮ್ ಚೇಂಬರ್ ನಲ್ಲಿ ಕೂಗಾಟ-ಕಿತ್ತಾಟ-ರಂಪಾಟ

ಫಿಲ್ಮ್ ಚೇಂಬರ್ ನಲ್ಲಿ ಕೂಗಾಟ-ಕಿತ್ತಾಟ-ರಂಪಾಟ

Posted By:
Subscribe to Filmibeat Kannada

ಸಮಯ ಮಧ್ಯಾಹ್ನ 3 ಗಂಟೆ. ಎಲ್ಲಾ ಸುದ್ದಿ ವಾಹಿನಿಗಳಲ್ಲೂ ಒಂದೇ ಸುದ್ದಿ. ನಿರ್ಮಾಪಕರನ್ನ 'ಬೆಗ್ಗರ್ಸ್' ಅಂದ ರೆಬೆಲ್ ಸ್ಟಾರ್ ಅಂಬರೀಶ್.! ಎಲ್ಲಾ ಚಾನೆಲ್ ಗಳಲ್ಲೂ ಅಂಬರೀಶ್ ಆಡಿದ ಮಾತು ರಿಪೀಟ್ ಆಗಿ ಪ್ಲೇ ಆಗ್ತಿತ್ತು.

''Beggars have no choice. You are not a chooser. You cant choose.'' ಅಂತ ಪದೇ ಪದೇ ಅಂಬರೀಶ್ ಅವರ ಬಾಯಿಂದ ಬಂದ ಮಾತು ಕೇಳಿದ ನಿರ್ಮಾಪಕರಿಗೆ ಪಿತ್ತ ನೆತ್ತಿಗೇರ್ತು. ಆಗಲೇ ನೋಡಿ, ಪ್ರಶಾಂತವಾಗಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ರಣರಂಗವಾಗಿದ್ದು.

ನೋಡನೋಡುತ್ತಿದ್ದಂತೆ ಫಿಲ್ಮ್ ಚೇಂಬರ್ ನಲ್ಲಿ ರಂಪಾಟ ಶುರುವಾಯ್ತು. ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ನಿರ್ಮಾಪಕರು ರೊಚ್ಚಿಗೆದ್ದರು. ಪ್ರತಿಭಟನೆಯಲ್ಲಿ ನಿರತರಾಗಿದ್ದ ಪ್ರೊಡ್ಯೂಸರ್ ಗಳು ಕೂಗಾಡೋಕೆ ಆರಂಭಿಸಿದರು. ಮುಂದೆ ಓದಿ.....

ಅಂಬರೀಷ್ ವಿರುದ್ಧ ಎನ್.ಎಂ.ಸುರೇಶ್ ಬೇಸರ

ವಾಣಿಜ್ಯ ಮಂಡಳಿ ಪದಾಧಿಕಾರಿಯಾಗಿರುವ ಎನ್.ಎಂ.ಸುರೇಶ್, ರೆಬೆಲ್ ಸ್ಟಾರ್ ಅಂಬರೀಶ್ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಆಂಗ್ಲ ಭಾಷೆಯ ಗಾದೆಯನ್ನಿಟ್ಟುಕೊಂಡು ನಿರ್ಮಾಪಕರಿಗೆ ಬೆಟ್ಟು ತೋರಿಸಿರುವ ಅಂಬಿ ನಡವಳಿಕೆ ಅಸಹನೀಯ ಅಂದರು. [ನೊಂದ ನಿರ್ಮಾಪಕರಿಂದ ಅಂಬರೀಶ್ ಗೆ ಮಹಾ ಮಂಗಳಾರತಿ]

ಕೆ.ಮಂಜುಗೆ ಇಂಗ್ಲೀಷ್ ಬರಲ್ವಂತೆ..!

ಅಂಬಿ ಆಡಿದ ಮಾತಿಗೆ ಅನೇಕ ನಿರ್ಮಾಪಕರು ಆಕ್ರೋಶ ವ್ಯಕ್ತಪಡಿಸಿದರು. ಆದ್ರೆ, ತಮ್ಮದೇ ಯೋಚನಾ ಶೈಲಿಯಲ್ಲಿ ಅಂಬಿ ಮಾತಿಗೆ ಕೆ.ಮಂಜು ಬೇರೆಯದ್ದೇ ಅರ್ಥ ಹುಡುಕಿಕೊಂಡಿದ್ದರು. ''ಅಂಬರೀಶ್ ಹಾಗೆ ಹೇಳಿಲ್ಲ. ಅವರಿಗೆ ಚಿತ್ರರಂಗದ ಮೇಲೆ ಗೌರವ ಇದೆ'' ಅಂತ ಕೆ.ಮಂಜು ಹೇಳ್ತಿದ್ದ ಹಾಗೆ, ಪಕ್ಕದಲ್ಲೇ ಇದ್ದ ನಿರ್ಮಾಪಕರ ಎನ್.ಎಂ.ಸುರೇಶ್ ''ನಿಮಗೆ ಇಂಗ್ಲೀಷ್ ಬರಲ್ಲ. ಅದಕ್ಕೆ ಅವರು ಏನು ಹೇಳಿದ್ರು ಅಂತ ನಿಮಗೆ ಅರ್ಥ ಆಗ್ಲಿಲ್ಲ.'' ಅಂತ ಹೇಳಿಬಿಟ್ಟರು. [''ನಿರ್ಮಾಪಕರು ಭಿಕ್ಷುಕರು'' - ಮಂಡ್ಯದ ಗಂಡು ಅಂಬರೀಶ್]

ಮುನಿರತ್ನ ಪ್ಲಾನ್ ಏನು?

