For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಗೆ ಬಿಗ್ ಸರ್ಪ್ರೈಸ್ ನೀಡಿದ ಅನಿಲ್ ಕುಂಬ್ಳೆ: 'ಇದಕ್ಕಿಂತ ಗಿಫ್ಟ್ ಇನ್ನೇನಿರಲು ಸಾಧ್ಯ' ಎಂದ ಕಿಚ್ಚ

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಸಿನಿಮಾರಂಗ ಮಾತ್ರವಲ್ಲದೇ ಬೇರೆ ಬೇರೆ ಕ್ಷೇತ್ರಗಳಲ್ಲೂ ಅನೇಕ ಸ್ನೇಹಿತರಿದ್ದಾರೆ. ಅದರಲ್ಲೂ ಸುದೀಪ್ ಅವರಿಗೆ ಕ್ರಿಕೆಟ್ ಅಂದರೆ ತುಂಬಾ ಇಷ್ಟ. ಕ್ರಿಕೆಟ್ ಕ್ಷೇತ್ರದಲ್ಲೂ ಅನೇಕ ಸ್ನೇಹಿತರಿದ್ದಾರೆ. ಹಾಗೆ ಸ್ಯಾಂಡಲ್ ವುಡ್ ಆಚೆಗೂ ಅಂದರೆ ಪರಭಾಷೆಯಲ್ಲೂ ಕಿಚ್ಚ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಗಡಿಗೂ ಮೀರಿದ ಅಭಿಮಾನಿ ಬಳಗ ಸಂಪಾದನೆ ಮಾಡಿರುವ ಸುದೀಪ್ ಗೆ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಕಡೆಯಿಂದ ಸಖತ್ ಸರ್ಪ್ರೈಸ್ ಸಿಕ್ಕಿದೆ.

  ಅಂದಹಾಗೆ ಸುದೀಪ್ ಹುಟ್ಟುಹಬ್ಬ ಸಮೀಪಿಸುತ್ತಿದೆ. ಸೆಪ್ಟಂಬರ್ 2 ಕಿಚ್ಚ ಸುದೀಪ್ ಹುಟ್ಟಿದ ದಿನ. ಜನ್ಮದಿನ ಆಚರಣೆಗೆ ಇನ್ನು 10 ದಿನಗಳು ಬಾಕಿ ಇದೆ. ಆಗಲೇ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ಹುಟ್ಟುಹಬ್ಬದ ವಿಶೇಷವಾಗಿ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಇಂದು (ಆಗಸ್ಟ್ 21) ಸುದೀಪ್ ಅವರ ಸಿಡಿಪಿ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.

  ಬಾದ್ ಷಾ ಎಂದು ಬರೆದಿರುವ ಅದ್ಭುತ ಫೋಟೋವನ್ನು ಅನಿಲ್ ಕುಂಬ್ಳೆ ಅನಾವರಣ ಮಾಡಿದ್ದಾರೆ. ಫೋಟೋದಲ್ಲಿ ಕಿಚ್ಚನ ಪ್ರಶಸ್ತಿಗಳು ