For Quick Alerts
  ALLOW NOTIFICATIONS  
  For Daily Alerts

  ಯಶ್-ರಾಧಿಕಾ ಮುದ್ದು ಮಗಳಿಗೆ ಅಂಬಿ ಆರ್ಡರ್ ಕೊಟ್ಟಿದ್ದ ಉಡುಗೊರೆ ರೆಡಿ

  |
  ಯಶ್-ರಾಧಿಕಾ ಮುದ್ದು ಮಗಳಿಗೆ ಅಂಬಿ ಆರ್ಡರ್ ಕೊಟ್ಟಿದ್ದ ಉಡುಗೊರೆ ರೆಡಿ..! | FILMIBEAT KANNADA

  ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಇಹಲೋಕ ತ್ಯಜಿಸುವ ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಯಶ್ ಪತ್ನಿ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯಶ್-ರಾಧಿಕಾ ಪಂಡಿತ್ ಮಗುವಿಗೆ ವಿಶೇಷವಾದ ತೊಟ್ಟಿಲನ್ನು ಅಂಬರೀಶ್ ಆರ್ಡರ್ ಮಾಡಿದ್ದರು. ಆ ತೊಟ್ಟಿಲು ಇದೀಗ ರೆಡಿಯಾಗಿದೆ.

  ಉತ್ತರ ಕರ್ನಾಟಕದ ಕಿತ್ತೂರು ಕಲ್ಮಠದಲ್ಲಿ ತೊಟ್ಟಿಲು ಸಿದ್ಧಗೊಂಡಿದ್ದು, ಅದಕ್ಕೆ ವಿಶೇಷ ಪೂಜೆ ಸಲ್ಲಿಸಿ ಅಂಬರೀಶ್ ಮನೆಗೆ ಕಳುಹಿಸಿಕೊಡಲಾಗಿದೆ.

  ಯಶ್-ರಾಧಿಕಾ ಮಗುವಿಗೆ ಅಂಬರೀಶ್ ಬುಕ್ ಮಾಡಿದ್ರಂತೆ ಭರ್ಜರಿ ಗಿಫ್ಟ್.!

  ಬೆಳಗಾವಿ ಮೂಲದ ಉದ್ಯಮಿ ನಾರಾಯಣ್ ಕಲಾಲ್ ಎಂಬುವರ ಬಳಿ ತೊಟ್ಟಿಲಿಗಾಗಿ ಅಂಬರೀಶ್ ಆರ್ಡರ್ ಮಾಡಿದ್ದರು. ಬಳಿಕ ಕಲಘಟಗಿಯ ಸಾಹುಕಾರ್ ಕುಟುಂಬ ವಿಶಿಷ್ಟವಾದ ತೊಟ್ಟಿಲನ್ನು ಮೂರು ತಿಂಗಳಲ್ಲಿ ಸಿದ್ಧಪಡಿಸಿದ್ದಾರೆ.

  ಪ್ರಾಚೀನ ಶೈಲಿಯಲ್ಲಿ ತೊಟ್ಟಿಲು ಸಿದ್ಧಗೊಂಡಿದ್ದು, ಸಾವಯವ ಬಣ್ಣಗಳಿಂದ ಪೇಂಟಿಂಗ್ ಮಾಡಲಾಗಿದೆ. ತೊಟ್ಟಿಲು ಸುತ್ತಲೂ ವಿಷ್ಣುವಿನ ದಶಾವತಾರಗಳ ಚಿತ್ರ ಬಿಡಿಸಲಾಗಿದೆ.

  ಅಂಬರೀಶ್ ನೀಡಿದ ಉಡುಗೊರೆ ಬಗ್ಗೆ ಯಶ್ ಭಾವುಕ ನುಡಿ

  ಸಾಗವಾನಿ ಕಟ್ಟಿಗೆಯಿಂದ ತಯಾರಾಗಿರುವ ಈ ತೊಟ್ಟಿಲಿಗೆ 1 ಲಕ್ಷದ 20 ಸಾವಿರ ರೂಪಾಯಿ ಖರ್ಚಾಗಿದೆ. ಇಂತಹ ಅದ್ಧೂರಿ ಉಡುಗೊರೆ ಯಶ್-ರಾಧಿಕಾ ಪಂಡಿತ್ ಪುತ್ರಿ ಪಾಲಾಗಲಿದೆ.

  ಇಂದು ಅಥವಾ ನಾಳೆ ತೊಟ್ಟಿಲು ಅಂಬರೀಶ್ ಮನೆ ಸೇರಲಿದ್ದು, ಅಲ್ಲಿಂದ ಅದು ರಾಧಿಕಾ ಪಂಡಿತ್ ಕೈಸೇರಲಿದೆ. ಅಂಬರೀಶ್ ಜೀವಿತಾವಧಿಯ ಕಟ್ಟಕಡೆಯ ಉಡುಗೊರೆ ಪಡೆದ ಯಶ್-ರಾಧಿಕಾ ಪುತ್ರಿಯೇ ಅದೃಷ್ಟವಂತೆ.

  English summary
  Ambareesh's gift for Yash-Radhika Pandit daughter is ready.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X