»   »  ರೋಮಿಯೋ ಡ್ಯಾನ್ಸ್ ಮಾಡಿದ ಅಂಬರೀಶ್-ಮಾಲಾಶ್ರೀ

ರೋಮಿಯೋ ಡ್ಯಾನ್ಸ್ ಮಾಡಿದ ಅಂಬರೀಶ್-ಮಾಲಾಶ್ರೀ

Posted By:
Subscribe to Filmibeat Kannada

ತಿಂಗಳ ಕೊನೆಯಲ್ಲಿ ತೆರೆಗೆ ಬರುತ್ತಿರುವ 'ಉಪ್ಪು ಹುಳಿ ಖಾರ' ಸಿನಿಮಾದ ಮಾಲಾಶ್ರೀ ಇಂಟ್ರೊಡಕ್ಷನ್ ಟೀಸರ್ ಇಂದು ಬಿಡುಗಡೆಯಾಗಿದೆ. ಈ ಟೀಸರ್ ನ ರೆಬೆಲ್ ಸ್ಟಾರ್ ಅಂಬರೀಶ್ ಬಿಡುಗಡೆ ಮಾಡಿದ್ದಾರೆ. ಟೀಸರ್ ಲಾಂಚ್ ಮಾಡುವುದರ ಜೊತೆಯಲ್ಲಿ ಮಾಲಾಶ್ರೀ ಜೊತೆ ಅಂಬಿ ರೋಮಿಯೋ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.

ಹದಿನಾರು ವರ್ಷದ ನಂತರ ಮತ್ತೆ ಅಂಬರೀಶ್ ಹಾಗೂ ಮಾಲಾಶ್ರೀ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ಸಿನಿಮಾದ ಟೀಸರ್ ರಿಲೀಸ್ ಮಾಡಿ ಶುಭಾಶಯ ಕೋರುವುದರ ಜೊತೆಯಲ್ಲಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿ 'ಉಪ್ಪು ಹುಳಿ ಖಾರ' ಸಿನಿಮಾಗೆ ಪ್ರಮೋಷನ್ ಕೂಡ ಮಾಡಿದ್ದಾರೆ ಅಂಬರೀಶ್.

 ambarish and malashri dance for romeo song

ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಇದೇ ತಿಂಗಳ 24 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದ್ದು ಅನುಶ್ರೀ, ಮಾಲಾಶ್ರೀ, ಜಯಶ್ರೀ, ಶರತ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ರೋಮಿಯೋ ಹಾಡು ಈಗಾಗಲೇ ಸಖತ್ ವೈರಲ್ ಆಗಿದ್ದು ಅಂಬಿ ಕೂಡ ಆ ಹಾಡಿಗೆ ಹೆಜ್ಜೆ ಹಾಕಿರೋದು ಅಭಿಮಾನಿಗಳಿಗೆ ಖುಷಿ ತಂದಿದೆ.

English summary
Rebel Star Ambareesh dance for 'Uppu Huli Khara' movie Romeo song with Malashree.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X