For Quick Alerts
  ALLOW NOTIFICATIONS  
  For Daily Alerts

  ಅನಂತು v/s ನುಸ್ರತ್ ತಂಡದಿಂದ ಮಂಗಳಮ್ಮನ ಬರ್ತಡೇ!

  By ಶಶಿಕರ ಪಾತೂರು
  |

  ವಿನಯ ರಾಜ್ ಕುಮಾರ್ ಅಭಿನಯದ ಚಿತ್ರ 'ಅನಂತು V/s ನುಸ್ರತ್'. ಸುಧೀರ್ ಶಾನುಭೋಗ್ ನಿರ್ದೇಶನದ ಈ ಚೊಚ್ಚಲ ಚಿತ್ರ ಮುಂದಿನ ವಾರ ತೆರೆಗೆ ಬರಲು ಸಿದ್ಧವಾಗಿದೆ.

  ಡಿಸೆಂಬರ್ 21ರಂದು ಶುಕ್ರವಾರ ವಿನಯ್ ರಾಜಕುಮಾರ್ ಅವರ ತಾಯಿ ಮಂಗಳಾ ರಾಘವೇಂದ್ರ ರಾಜ್ ಅವರ ಜನ್ಮದಿನಾಚರಣೆಯಿತ್ತು.‌ ಇದನ್ನು ಅರಿತ ಚಿತ್ರತಂಡದ ಆತ್ಮೀಯರು ರಾಘವೇಂದ್ರ ರಾಜಕುಮಾರ್ ಅವರ ಮನೆಗೆ ಭೇಟಿನೀಡಿ ಚಿತ್ರತಂಡದ ವತಿಯಿಂದ ಕೇಕ್ ಕತ್ತರಿಸಿ ಶುಭ ಕೋರಿದರು.

  ಮಂಗಳಾ ರಾಘವೇಂದ್ರ ರಾಜ್ ಕುಮಾರ್ ಜನ್ಮದಿನಾಚರಣೆಯ ವೇಳೆ ಪತಿ ರಾಘವೇಂದ್ರ ರಾಜಕುಮಾರ್, ಪುತ್ರರಾದ ವಿನಯ್ ರಾಜ್ ಕುಮಾರ್, ಗುರು ರಾಘವೇಂದ್ರ ರಾಜ್ ಕುಮಾರ್, ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಭಾನುಮತಿ, ಚಿತ್ರತಂಡದ ಕಿರಣ್ ಧೀರಜ್ ಮೊದಲಾದವರ ಜೊತೆಗೆ ಆಪ್ತವಲಯದ ಅಭಿಮಾನಿಗಳ ಸಮಾಗಮವಿತ್ತು. ಮುಂದೆ ಓದಿರಿ..

   ವಿನಯ್ ಅವರ ವಿಭಿನ್ನ ಪ್ರಯತ್ನ

  ವಿನಯ್ ಅವರ ವಿಭಿನ್ನ ಪ್ರಯತ್ನ

  ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಅವರು ವಕೀಲ ಅನಂತ ಕೃಷ್ಣನ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ. ಜಡ್ಜ್ ನುಸ್ರತ್ ಫಾತಿಮಾ ಬೇಗ್ ಪಾತ್ರದಲ್ಲಿ ಲತಾ ಹೆಗ್ಗಡೆ ಅಭಿನಯವಿದೆ. ಇದೊಂದು ಹಾಸ್ಯ ಪ್ರೇಮ ಕಥೆಯಧಾರಿತ ಚಿತ್ರವಾಗಿದ್ದರೂ, ಅನಂತು ಮತ್ತು ನುಸ್ರತ್ ನಡುವಿನ ಪ್ರೇಮಕಥೆಗೆ ಹೆಚ್ಚು ಒತ್ತು ನೀಡಲಾಗಿದೆ.

  ಭಾನುವಾರ ಬಂದ್ರೆ ಸಾಕು ಹುಡುಗಿ ನೋಡೋಕ್ಕೆ ಹೋಗ್ತಾರೆ ವಿನಯ್

  ಚಿತ್ರದ ವಿಶೇಷತೆ

  ಚಿತ್ರದ ವಿಶೇಷತೆ

  ಪಾತ್ರಗಳು ಹಾಗೂ ಘಟನೆಗಳನ್ನು ಕುತೂಹಲದಿಂದ ಜೋಡಿಸಿ ನಿರ್ದೇಶಕರು ಚಿತ್ರ ಮಾಡಿದಂತಿದೆ. ಮಾಣಿಕ್ಯ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ತಯಾರಾಗಿ ನಿಂತಿದೆ. ರವಿಶಂಕರ್, ಗುರು ಪ್ರಸಾದ್, ಭಗವಾನ್ ಮತ್ತಿತರ ತಾರಾಗಣವಿದ್ದು ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣ, ಸುನಾದ್ ಗೌತಮ್ ಅವರ ಸಂಗೀತ ಚಿತ್ರದಲ್ಲಿದೆ.

  ವಿನಯ್ ಚಿತ್ರದ ಬಗ್ಗೆ ಜನರು ಹೇಗೆಲ್ಲಾ ಕಾಮೆಂಟ್ ಮಾಡಿದ್ದಾರೆ.!

   ಬರ್ತಡೇ ದಿನ..

