»   »  ಹೀಗೂ ಉಂಟೆ?: ಪೆಪ್ಸಿಗೆ ಗುಡ್ ಬೈ ಹೇಳಿದ ಅಮಿತಾಬ್

ಹೀಗೂ ಉಂಟೆ?: ಪೆಪ್ಸಿಗೆ ಗುಡ್ ಬೈ ಹೇಳಿದ ಅಮಿತಾಬ್

Posted By:
Subscribe to Filmibeat Kannada

ಜೈಪುರ, ಫೆ. 3: ಹೀಗೂ ಉಂಟೆ? ಎಂದು ಆಶ್ಚರ್ಯ ಚಕಿತರಾಗುವಷ್ಟು ಬಾಲಿವುಡ್ ಬಾದ್ ಷಾ ಅಮಿತಾಬ್ ಬಚ್ಚನ್ ಅವರು ಜಾಹೀರಾತು ನಿಲ್ಲಿಸಿದ್ದಾರೆ. ಅದೂ ಅಬೋಧ ಬಾಲಕಿಯ ಮಾತು ಕೇಳಿ.

ಹೌದು, ಜೈಪುರದ ಶಾಲಾ ಬಾಲಕಿಯೊಬ್ಬಳು ತನ್ನ ಶಾಲೆಗೆ ಬಂದಿದ್ದ ಅಮಿತಾಬ್ ಅಂಕಲ್ ಅನ್ನು ನೇರವಾಗಿ 'ನಮ್ಮ ಟೀಚರ್ ಹೇಳ್ತಾರೆ ಪೆಪ್ಸಿ ವಿಷಪೂರಿತ ಅಂತ. ಆದರೆ ನೀವು ಅಡ್ವರ್ಟೈಸ್ ಮೆಂಟಿನಲ್ಲಿ ಕುಡಿಯುವುದಕ್ಕೆ ಹೇಳ್ತೀರಲ್ಲಾ, ಅಂಕಲ್?' ಎಂದು ಮುಗ್ಧಳಾಗಿ ಕೇಳಿದ್ದಾಳೆ.

ಪೆಪ್ಸಿ ಒಳ್ಳೆಯದ್ದೋ, ಕೆಟ್ಟದ್ದೂ ಎಂಬ ಚರ್ಚೆ ಅನಗತ್ಯ

ಮಗು ಹಾಗೆ ಕೇಳಿದ್ದೇ ತಡ. ಅಮಿತಾಬ್ ಸೀದಾ ಪೆಪ್ಸಿ ಕಂಪನಿಯವರನ್ನು ಕರೆಯಿಸಿಕೊಂಡು ನಿಮ್ಮ ಜಾಹೀರಾತಿನಲ್ಲಿ ಇನ್ನು ಮುಂದೆ ನಾನು ಕಾಣಿಸಿಕೊಳ್ಳುವುದಿಲ್ಲ. ಗುಡ್ ಬೈ ಎಂದಿದ್ದಾರೆ ಅಷ್ಟೇ. 'ಅದು (ಪೆಪ್ಸಿ) ಒಳ್ಳೆಯದ್ದೋ, ಕೆಟ್ಟದ್ದೂ ಎಂಬ ಚರ್ಚೆ ಅನಗತ್ಯ. ಆದರೆ ಬಹಳಷ್ಟು ಜನರ ಭಾವನೆಯಲ್ಲಿ ಅದು ಕಟ್ಟದ್ದು ಎಂದಾಗಿದೆ. ಹಾಗಾಗಿ ಅಂತಹ ಉತ್ಪನ್ನವನ್ನು ಜಾಹೀರಾತು ಮಾಡಲು ನಾನು ಸಿದ್ಧವಿಲ್ಲ' ಎಂದು ಅಮಿತಾಬ್ ಹೇಳಿದ್ದಾರೆ.

ಪುತ್ರ ಬಚ್ಚನ್ -ಸೊಸೆ ರೈಗೂ ಉಪದೇಶ

ಅಷ್ಟೇ ಅಲ್ಲ. ತಮ್ಮ ಪುತ್ರ ಅಭಿಷೇಕ್ ಬಚ್ಚನ್ ಮತ್ತು ಸೊಸೆ ಐಶ್ವರ್ಯಾ ರೈ ಅವರನ್ನು ಎದುರಿಗೆ ಕೂಡಿಸಿಕೊಂಡು ಇನ್ಮುಂದೆ ಜಾಹೀರಾತು ಒಪ್ಪಂದಗಳಿಗೆ ಸಹಿ ಹಾಕುವ ಮೊದಲು ಹತ್ತು ಬಾರಿ ಯೋಚಿಸಿ. ಆ ಉತ್ಪನ್ನಗಳು ಮನುಷ್ಯನಿಗೆ ಹಾನಿಕರವಾಗಿದ್ದರೆ ಅಂತಹ ಉತ್ಪನ್ನಗಳ ಜಾಹೀರಾತನ್ನು ಒಪ್ಪಿಕೋ ಬೇಡಿ ಎಂದೂ ಸಲಹೆ ನೀಡಿದ್ದಾರಂತೆ.

IIM-A ವಿದ್ಯಾರ್ಥಿಗಳಿಗೆ ತಿಳಿಯಹೇಳಿದ ಅಮಿತಾಬ್

ಅಮಿತಾಬ್ ಈ ವಿಷಯವನ್ನು ಎಲ್ಲಿ ಹೇಳಿದ್ದಾರೆ ಎಂಬುದೂ ಇಲ್ಲಿ ದಾಖಲಾರ್ಹ. ಅಹಮದಾಬಾದಿನ ಇಂಡಿಯನ್ ಇನ್ಸಿಟಿಟ್ಯೂಟ್ ಸೈನ್ಸ್ (IIM-A)ನಲ್ಲಿ ವಿದ್ಯಾರ್ಥಿಗಳ ಜತೆ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಈ ವಿಷಯವನ್ನು ತಿಳಿಸಿದ್ದಾರೆ.

ಅಮಿತಾಭ್ ನಿರ್ಧಾರದ ಬಗ್ಗೆ PespiCo ಪ್ರತಿಕ್ರಿಯೆ ನೀಡಿಲ್ಲ

ಈ ಮಧ್ಯೆ, ಪೆಪ್ಸಿ ಪಾನೀಯ ಸಂಸ್ಥೆಯಾದ PespiCo ಅಮಿತಾಭ್ ನಿರ್ಧಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಪೆಪ್ಸಿ ಮತ್ತು ಕೋಕಾಕೋಲಾ ತಂಪು ಪಾನೀಯಗಳು ಕ್ರಮಿನಾಶಕಗಳನ್ನು ಒಳಗೊಂಡಿರುತ್ತದೆ ಎಂದು ಕೆಲ ವರ್ಷಗಳ ಹಿಂದೆ ವರದಿಯಾಗಿತ್ತು.

ಮೇರು ನಟ/ನಟಿಯರೂ ಅಮಿತಾಬ್ ಹಾದಿ ಅನುಸರಿಸುವರೇ?

ಇದು ಇತರೆ ಮೇರು ನಟ/ನಟಿಯರಿಗೂ ಪಾಠವಾಗಬಲ್ಲದೇ?, ಅಮಿತಾಬ್ ಹಾದಿ ಅನುಸರಿಸುವರೇ?

English summary
Amitabh Bachchan stops Pepsi advertisement thanks to Jaipur shool girl. Bollywood badshah Amitabh Bachchan told the audience at the Indian Institute of Management, Ahmedabad, that he stopped endorsing Pepsi after he was confronted by a little girl who wondered why he promoted the soft drink that her teacher had branded as poison.
Please Wait while comments are loading...