For Quick Alerts
  ALLOW NOTIFICATIONS  
  For Daily Alerts

  ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸೂಪರ್ ಹಿಟ್ 'ಅಂತ' ರೀ-ರಿಲೀಸ್.!

  |
  ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸೂಪರ್ ಹಿಟ್ 'ಅಂತ' ರೀ-ರಿಲೀಸ್.! | FILMIBEAT KANNADA

  80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಚಿತ್ರ 'ಅಂತ'. 1981ರಲ್ಲಿ ಬಿಡುಗಡೆಯಾಗಿದ್ದ 'ಅಂತ' ಚಿತ್ರಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಿದ್ದರು. ರೆಬೆಲ್ ಸ್ಟಾರ್ ಅಂಬರೀಶ್ ಇನ್ಸ್ ಪೆಕ್ಟರ್ ಸುಶೀಲ್ ಕುಮಾರ್ ಪಾತ್ರದ ಮೂಲಕ ನಾಡಿನ ಜನತೆಯಲ್ಲಿ ದೇಶಾಭಿಮಾನದ ಕಿಚ್ಚು ಹಚ್ಚಿಸಿದ್ದರು.

  ಅಲ್ಲದೇ, 'ಕನ್ವರ್ ಲಾಲ್' ಎಂಬ ನೆಗೆಟಿವ್ ಪಾತ್ರವನ್ನು ಕೂಡ 'ಅಂತ' ಚಿತ್ರದಲ್ಲಿ ಅಂಬರೀಶ್ ನಿರ್ವಹಿಸಿದ್ದರು. 'ಕುತ್ತೇ ಕನ್ವರ್ ನಹೀ.... ಕನ್ವರ್ ಲಾಲ್ ಬೋಲೋ..' ಡೈಲಾಗ್ ನ ಯಾರು ತಾನೇ ಮರೆಯಲು ಸಾಧ್ಯ ಹೇಳಿ.?

  ಅಂಬರೀಶ್ ಅಭಿನಯಿಸಿದ್ದ 'ಕನ್ವರ್ ಲಾಲ್' ಪಾತ್ರ ಮತ್ತೊಂದು ಚಿತ್ರದ ನಿರ್ಮಾಣಕ್ಕೂ ಕಾರಣವಾಯಿತು. 'ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾದ ಹೆಚ್.ಕೆ.ಅನಂತರಾವ್ ಅವರ ಕಾದಂಬರಿಯನ್ನಾಧರಿಸಿ ನಿರ್ಮಾಣವಾದ 'ಅಂತ' ಚಿತ್ರ ಇದೀಗ ನೂತನ ತಂತ್ರಜ್ಞಾನದೊಂದಿಗೆ ನಿಮ್ಮ ಮುಂದೆ ಬರಲಿದೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  38 ವರ್ಷಗಳ ನಂತರ ಮರು ಬಿಡುಗಡೆ

  38 ವರ್ಷಗಳ ನಂತರ ಮರು ಬಿಡುಗಡೆ

  ಬರೋಬ್ಬರಿ 38 ವರ್ಷಗಳ ನಂತರ 'ಅಂತ' ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ನೂತನ ತಂತ್ರಜ್ಞಾನದೊಂದಿಗೆ ಸದ್ಯದಲ್ಲೇ 'ಅಂತ' ಸಿನಿಮಾ ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ.

  ಖ್ಯಾತ ಕಾದಂಬರಿಕಾರ ಅನಂತರಾವ್ ಪುನರಾಗಮನ

  ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದ ಚಿತ್ರ

  ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದ ಚಿತ್ರ

  ಪರಿಮಳ ಆರ್ಟ್ ಮೂಲಕ ಹೆಚ್.ಎನ್.ಮಾರುತಿ ಹಾಗೂ ವೇಣುಗೋಪಾಲ್ ಈ ಚಿತ್ರವನ್ನು ನಿರ್ಮಿಸಿದ್ದರು. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ಜಿ.ಕೆ.ವೆಂಕಟೇಶ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದ 'ಅಂತ' ಚಿತ್ರದ ಸುಮಧುರ ಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ನಿಂತಿವೆ. ಈ ಚಿತ್ರವನ್ನು ಈಗ ಡಿಜಿಟಲ್ ಫಾರ್ಮಾಟ್ ನಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

  'ಕನ್ವರ್ ಲಾಲ್'ನಿರೀಕ್ಷೆಯಲ್ಲಿ ಪ್ರಿಯಾಮಣಿ

  ನೂರಕ್ಕೂ ಹೆಚ್ಚು ಥಿಯೇಟರ್ ನಲ್ಲಿ ರೀ-ರಿಲೀಸ್

  ನೂರಕ್ಕೂ ಹೆಚ್ಚು ಥಿಯೇಟರ್ ನಲ್ಲಿ ರೀ-ರಿಲೀಸ್

  ಸದ್ಯ ಲಹರಿ ರೆಕಾರ್ಡಿಂಗ್ ಬಳಿ ಈ ಚಿತ್ರದ ಹಕ್ಕುಗಳಿದ್ದು, ಲಹರಿ ಸಂಸ್ಥೆಯ ಮುಖಾಂತರ ದೀಪಕ್ ಪಿಕ್ಚರ್ಸ್ ಹಾಗೂ ಶ್ರೀನಿವಾಸ ಪಿಕ್ಚರ್ಸ್(ಗದಗ) ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಶೀಘ್ರದಲ್ಲೇ ಹೊಸ ರೂಪದ 'ಅಂತ' ಚಿತ್ರವನ್ನು ರಾಜ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ನಿರ್ಮಾಪಕ ವೇಣುಗೋಪಾಲ್ ತಿಳಿಸಿದ್ದಾರೆ.

  ಅಂತ 'ಕನ್ವರ್ ಲಾಲ್'ನಾಗಿ ಕಿಚ್ಚ ಸುದೀಪ್

  ಅಂಬಿ ದ್ವಿಪಾತ್ರದಲ್ಲಿ ಅಭಿನಯದ ಚಿತ್ರ

  ಅಂಬಿ ದ್ವಿಪಾತ್ರದಲ್ಲಿ ಅಭಿನಯದ ಚಿತ್ರ

  'ಅಂತ' ಚಿತ್ರದ ಪ್ರಮುಖ ತಾರಾಗಣದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ (ದ್ವಿಪಾತ್ರ) ಲಕ್ಷ್ಮಿ, ಜಯಮಾಲಾ, ಲತಾ, ಪಂಡರೀಬಾಯಿ, ವಜ್ರಮುನಿ, ಪ್ರಭಾಕರ್, ಸುಂದರ ಕೃಷ್ಣ ಅರಸ್, ಶಕ್ತಿ ಪ್ರಸಾದ್, ಲಕ್ಷ್ಮಣ್, ಸಿ.ಸೀತಾರಾಮ್ ನಟಿಸಿದ್ದರು.

  English summary
  Late Actor Rebel Star Ambareesh starrer Super Hit movie 'Anta' to re-release with latest technology.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X