»   » ಚಿರಂಜೀವಿ 151ನೇ ಚಿತ್ರದಲ್ಲಿ ಅಮಿತಾಬ್ ಪಾತ್ರದ ಗುಟ್ಟು ಈಗ ರಟ್ಟು.!

ಚಿರಂಜೀವಿ 151ನೇ ಚಿತ್ರದಲ್ಲಿ ಅಮಿತಾಬ್ ಪಾತ್ರದ ಗುಟ್ಟು ಈಗ ರಟ್ಟು.!

Posted By:
Subscribe to Filmibeat Kannada

ಮೆಗಾ ಸ್ಟಾರ್ ಚಿರಂಜೀವಿ ರವರ 151ನೇ ಸಿನಿಮಾದಲ್ಲಿ (ಸೈರಾ ನರಸಿಂಹ ರೆಡ್ಡಿ) ಕಿಚ್ಚ ಸುದೀಪ್ ಹಾಗೂ ಅಮಿತಾಬ್ ಬಚ್ಚನ್ ರವರಿಗೂ ಬಹು ಮುಖ್ಯ ಪಾತ್ರಗಳಿವೆ.

ತೆಲುಗಿನ ಸ್ವಾತಂತ್ರ್ಯ ಹೋರಾಟಗಾರ 'ಉಯ್ಯಲವಾಡ ನರಸಿಂಹ ರೆಡ್ಡಿ' ಪಾತ್ರದಲ್ಲಿ ಚಿರಂಜೀವಿ ಕಾಣಿಸಿಕೊಂಡರೆ, ಕನ್ನಡ ಹಾಗೂ ತೆಲುಗಿನಲ್ಲಿ ಮಾತನಾಡುವ ಪರಿಣಾಮಕಾರಿ ವ್ಯಕ್ತಿಯ ಪಾತ್ರದಲ್ಲಿ ಸುದೀಪ್ ಮಿಂಚಲಿದ್ದಾರೆ ಎಂಬ ಸಂಗತಿ ಈಗಾಗಲೇ ಬಹಿರಂಗವಾಗಿದೆ.

Ranbir Kapoor to replace Amitabh Bachchan as host of Kaun Banega Crorepati 9 | Filmibeat Kannada

ಯಾರ್ರೀ ಹೇಳಿದ್ದು ಸುದೀಪ್ ಗೆ 'ಮೆಗಾ' ಆಫರ್ ಕೈತಪ್ಪಿ ಹೋಯ್ತು ಅಂತ.?!

ಈ ನಡುವೆ ಅಮಿತಾಬ್ ಬಚ್ಚನ್ ರವರ ಪಾತ್ರವೇನಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದವರಿಗೆ ಇದೋ ಇಲ್ಲಿದೆ ಉತ್ತರ....

'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಪಾತ್ರವೇನು.?

ವರದಿಗಳ ಪ್ರಕಾರ, 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ 'ಗೋಸಾಯಿ ವೆಂಕಣ್ಣ' ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ.

ಅಮಿತಾಬ್ ಸೂಕ್ತ

ಬ್ರಿಟೀಷರ ವಿರುದ್ಧ ಉಯ್ಯಲವಾಡ ನರಸಿಂಹ ರೆಡ್ಡಿ ದಂಗೆ ಎದ್ದಾಗ, ಅವರಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದ್ದೇ 'ಗೋಸಾಯಿ ವೆಂಕಣ್ಣ'. ಹೀಗಾಗಿ, ಗತ್ತು ಗೈರತ್ತಿರುವ 'ಗೋಸಾಯಿ ವೆಂಕಣ್ಣ' ರವರ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ನ್ಯಾಯ ಸಲ್ಲಿಸುತ್ತಾರೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ.

ಸಿನಿಮಾದಲ್ಲಿದೆ ದೊಡ್ಡ ತಾರಾಬಳಗ

'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್, ಅಮಿತಾಬ್ ಬಚ್ಚನ್ ಜೊತೆಗೆ ವಿಜಯ್ ಸೇತುಪತಿ ಹಾಗೂ ಜಗಪತಿ ಬಾಬು ಕೂಡ ಇದ್ದಾರೆ. ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಇರಲಿದೆ.

ನಾಯಕಿ ನಯನತಾರಾ

'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕೆ ನಯನತಾರಾ ನಾಯಕಿ. ಬರೋಬ್ಬರಿ 150 ಕೋಟಿ ರೂಪಾಯಿಯಲ್ಲಿ ಚಿತ್ರ ತಯಾರಾಗಲಿದ್ದು, ರಾಮ್ ಚರಣ್ ಬಂಡವಾಳ ಹಾಕಲಿದ್ದಾರೆ.

English summary
Bollywood Actor Amitabh Bachchan to play the role of Gosai Venkanna in Chiranjeevi's 'Sye Raa Narasimha Reddy'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada