For Quick Alerts
  ALLOW NOTIFICATIONS  
  For Daily Alerts

  'ಪಾರ್ವತಮ್ಮ ಬೇಗ ಗುಣಮುಖರಾಗಲಿ' ಎಂದು ಪ್ರಾರ್ಥಿಸಿದ ಅಂಬರೀಶ್

  |

  ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಪಾರ್ವತಮ್ಮ ರಾಜ್ ಕುಮಾರ್ ರವರಿಗೆ ಇಂದು ಸಹ ಚಿಕಿತ್ಸೆ ಮುಂದುವರೆದಿದೆ.

  ಇವತ್ತು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಆಗಮಿಸಿದ ನಟ ಅಂಬರೀಶ್, ಹಿರಿಯ ನಟಿ ಬಿ.ಸರೋಜದೇವಿ ಮತ್ತು ನಿರ್ಮಾಪಕ ರಾಕ್ ಲೈಕ್ ವೆಂಕಟೇಶ್, ಪಾರ್ವತಮ್ಮ ಅವರ ಆರೋಗ್ಯ ವಿಚಾರಿಸಿದರು.

  ಆರೋಗ್ಯ ವಿಚಾರಿಸಿ ಬಂದ ಬಳಿಕ ಅಂಬರೀಶ್, ಪಾರ್ವತಮ್ಮ ಅವರ ಬಗ್ಗೆ ಮಾತನಾಡಿದ್ರು. ''ಅಣ್ಣಾವ್ರಿಗೆ ಕಲೆ ಬಿಟ್ಟು ಬೇರೇನೂ ಗೊತ್ತಿರಲಿಲ್ಲ. ಅವರಿಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಪಾರ್ವತಮ್ಮ ಅವರೇ ನೋಡಿಕೊಳ್ಳುತ್ತಿದ್ದರು. ಒಂದು ಹಳ್ಳಿಯಿಂದ ಬಂದ ಹೆಂಗಸು ರಾಜ್ ಕುಮಾರ್ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ ಅಂದ್ರೆ... ಅದು ದೇವರು ಅವರಿಗೆ ಕೊಟ್ಟಿರುವ ಆಶೀರ್ವಾದ. ಅವರ ಮನೆಯವರು ತಾಯಿ ಗುಣವಾಗಲಿ ಅಂತ ಎಷ್ಟು ಆಸೆ ಪಡುತ್ತಾರೋ, ನಾನು ಒಬ್ಬ ತಮ್ಮನಾಗಿ ಅಷ್ಟೇ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೇ'' ಅಂತ ಹೇಳಿದರು.

  ಹಿರಿಯ ನಟಿ ಬಿ.ಸರೋಜ ದೇವಿ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಹ ಇಂದು ಆಸ್ಪತ್ರೆಗೆ ಭೇಟಿ ನೀಡಿ ಪಾರ್ವತಮ್ಮ ಆರೋಗ್ಯ ವಿಚಾರಿಸಿದರು. ಸದ್ಯ ಪಾರ್ವತಮ್ಮ ಅವರು ವೆಂಟಿಲೇಟರ್ ಮೂಲಕ ಉಸಿರಾಟ ನೆಡೆಸುತ್ತಿದ್ದು, ಅವರಿಗೆ ದಿನಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಲಾಗುತ್ತಿದೆ.

  English summary
  Kannada Actor Ambareesh visited MS Ramaiah Hospital, Bengaluru today prayed for Parvathamma Rajkumar's speedy recovery.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X