For Quick Alerts
  ALLOW NOTIFICATIONS  
  For Daily Alerts

  ಅಂಬಿ ಪುಣ್ಯ ತಿಥಿ: ಚಿತ್ರರಂಗದ ಕರ್ಣನನ್ನು ನೆನೆದ ಕಿಚ್ಚ

  |

  Recommended Video

  ಅಂಬಿ ಪುಣ್ಯ ತಿಥಿ: ಚಿತ್ರರಂಗದ ಕರ್ಣನನ್ನು ನೆನೆದ ಕಿಚ್ಚ | FILMIBEAT KANNADA

  ನಟ, ರೆಬಲ್ ಸ್ಟಾರ್ ಅಂಬರೀಶ್ ಅವರ ಮೊದಲ ವರ್ಷದ ಪುಣ್ಯ ತಿಥಿಯನ್ನು ಇಂದು (ನವೆಂಬರ್ 14) ನೆರವೇರಿಸಲಾಗಿದೆ. ಅಂಬರೀಶ್ ಬಗ್ಗೆ ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.

  ''ರೆಬಲ್ ಸ್ಟಾರ್ ರನ್ನು ಎಂದಿಗೂ ಮಿಸ್ ಮಾಡಿಕೊಳ್ಳುತ್ತೇನೆ. ಎಂದಿಗೂ ನೆನಪಿನಲ್ಲಿ ಇಟ್ಟಿಕೊಳ್ಳುತ್ತೇನೆ. ಅವರು ಯಾವಾಗಲೂ ನಮ್ಮ ಜೊತೆಗೆ ಇದ್ದ ಹಾಗೆ ಆಗುತ್ತದೆ. ಅವರು ಒಬ್ಬ ನಾಯಕ. ಬದಲಿಸಲಾಗದ ನಾಯಕ. ಲವ್ ಯೂ ಫಾರ್ ಎವರ್ ಮಾಮ.'' ಎಂದು ಟ್ವಿಟ್ಟರ್ ಖಾತೆಯಲ್ಲಿ ಸುದೀಪ್ ಬರೆದುಕೊಂಡಿದ್ದಾರೆ.

  ಅಂಬಿ ವರ್ಷದ ಪುಣ್ಯ ತಿಥಿ: ಸುಮಲತಾ, ಅಭಿ ಜೊತೆ ದರ್ಶನ್ ಭಾಗಿಅಂಬಿ ವರ್ಷದ ಪುಣ್ಯ ತಿಥಿ: ಸುಮಲತಾ, ಅಭಿ ಜೊತೆ ದರ್ಶನ್ ಭಾಗಿ

  ಅಂಬರೀಶ್ ಮರೆಯಾಗಿ ವರ್ಷಗಳು ಕಳೆದರೂ, ಆ ದುಃಖದಿಂದ ಸುದೀಪ್ ಈಗಲೂ ಆಚೆ ಬಂದಿಲ್ಲ. ಸುದೀಪ್ ಜೊತೆ ಕೊನೆಯದಾಗಿ ಅಂಬರೀಶ್ ನಟಿಸಿದ ಸಿನಿಮಾ 'ಅಂಬಿ ನಿಂಗೆ ವಯಸ್ಸಾಯ್ತೋ'. ಈ ಸಿನಿಮಾದ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಸುದೀಪ್ ನಮನ ಸಲ್ಲಿಸಿದ್ದಾರೆ.

  ಅಂಬರೀಶ್ ಗೆ ಬಹಳ ಹತ್ತಿರ ಆಗಿದ್ದ ಚಿತ್ರರಂಗದ ಕಲಾವಿದರಲ್ಲಿ ಸುದೀಪ್ ಕೂಡ ಒಬ್ಬರು. ಬಾಲ್ಯದಿಂದ ಅಂಬರೀಶ್ ಜೊತೆಗೆ ಸುದೀಪ್ ಒಡನಾಡ ಇತ್ತು. ತಮ್ಮ ಕುಟುಂಬದ ಹಿರಿಯಣ್ಣನಂತೆ ಅಂಬರೀಶ್ ಇದ್ದರು.

  ಅಂಬಿ ಸಮಾಧಿಗೆ ನಮನ ಸಲ್ಲಿಸಿದ ದರ್ಶನ್, ಸುಮಲತಾಅಂಬಿ ಸಮಾಧಿಗೆ ನಮನ ಸಲ್ಲಿಸಿದ ದರ್ಶನ್, ಸುಮಲತಾ

  ಅಂದಹಾಗೆ, ಇಂದು ಅಂಬರೀಶ್ ವರ್ಷದ ತಿಥಿ ಕಾರ್ಯ ನೆರವೇರಿಸಲಾಯಿತು. ನಟ ದರ್ಶನ್, ಪತ್ನಿ ಸುಮಲತಾ ಪುತ್ರ ಅಭಿಷೇಕ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಸಮಾಧಿಗೆ ಪೂಜೆ ಸಲ್ಲಿಸಿದರು.

  English summary
  Rebel star Ambarish's 1st year death anniversary. Ambarish is irreplaceable leader says Sudeep
  Thursday, November 14, 2019, 17:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X