»   » ಇದೇ ಮೊದಲ ಬಾರಿಗೆ ಪುನೀತ್ ಜೊತೆ ಅಂಬರೀಶ್

ಇದೇ ಮೊದಲ ಬಾರಿಗೆ ಪುನೀತ್ ಜೊತೆ ಅಂಬರೀಶ್

Posted By:
Subscribe to Filmibeat Kannada

ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ 'ದೊಡ್ಮನೆ ಹುಡುಗ' ಚಿತ್ರಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಎಂಟ್ರಿಕೊಡುತ್ತಿದ್ದಾರೆ. ಚಿತ್ರದಲ್ಲಿ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ತಂದೆಯಾಗಿ ಅಭಿನಯಿಸಲಿದ್ದಾರೆ.

'ಬುಲ್ ಬುಲ್ 'ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ತಂದೆಯಾಗಿ ಹಾಗೂ 'ವೀರ ಪರಂಪರೆ' ಚಿತ್ರದಲ್ಲಿ ಸುದೀಪ್ ಅವರಿಗೆ ಸಾಕುತಂದೆಯಾಗಿ ಅಂಬರೀಶ್ ಅಭಿನಯಿಸಿದ್ದಾರೆ. ಇದೀಗ 'ದೊಡ್ಮನೆ ಹುಡುಗ' ಚಿತ್ರದಲ್ಲಿ ಅವರದು ಬಹು ಮುಖ್ಯಪಾತ್ರ ಎನ್ನಲಾಗಿದ್ದು ಪುನೀತ್ ಅವರಿಗೆ ತಂದೆಯಾಗಿ ಕಾಣಿಸಲಿದ್ದಾರೆ. [ಸೂರಿ, ಪುನೀತ್ ಸಂಗಮದ 'ದೊಡ್ಮನೆ ಹುಡುಗ' ಶುರು]

Puneeth, Ambarish

ಇದೇ ಮೊದಲ ಬಾರಿಗೆ ಪುನೀತ್ ಹಾಗೂ ಅಂಬರೀಶ್ ಜೊತೆಯಾಗಿ ಅಭಿನಯಿಸುತ್ತಿರುವುದು. ಸಭೆ ಸಮಾರಂಭಗಳಲ್ಲಿ ಪುನೀತ್ ಬಗ್ಗೆ ಮಾತನಾಡಬೇಕೆಂದರೆ ಅಂಬರೀಶ್ ಅವರು ನಮ್ಮ ಮನೆ ಮಗ, ನಮ್ಮೆಲ್ಲರ ಪ್ರೀತಿಯ ಮಗ ಎಂದೇ ಮಾತು ಆರಂಭಿಸುತ್ತಾರೆ. ಇದೀಗ ಅವರು ತೆರೆಯ ಮೇಲೆ ಅಪ್ಪ ಮಗನಾಗಿ ಅಭಿನಯಿಸುತ್ತಿರುವುದು ಅಭಿಮಾನಿಗಳ ಪಾಲಿಗೆ ಇನ್ನಷ್ಟು ಖುಷಿಯ ಸಂಗತಿ.

ಈ ಹಿಂದೆ 'ವಿಷ್ಣುಸೇನೆ' ಹಾಗೂ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರಗಳನ್ನು ನಿರ್ಮಿಸಿದ್ದ ಎಂ ಗೋವಿಂದು ಈ ಬಾರಿ 'ದೊಡ್ಮನೆ ಹುಡುಗ' ನಿರ್ಮಾಪಕರು. ಪುನೀತ್ ಜೊತೆಗಿನ ಪವನ್ ಒಡೆಯರ್ ಅವರ 'ರಣ ವಿಕ್ರಮ' ಚಿತ್ರ ಮುಗಿಯಬೇಕಿದೆ. ಈ ಚಿತ್ರವನ್ನು ಜಯಣ್ಣ ನಿರ್ಮಿಸುತ್ತಿದ್ದಾರೆ. ಅದಾದ ಬಳಿಕ ದೊಡ್ಮನೆ ಹುಡುಗನ ಚಿತ್ರೀಕರಣ ಶುರು. (ಏಜೆನ್ಸೀಸ್)

English summary
Rebel Star Ambarish and Power Star Puneeth Rajkumar together act in 'Dodmane Huduga' being directed by Soori. Ambarish to play Puneeth's father in the movie. This is the first time that Ambarish and Puneeth are acting together in a film.
Please Wait while comments are loading...