»   » ಕನ್ನಡ ಚಿತ್ರೋದ್ಯಮ ಬಂದ್ ಗೆ ಅಂಬರೀಶ್ ಸಾರಥ್ಯ

ಕನ್ನಡ ಚಿತ್ರೋದ್ಯಮ ಬಂದ್ ಗೆ ಅಂಬರೀಶ್ ಸಾರಥ್ಯ

Posted By:
Subscribe to Filmibeat Kannada
Ambarish
ರಾಜ್ಯದ ಜನರ, ರೈತರ ಹಿತವನ್ನು ಬಲಿಕೊಟ್ಟು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಅಕ್ಟೋಬರ್ 6ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಕನ್ನಡ ಚಿತ್ರೋದ್ಯಮವೂ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದೆ.

ಕಲಾವಿದರ ಸಂಘದ ಅಧ್ಯಕ್ಷರಾದ ಅಂಬರೀಶ್ ಅವರ ನೇತೃತ್ವದಲ್ಲಿಇಡೀ ಚಲನಚಿತ್ರೋದ್ಯಮವು ವಾಣಿಜ್ಯ ಮಂಡಳಿ ಮುಂಭಾಗದಿಂದ ಬೆಳಗ್ಗೆ 11.30 ಗಂಟೆಗೆ ಸೇರಿ ಮೌನ ಪಾದಯಾತ್ರೆ ನಡೆಸಲಿದೆ. ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿ ಚಿತ್ರೋದ್ಯಮದ ಮನವಿಯನ್ನು ಸಲ್ಲಿಸಲಾಗುತ್ತದೆ.

ಚಲನಚಿತ್ರ ಚಿತ್ರೀಕರಣ, ಪ್ರದರ್ಶನ ಹಗೂ ಚಿತ್ರೋದ್ಯಮಕ್ಕೆ ಸಂಬಂಧಪಟ್ಟ ಎಲ್ಲಾ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತವಾಗಲಿವೆ. ಬಂದ್ ನಲ್ಲಿ ಕಲಾವಿದರು, ನಿರ್ಮಾಪಕರು, ವಿತರಕರು, ಪ್ರದರ್ಶಕರು, ನಿರ್ದೇಶಕರು, ಕಾರ್ಮಿಕರು, ತಂತ್ರಜ್ಞರು ಸೇರಿದಂತೆ ಚಿತ್ರೋದ್ಯಮದ ಎಲ್ಲಾ ಬಂಧುಗಳು ಭಾಗಿಯಾಗಲಿದ್ದಾರೆ.

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ, ಅಖಿಲ ಕರ್ನಾಟಕ ಚಲನಚಿತ್ರ ವಿತರಕರ ಸಂಘ, ತೆಲುಗು ಚಲನಚಿತ್ರ ವಿತರಕರ ಸಂಘ, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳ...

ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟ, ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ, ಕರ್ನಾಟಕ ಚಲನಚಿತ್ರ ಸಂಗೀತಗಾರರ ಸಂಘ ಸೇರಿದಂತೆ ಇತರೆ ಅಂಗ ಸಂಸ್ಥೆಗಳು ಭಾಗಿಯಾಗಲಿವೆ. (ಒನ್ಇಂಡಿಯಾ ಕನ್ನಡ)

English summary
Rebel Star Ambarish heads Kannada film industry's Bandh on 6th October in protest against against the Prime Minister’s directive to the State to release 9,000 cusecs of water every day to Tamil Nadu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada