ಸಂಭಾವನೆ ಪಡೆಯದೇ ಕೆಲಸ ಮುಗಿಸಿಕೊಟ್ಟ ಅಂಬರೀಶ್: ಮುನಿರತ್ನ

Recommended Video

Kurukshetra Movie: ಅಂಬರೀಶ್ ಬಗ್ಗೆ ಅಚ್ಚರಿಯ ವಿಷ್ಯವನ್ನ ಬಿಚ್ಚಿಟ್ಟ ಮುನಿರತ್ನ | FILMIBEAT KANNADA

ರೆಬೆಲ್ ಸ್ಟಾರ್ ಅಂಬರೀಶ್ ಅವರ ಕೊನೆಯ ಸಿನಿಮಾ ಕುರುಕ್ಷೇತ್ರ ಬಿಡುಗಡೆಗೆ ಸಜ್ಜಾಗಿದೆ. ದರ್ಶನ್ ದುರ್ಯೋಧನನಾಗಿ ನಟಿಸಿರುವ ಈ ಚಿತ್ರದಲ್ಲಿ ಅಂಬರೀಶ್ ಭೀಷ್ಮನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ ಅಂಬಿ ಇದ್ದಾಗಲೇ ಈ ಚಿತ್ರ ತೆರೆಕಾಣಬೇಕಿತ್ತು. ಆದ್ರೆ, ಪೋಸ್ಟ್ ಪ್ರೊಡಕ್ಷನ್ ಕೆಲಸದ ವಿಳಂಬದಿಂದ ಸಾಧ್ಯವಾಗಿರಲಿಲ್ಲ.

ಈಗ ಆಗಸ್ಟ್ 9 ರಂದು ಕುರುಕ್ಷೇತ್ರ ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ. ವಿಶೇಷ ಅಂದ್ರೆ ಅಂಬರೀಶ್ ಅವರು ಈ ಸಿನಿಮಾದಲ್ಲಿ ಸಂಭಾವನೆ ಪಡೆಯದೇ ನಟಿಸಿದ್ದಾರಂತೆ. ಹೀಗಂತ ಸ್ವತಃ ನಿರ್ಮಾಪಕ ಮುನಿರತ್ನ ಅವರೇ ಬಹಿರಂಗಪಡಿಸಿದ್ದಾರೆ.

'ಭೀಷ್ಮನ ಪಾತ್ರವನ್ನ ಅಂಬರೀಶ್ ಅವರಿಂದಲೇ ಮಾಡಿಸಬೇಕು ಎಂಬ ಆಸೆ ನನಗಿತ್ತು. ಆರಂಭದಲ್ಲಿ ಅವರು ಒಪ್ಪಿಲಿಲ್ಲ. ನನ್ನಿಂದ ಕಷ್ಟವಾಗುತ್ತೆ, ಮಾಡೋಕೆ ಆಗಲ್ಲ ಎಂದಿದ್ದರು. ನಂತರ ಒತ್ತಾಯಕ್ಕೆ ಮಣಿದು ನಟಿಸಲು ಒಪ್ಪಿಕೊಂಡರು' ಎಂದು ಮುನಿರತ್ನ ತಿಳಿಸಿದರು.

Ambarish did not taken remuneration for kurukshetra

ಮಾತು ಮುಂದುವರಿಸಿದ ನಿರ್ಮಾಪಕ 'ಸುಮಾರು 15 ರಿಂದ 20 ದಿನಗಳ ಕಾಲ ಅಂಬರೀಶ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಡಬ್ಬಿಂಗ್ ಮಾಡುವಾಗಲು ಅಷ್ಟೇ, ತಾವಾಗಿಯೇ ಫೋನ್ ಮಾಡಿ ನಾನು ಡಬ್ಬಿಂಗ್ ಮಾಡ್ತೀನಿ, ರೆಡಿ ಮಾಡ್ಕೊಳ್ಳಿ ಎಂದು ಹೇಳಿದ್ರು. ನಾವು ಈಗಲೇ ಬೇಡ, 3ಡಿ ಕೆಲಸ ಮುಗಿಸಲಿ ಇಷ್ಟು ಬೇಗ ಯಾಕೆ ಎಂದ್ವಿ. ಅದ್ಯಾಕೋ ಅವರೇ ನಿರ್ಧಾರ ಮಾಡಿ 2 ದಿನ ಡಬ್ಬಿಂಗ್ ಮಾಡಿದ್ರು'' ಎಂದರು.

ಕುರುಕ್ಷೇತ್ರ ಸಿನಿಮಾ ನೋಡಿದ ಮೇಲೆ ಅಂಬರೀಶ್ ಅವರ ಪಾತ್ರ ತುಂಬಾ ಚೆನ್ನಾಗಿ ಬಂದಿದೆ. ಅವರಿಲ್ಲ ಎಂಬ ಬೇಸರದಲ್ಲಿ ಈ ಸಿನಿಮಾ ತೆರೆಗೆ ಬರ್ತಿದೆ. ಅದೊಂದು ನೋವು ನಮ್ಮನ್ನ ಕಾಡುತ್ತಿದೆ ಎಂದು ಮುನಿರತ್ನ ಬೇಸರ ಹಂಚಿಕೊಂಡರು.

More from Filmibeat

English summary
Rebel star Ambarish did not taken remuneration for kurukshetra movie. he was acted in bhishma role in this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X