For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ಅಪಘಾತ ನೋಡಿ ಜೀವ ಬಿಟ್ಟರಾ ಅಂಬರೀಶಣ್ಣಾ.?

  |
  Ambareesh, Kannada Actor Demise : ಮಂಡ್ಯ ಬಸ್ ಅಪಘಾತದಿಂದ ನೋಡು ಜೀವ ಬಿಟ್ರಾ ಅಂಬರೀಶ್? | FILMIBEAT KANNADA

  ಮಂಡ್ಯ, ನವೆಂಬರ್ 24: ನಟ, ರಾಜಕಾರಣಿ ಕನ್ನಡ ಸಿನಿ ಮನಸ್ಸುಗಳ ಹೃದಯ ಸಾಮ್ರಾಟ ಅಂಬರೀಶ್ ಇನ್ನಿಲ್ಲ.

  ಬರ ಸಿಡಿಲಿನಂತೆ ಈ ಸುದ್ದಿ ಅಪ್ಪಳಿಸಿದೆ. ಸಂಜೆಯಷ್ಟೆ ಮಂಡ್ಯದ ಅಪಘಾತ ಸುದ್ದಿ ಕೇಳಿ ವಿಲ ವಿಲ ಒದ್ದಾಡಿದ್ದ ಅಂಬರೀಶ್ ಅದೇ ನೋವಿನಲ್ಲಿ ಪ್ರಾಣ ತ್ಯಜಿಸಿದ್ದಾರೆ ಎನ್ನುತ್ತಿದ್ದಾರೆ ಅವರ ಆಪ್ತರು.

  ಅಂಬರೀಶ್ ಅವರು ಮಂಡ್ಯದ ಕನಗನವಾಡಿ ಅಪಘಾತದ ಬಗ್ಗೆ ಬಹುವಾಗಿ ಬೇಸರಗೊಂಡಿದ್ದರು ಎಂದಿದ್ದಾರೆ ಅವರ ಆಪ್ತರು. ಸುದ್ದಿವಾಹಿನಿಗಳೊಂದಿಗೆ ಅಪಘಾತದ ಬಗ್ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಕೂಡ ಅವರು ಗದ್ಗದಿತವಾಗಿಯೇ ಮಾತನಾಡಿದ್ದರು.

  ಕನಗನವಾಡಿ ಬಸ್ ಅಪಘಾತ ಆದ ಕೆಲವೇ ಗಂಟೆಗಳ ನಂತರ ಅವರಿಗೆ ಆರೋಗ್ಯದಲ್ಲಿ ವ್ಯತ್ಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಸಹ ತಮ್ಮ ಮಂಡ್ಯದ ಜನತೆಯ ಜೊತೆಗೆ ಇಹಲೋಕ ತ್ಯಜಿಸಿದರು.

  ಈಗಾಗಲೇ ವಿಕ್ರಂ ಆಸ್ಪತ್ರೆಯ ಬಳಿ ಅಂಬರೀಶ್ ಅವರ ಸಾಕಷ್ಟು ಅಭಿಮಾನಿಗಳು ಸೇರಿದ್ದಾರೆ. ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.

  English summary
  Ambareesh Passed away today in Vikram hospital. His close aid said that, he was upset about Mandya bus accident which happen today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X