  ಬರ್ತಡೇ ದಿನ..

  ಮಂಗಳಾ ರಾಘವೇಂದ್ರ ರಾಜ್ ಕುಮಾರ್ ಜನ್ಮದಿನಾಚರಣೆಯ ವೇಳೆ ಪತಿ ರಾಘವೇಂದ್ರ ರಾಜಕುಮಾರ್, ಪುತ್ರರಾದ ಹಾಗೂ ಅನಂತು v/s ನುಸ್ರತ್ ಚಿತ್ರದ ನಾಯಕ ವಿನಯ್ ರಾಜ್ ಕುಮಾರ್, ಅವರ ಸಹೋದರ ಗುರು ರಾಘವೇಂದ್ರ ರಾಜ್ ಕುಮಾರ್, ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಭಾನುಮತಿ, ಚಿತ್ರತಂಡದ ಕಿರಣ್ ಧೀರಜ್ ಮೊದಲಾದವರ ಜೊತೆಗೆ ಆಪ್ತವಲಯದ ಅಭಿಮಾನಿಗಳ ಸಮಾಗಮವಿತ್ತು. ಇತ್ತೀಚೆಗಷ್ಟೇ ಕಿರುತೆರೆಯ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಬಂದಂಥ 'ಸಿದ್ದಾರ್ಥ' ಸಿನಿಮಾ ಖ್ಯಾತಿಯ ನಯನಾ ಕೂಡ ಈ ಸಂಭ್ರಮದಲ್ಲಿ ಭಾಗವಹಿಸಿದ್ದರು.

  ಗಾಜನೂರಿನ ಗ್ರಾಮದಲ್ಲಿ ಮರುಹುಟ್ಟು ಪಡೆದ ವಿನಯ್ ರಾಜ್ ಕುಮಾರ್

   ಕೊಡಬೇಕಾಗಿರುವುದೆಲ್ಲ ನಾವೇ..!

  ಕೊಡಬೇಕಾಗಿರುವುದೆಲ್ಲ ನಾವೇ..!

  ''ನಮಗೆ ಅಪ್ಪಾಜಿ ಕಾಲದಿಂದಲೇ ಅಭಿಮಾನಿಗಳ ಆಶೀರ್ವಾದ ದೊರಕಿದೆ. ಒಬ್ಬ ನಟನ ಅಭಿಮಾನಿಗಳಾಗಿ ನೀವುಗಳು ಅಪಾರವಾದ ಕೊಡುಗೆ ನೀಡಿದ್ದೀರಾ. ಅಂಥ ನಿಮಗೆ ಕೊಡುಗೆ ನೀಡುವಲ್ಲಿ ನಾವೇ ಕಡಿಮೆಯಾದ ಹಾಗಿದ್ದೇವೆ. ನನ್ನ ಕಿರಿಯ ಮಗ ಡಾ.ರಾಜಕುಮಾರ್ ಸಿವಿಲ್ ಸರ್ವಿಸಸ್ ಅಕಾಡೆಮಿಯ ಮೂಲಕ ಸೇವಾ ಮನೋಭಾವದ ಪ್ರಯತ್ನ ನಡೆಸಿದ್ದಾನೆ. ಐಎಎಸ್, ಕೆಎಎಸ್ ನಂತಹ ಉನ್ನತ ಹುದ್ದೆಯ ಮೂಲಕ ಸಮಾಜದ ಸುಧಾರಣೆ ಬಯಸುವ ಸಾವಿರಾರು ವಿದ್ಯಾರ್ಥಿಗಳ ಕನಸಿಗೆ ಜೀವ ತುಂಬುವ ಕೆಲಸಕ್ಕೆ ಪ್ರಯತ್ನಿಸಿದ್ದು ನಾವೆಲ್ಲ ಆತನಿಗೆ ಬೆಂಬಲವಾಗಿದ್ದೇವೆ. ಈ ಬಾರಿ ಅಂಧ ವಿದ್ಯಾರ್ಥಿನಿಯೋರ್ವಳು ಉತ್ತೀರ್ಣಗೊಂಡಿರುವುದು ಸೇರಿದಂತೆ ಒಂದಷ್ಟು ಉತ್ತಮ ಬೆಳವಣಿಗೆಗಳಾಗಿವೆ. ಈ ಎಲ್ಲ ಸಂತಸದ ನಡುವೆ ನಾನು ಮಂಗಳಮ್ಮ ಎಂದೇ ಕರೆಯುವ ನನ್ನ ಪತ್ನಿಗೆ ಜನ್ಮದಿನ ಎನ್ನುವುದು ಖುಷಿ ತಂದಿದೆ. ಅದರಲ್ಲಿ ಕೂಡ ಮಗನ ಚಿತ್ರತಂಡದವರು ಈ ಸಂಭ್ರಮದಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದು ನಮ್ಮ ಖುಷಿಯನ್ನು ಹೆಚ್ಚಿಸಿದೆ. ಎಲ್ಲರಿಗೂ ಒಳ್ಳೆಯದಾಗಲಿ" ಎಂದು ರಾಘವೇಂದ್ರ ರಾಜ್ ಕುಮಾರ್ ಶುಭಕೋರಿದರು.

  English summary
  Ananthu vs Nusrath team celebrates Mangala Raghavendra Rajkumar birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X