For Quick Alerts
  ALLOW NOTIFICATIONS  
  For Daily Alerts

  ಗೆಲುವಿನ ಕುದುರೆಯನ್ನೇರಿ ಹೊರಟ 'ಅನಂತು ವರ್ಸಸ್ ನುಸ್ರತ್'

  |

  ವಿನಯ್ ರಾಜ್ ಕುಮಾರ್ ಅಭಿನಯದ 'ಅನಂತು ವರ್ಸಸ್ ನುಸ್ರತ್' ಸಿನಿಮಾ ಮೂರನೇ ವಾರ ಯಶಸ್ವಿ ಪ್ರದರ್ಶನ ಕಾಣ್ತಿದೆ. ರೋಮ್ಯಾಂಟಿಕ ಕಾಮಿಡಿ ಎಂಟರ್ ಟೈನರ್ ಗೆ ಕನ್ನಡ ಸಿನಿಪ್ರೇಮಿಗಳು ಫಿದಾ ಆಗಿದ್ದಾರೆ.

  ಕಳೆದ ವರ್ಷ ಡಿಸೆಂಬರ್ 28ರಂದು ಬಂದಿದ್ದ ಅನಂತು ವರ್ಸಸ್ ನುಸ್ರತ್, ಯಾವುದೇ ದೊಡ್ಡ ನಿರೀಕ್ಷೆಯಿಲ್ಲದೇ ಬಿಡುಗಡೆಯಾದ ಚಿತ್ರ. ಮೊದಲ ದಿನವೇ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡ ವಿನಯ್ ಸಿನಿಮಾ ದಿನದಿಂದ ದಿನಕ್ಕೆ ಸಿನಿಪ್ರೇಮಿಗಳನ್ನ ಸೆಳೆಯುತ್ತಿದೆ.

  ವಿಮರ್ಶೆ : ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

  ಸದ್ಯ, ಮೂರನೇ ವಾರ ಪ್ರದರ್ಶನವಾಗ್ತಿರುವ 'ಅನಂತು ವರ್ಸಸ್ ನುಸ್ರತ್' 25ನೇ ದಿನದತ್ತ ಹೆಜ್ಜೆ ಹಾಕಿದೆ. ಈ ಚಿತ್ರವನ್ನ ಹೆಚ್ಚಾಗಿ ಕ್ಲಾಸ್ ಆಡಿಯನ್ಸ್ ಹೆಚ್ಚು ಇಷ್ಟ ಪಡ್ತಿದ್ದು, ಮಲ್ಟಿಪ್ಲೆಕ್ಸ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಕಾಲೇಜು ಹುಡುಗರು ಮತ್ತು ಫ್ಯಾಮಿಲಿ ಆಡಿಯನ್ಸ್ ಅನಂತನ ಮೋಡಿಗೆ ಮರುಳಾಗ್ತಿದ್ದಾರೆ.

  'ಕೆಜಿಎಫ್' ಸಿನಿಮಾದ ಅಬ್ಬರ ನಡುವೆಯೂ ಅನಂತು ವರ್ಸಸ್ ನುಸ್ರತ್ ಗೆಲುವಿನ ದಡ ಸೇರಿದೆ. ಸದ್ಯ, ಕರ್ನಾಟಕದಲ್ಲಿ ಪೇಟಾ, ವಿಶ್ವಾಸಂ, ಸಿಂಬಾ, ಎನ್.ಟಿ.ಆರ್ ಅಂತಹ ಪರಭಾಷೆ ಚಿತ್ರಗಳು ರಿಲೀಸ್ ಆಗಿದ್ದರೂ ಈ ಚಿತ್ರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

  'ಅನಂತು v/s ನುಸ್ರತ್' ಚಿತ್ರದ ಬಗ್ಗೆ ಸುದೀಪ್ ಟ್ವೀಟ್

  ಇನ್ನುಳಿದಂತೆ ಅನಂತು ಪಾತ್ರದಲ್ಲಿ ವಿನಯ್ ಹಾಗೂ ನುಸ್ರತ್ ಪಾತ್ರದಲ್ಲಿ ಲತಾ ಹೆಗ್ಗಡೆ ಮೋಡಿ ಮಾಡಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಸಿನಿಮಾದ ಹೈಲೈಟ್. ಸುಧೀರ ಶಾನ್ ಭೋಗ್ ನಿರ್ದೇಶನ, ಸುನಾದ್ ಗೌತಮ್ ಸಂಗೀತ ಸೇರಿ ಒಂದೊಳ್ಳೆ ಮನರಂಜನೆ ನೀಡಿದೆ.

  English summary
  Kannada actor vinay rajkumar starrer Ananthu vs nusrath movie is running successfully from last 2 weeks.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X