ಎಲ್ಲಾ ನಿರ್ಮಾಪಕರು ಅಂಬರೀಶ್ ವಿರುದ್ಧ ಸಿಡಿದೆದ್ದಿದ್ರೆ, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಮಾತ್ರ ಸೈಲೆಂಟ್ ಆಗಿದ್ದರು. ಅಂಬಿ ವಿರುದ್ಧ ಒಂದು ಮಾತು ಕೂಡ ಆಡಲಿಲ್ಲ. ['ಡೆತ್ ನೋಟ್' ಬರೆದಿಟ್ಟು ಆಸ್ಪತ್ರೆ ಸೇರಿದ ನಿರ್ಮಾಪಕ]

ತೊಡೆ ತಟ್ಟಿ ನಿಂತ ಟೇಶಿ ವೆಂಕಟೇಶ್

''ನಮ್ಮಲ್ಲಿ ಒಗ್ಗಟ್ಟಿಲ್ಲ. ರಾಜಿ ಯಾಕೆ ಮಾಡಿಸ್ತೀರಾ. ದೊಡ್ಡ ದೊಡ್ಡ ನಿರ್ಮಾಪಕರೇ ಬೆಗ್ಗರ್ ಆಗಿ ನಿಂತಿದ್ದಾರೆ. ಚಿತ್ರರಂಗ ಸತ್ತು ಹೋಗಿದೆ'' ಅಂತ ತಾಳ್ಮೆ ಕಳೆದುಕೊಂಡ ನಿರ್ಮಾಪಕ ಟೇಶಿ ವೆಂಕಟೇಶ್ ಫಿಲ್ಮ್ ಚೇಂಬರ್ ನಲ್ಲಿ ದಾಂಧಲೆ ಎಬ್ಬಿಸಿದರು. [ಹಿರಿಯ ನಟಿ ಜಯಮಾಲಾ ಮಾತಿಗೆ ಬೆಲೆಯಿಲ್ಲ!]

ನಾವು ಡಿಗ್ರಿ ಸ್ಟೂಡೆಂಟ್ಸ್...ನಾಟ್ ಬೆಗ್ಗರ್ಸ್..!

''ಇಂಗ್ಲೀಷ್ ಗೊತ್ತಿಲ್ಲದ ನಿರ್ಮಾಪಕರು ಬೇರೆ ಬೇರೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಅಂಬರೀಷ್ ಯಾವ ಅರ್ಥದಲ್ಲಿ 'ಬೆಗ್ಗರ್ಸ್' ಗಾದೆ ಹೇಳಿದ್ದಾರೆ ಅಂತ ಗೊತ್ತಿಲ್ಲ'' ಅಂತ ಇದೇ ವೇಳೆ ಟೇಶಿ ವೆಂಕಟೇಶ್ ಗುಡುಗಿದರು.

ಮಧ್ಯ ಪ್ರವೇಶಿಸಿದ ಸಚಿವ ರೋಷನ್ ಬೇಗ್

ನಿರ್ಮಾಪಕರು ಮತ್ತು ಕಲಾವಿದರ ನಡುವೆ ಭುಗಿಲೆದ್ದಿರುವ ವಿವಾದವನ್ನ ಬಗೆಹರಿಸುವುದಕ್ಕೆ ಕರ್ನಾಟಕ ಸರ್ಕಾರ ಮಧ್ಯ ಪ್ರವೇಶಿಸಿದೆ. ವಾರ್ತಾ ಸಚಿವ ರೋಷನ್ ಬೇಗ್, ಇಂದು ವಾಣಿಜ್ಯ ಮಂಡಳಿಗೆ ಆಗಮಿಸಿ ಧರಣಿ ನಿರತ ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದರು. ಸದ್ಯದಲ್ಲೇ ಸಿ.ಎಂ. ನೇತೃತ್ವದಲ್ಲಿ ನಿರ್ಮಾಪಕರ ಸಂಘದ ಸಭೆ ನಡೆಸಲಿದ್ದು, ಎಲ್ಲಾ ಸಮಸ್ಯೆಗಳನ್ನ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಧರಣಿಯನ್ನ ನಿರ್ಮಾಪಕರು ವಾಪಸ್ ಪಡೆದಿದ್ದಾರೆ.

English summary
Kannada Film Producers created a havoc in Film Chamber today (June 17) after Ambareesh made a statement referring Producers as 'Beggars'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada