ಅಂಬಿ ಹೆಸರಿನಲ್ಲಿ ಮಹತ್ವದ ಕೆಲಸಕ್ಕೆ ಮುಂದಾದ ಜಾಕ್ ಮಂಜು

ಅಂಬರೀಶ್ ಅವರ ನಿಧನದಿಂದ ಇಡೀ ಸ್ಯಾಂಡಲ್ ವುಡ್ ಚಿಂತೆಗೆ ಒಳಗಾಗಿದೆ. ಇಂಡಸ್ಟ್ರಿಗೆ ಮುಂದೆ ಯಾರು ದಿಕ್ಕು ಎಂದು ತಲೆಕೆಡಿಸಿಕೊಂಡಿದೆ. ಅಂಬಿಯ ಅಂತಿಮಯಾತ್ರೆಯಿಂದ ಇನ್ನೂ ಸುಧಾರಿಸಿಕೊಳ್ಳದ ಸಿನಿಮಾ ಕಲಾವಿದರು ಅಂಬಿ ನೆನಪಿಗಾಗಿ, ಅಂಬರೀಶ್ ಅವರಿಗಾಗಿ ಏನಾದರೂ ಒಳ್ಳೆಯ ಕೆಲಸ ಮಾಡ್ಬೇಕು ಅಂತ ಚಿಂತೆ ಮಾಡ್ತಿದ್ದಾರೆ.

ಅದರ ಮೊದಲ ಹೆಜ್ಜೆಯಾಗಿ ನಿರ್ಮಾಪಕ ವಿತರಕ ಜಾಕ್ ಮಂಜು ಒಂದೊಳ್ಳೆ ಕೆಲಸಕ್ಕೆ ಕೈಹಾಕಿದ್ದಾರೆ. ಮಂಡ್ಯದ ಗಂಡು ಅಂಬರೀಶ್ ಅವರ ಹೆಸರಿನಲ್ಲಿ ಮಂಡ್ಯದ ಜನರಿಗಾಗಿ ಸಹಾಯ ಮಾಡಲು ಮುಂದಾಗಿದ್ದಾರೆ.

ಅಂಬರೀಶ್ ಅಭಿನಯಿಸಿದ್ದ ಕೊನೆಯ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ಸುದೀಪ್ ಜೊತೆ ಸೇರಿ ನಿರ್ಮಾಪಕ ಜಾಕ್ ಮಂಜು ನಿರ್ಮಾಣ ಮಾಡಿದ್ದರು. ಅಷ್ಟಕ್ಕೂ, ಜಾಕ್ ಮಾಡ್ತಿರೋ ಆ ಒಳ್ಳೆಯ ಕೆಲಸವೇನು.? ಮುಂದೆ ಓದಿ....

ಅಂಬಿ ಸಿನಿಮಾ ರಿ-ರಿಲೀಸ್

ಅಂಬಿ ಸಿನಿಮಾ ರಿ-ರಿಲೀಸ್

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ಮತ್ತೆ ರಿ-ರಿಲೀಸ್ ಮಾಡ್ತಿದ್ದಾರೆ. ಬರುವ ಶುಕ್ರವಾರ ಅಂಬಿಯ ಕೊನೆಯ ಚಿತ್ರವನ್ನ ಮತ್ತೆ ಚಿತ್ರಮಂದಿರಕ್ಕೆ ತರಲಾಗುತ್ತಿದೆ. ಪ್ರಮುಖವಾಗಿ ಮೈಸೂರು ಮತ್ತು ಬೆಂಗಳೂರು ವಿಭಾಗದಲ್ಲಿ ಚಿತ್ರಮಂದಿರಗಳಲ್ಲಿ ಹೆಚ್ಚು ಮಂದಿ ನೋಡುವ ಅವಕಾಶ ಮಾಡಿಕೊಡಲಾಗುತ್ತಿದೆ. ಅದರ ಜೊತೆಗೆ ವಿದೇಶಗಳಲ್ಲಿ ಈ ಸಿನಿಮಾ ಬಿಡುಗಡೆಗೊಳಿಸಲು ಚಿಂತಿಸಲಾಗಿದೆ.

ಬಂದ ಹಣ ಬಸ್ ದುರಂತದಲ್ಲಿ ಮೃತಪಟ್ಟವರಿಗೆ

ಬಂದ ಹಣ ಬಸ್ ದುರಂತದಲ್ಲಿ ಮೃತಪಟ್ಟವರಿಗೆ

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ಮರುಬಿಡುಗಡೆ ಮಾಡುವ ಹಣದಿಂದ ಬರುವ ಪೂರ್ತಿ ಹಣವನ್ನ ಮಂಡ್ಯದ ಜನರಿಗೆ ನೀಡುವುದಾಗಿ ಜಾಕ್ ಮಂಜು ತಿಳಿಸಿದ್ದಾರೆ. ಇತ್ತೀಚಿಗಷ್ಟೆ ಮಂಡ್ಯದ ಕರಗನಮರಡಿ ಗ್ರಾಮದ ನಾಲೆಯಲ್ಲಿ ಬಸ್ ಉರುಳಿ 30 ಜನ ಮೃತಪಟ್ಟಿದ್ದರು. ಈ ಮೃತ ಕುಟುಂಬಗಳಿಗೆ ಅಂಬಿ ಸಿನಿಮಾದಿಂದ ಬಂದ ಹಣವನ್ನ ನೀಡುವುದಾಗಿ ಮಂಜು ಹೇಳಿದ್ದಾರೆ.

ಮಂಡ್ಯ ಬಸ್ ಅಪಘಾತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

ಬಸ್ ದುರಂತ ಕಂಡು ಮರುಗಿದ್ದ ಅಂಬಿ

ಬಸ್ ದುರಂತ ಕಂಡು ಮರುಗಿದ್ದ ಅಂಬಿ

ಪಾಂಡವಪುರದ ಕರಗನಮಡರಿ ಗ್ರಾಮದ ಬಳಿ ನಾಲೆಗೆ ಬಸ್ ಬಿದ್ದು ಮೂವತ್ತು ಜನ ಮೃತಪಟ್ಟ ಸುದ್ದಿ ಕೇಳಿದ್ದ ಅಂಬರೀಶ್ ಭಾರಿ ನೋವಿಗೆ ಒಳಗಾಗಿದ್ದರು. ಇದರಿಂದ ಹೆಚ್ಚು ಕೊರಗಿದ್ದರು. ನಮ್ಮ ಜನಕ್ಕೆ ಹೀಗಾಯಿತಲ್ಲಾ ಎಂದು ಕಣ್ಣೀರಿಟ್ಟಿದ್ದರು. ಸ್ವತಃ ಈ ಬಗ್ಗೆ ಮಾಧ್ಯಮಗಳಲ್ಲಿ ತಾವೇ ಖುದ್ದು ಫೋನ್ ಮಾಡಿ ಮಾತನಾಡಿದ್ದರು.

ದುರಂತದ ದಿನವೇ ಅಂಬಿ ಸಾವು

ದುರಂತದ ದಿನವೇ ಅಂಬಿ ಸಾವು

ಬಸ್ ದುರಂತ ಕಂಡು ಮರುಗಿದ್ದ ಅಂಬಿ ಮಾನಸಿಕವಾಗಿ ನೊಂದಿದ್ದರು. ಈ ಬಗ್ಗೆ ಮಾಧ್ಯಮಗಳ ಜೊತೆ ತುಂಬಾ ಭಾವುಕರಾಗಿ ಮಾತನಾಡಿದ್ದರು. ದುರದೃಷ್ಟವಶಾತ್ ಅಂದ್ರೆ. ಮಾತನಾಡಿದ ಕೆಲವೇ ಗಂಟೆಗಳಲ್ಲಿ ಅಂದ್ರೆ, ಅಂದು ರಾತ್ರಿಯೇ ಅಂಬರೀಶ್ ನಿಧನರಾಗಿದ್ದು ನಿಜಕ್ಕೂ ದುರ್ದೈವ.

More from Filmibeat

English summary
Audiences will get to see the Jaleela’s act once again as Ambareesh’s last film, Ambi Ning Vayassaytho, which hit screens on September 27, gets an on-demand re-release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X