For Quick Alerts
  ALLOW NOTIFICATIONS  
  For Daily Alerts

  ಬಚ್ಚನ್ ಬಿಡುಗಡೆಗೊಳಿಸಿದ ಜಂಬೋ ಕುಂಬ್ಳೆ

  By Mahesh
  |

  ಮಾಜಿ ನಾಯಕ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಗೂ ಬಚ್ಚನ್ ಗೂ ಏನು ಸಂಬಂಧ? ಕಳೆದ ಎರಡು ದಿನ ಬಚ್ಚನ್ ಜೊತೆ ಜೊತೆಗೆ ಕುಂಬ್ಳೆ ಓಡಾಟ ಸಾಗಿದ್ದು ಕಂಡ ಮೇಲೆ ಈ ಪ್ರಶ್ನೆ ಸಹಜವಾಗಿ ಮೂಡಿದೆ.

  ಅಂದ ಹಾಗೆ ಅನಿಲ್ ಕುಂಬ್ಳೆ ಸುತ್ತಾಡಿದ್ದು, ಕನ್ನಡದ ಬಿಗ್ ಸ್ಟಾರ್ ಸುದೀಪ್ ಅವರ ಹೊಸ ಚಿತ್ರ 'ಬಚ್ಚನ್' ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ. ಕೋರಮಂಗಲದ ಫೋರಂ ಮಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಕುಂಬ್ಳೆ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

  ಕಿಚ್ಚ ಸುದೀಪ್ ಸ್ನೇಹದ ಕರೆಯೋಲೆಗೆ ಓಗೊಟ್ಟು ಬಂದಿದ್ದ ಅನಿಲ್ ಕುಂಬ್ಳೆ ಇಡೀ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ನಿರ್ದೇಶಕ ಶಶಾಂಕ್ ಹಾಗೂ ನಿರ್ಮಾಪಕ ಉದಯ್ ಮೆಹ್ತಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

  ಬಚ್ಚನ ಆಗಿ ತೆರೆಗೆ ಬರಲಿರುವ ಕಿಚ್ಚ ಸುದೀಪ್ ಜೊತೆ ಜಂಬೋ ಅನಿಲ್ ಕುಂಬ್ಳೆ ಕಂಡಿದ್ದು ಹೀಗೆ.. ಮುಂದೆ ನೋಡುತ್ತಾ ಹೋಗಿ....

  ಬಚ್ಚನ್ ಜೊತೆ ಜಂಬೋ

  ಬಚ್ಚನ್ ಜೊತೆ ಜಂಬೋ

  ಸುದೀಪ್ ಚಿತ್ರಗಳಷ್ಟು ಇಷ್ಟಪಡುವ ಅನಿಲ್ ಕುಂಬ್ಳೆ, ಗೆಳೆಯ ಚಿತ್ರದ ಪ್ರೊಮೋಷನ್ ಗಾಗಿ ಮಾತ್ರವಲ್ಲ. ನಾನು ಅಭಿಮಾನಿಯಾಗಿ ಬಂದಿದ್ದೇನೆ ಎಂದರು

  ಜಸ್ಟ್ ಸಕತ್ ಇಷ್ಟ

  ಜಸ್ಟ್ ಸಕತ್ ಇಷ್ಟ

  2010ರಲ್ಲಿ ಸುದೀಪ್ ರಮ್ಯಾ ಅಭಿನಯದ ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಪ್ರಿಮಿಯರ್ ಗೆ ಬಂದಿದ್ದ ಅನಿಲ್ ಕುಂಬ್ಳೆ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

  ಹೊಸ ಪೋಸ್ಟರ್

  ಹೊಸ ಪೋಸ್ಟರ್

  ಚಿತ್ರದ ಟ್ರೈಲರ್ ಕೆಲವು ತಿಂಗಳುಗಳಿಂದ ಓಡಾಡುತ್ತಾ ಇದೆ. ಈಗ ಹೊಸ ಪೋಸ್ಟರ್ ನಲ್ಲಿ ಹೊಸ ಲುಕ್ ನೊಂದಿಗೆ ಸುದೀಪ್ ಕಾಣಿಸಿಕೊಂಡಿದ್ದಾರೆ.

  ಯಾವಾಗ ರಿಲೀಸ್?

  ಯಾವಾಗ ರಿಲೀಸ್?

  ಎಲ್ಲವೂ ಸರಿ ಹೋದರೆ ಏಪ್ರಿಲ್ ನಲ್ಲೇ ಬಿಡುಗಡೆ ಮಾಡಲು ಸಿದ್ಧ ಎಂದು ನಿರ್ದೇಶಕ ಶಶಾಂಕ್ ಹೇಳಿದ್ದಾರೆ. ಚಿತ್ರದಲ್ಲಿ ಭಾವನಾ ಮೆನನ್, ಟುಲಿಪ್ ಜೋಶಿ, ಪರುಲ್ ಯಾದವ್ ಇದ್ದಾರೆ. ಜೊತೆಗೆ ರವಿಶಂಕರ್, ಆಶೀಶ್ ವಿದ್ಯಾರ್ಥಿ, ಅರುಣ್ ಸಾಗರ್

  ಮತ್ತೇನು ವಿಶೇಷ

  ಮತ್ತೇನು ವಿಶೇಷ

  ತೆಲುಗು ನಟ ಜಗಪತಿ ಬಾಬು ಸಣ್ಣ ಪಾತ್ರ ನಿರ್ವಹಿಸುತ್ತಿದ್ದು, ಸಲ್ಮಾನ್ ಖಾನ್ ಮೆಂಟಲ್ ಚಿತ್ರದಲ್ಲಿ ಕುಣಿದಾಡಿರುವ ಬೆಡಗಿ ಡೈಸಿ ಶಾ, ಕಿಚ್ಚ ಸುದೀಪ್ ಚಿತ್ರದಲ್ಲೂ ಐಟಂ ಗರ್ಲ್ ಆಗಿ ಕಾಣಿಸಿಕೊಂಡಿದ್ದಾರೆ.

  English summary
  Former Indian cricket captain Anil Kumble was the special guest at the poster launch function of Sudeep's Bachchan. The event was held at Forum Mall in Koramangala

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X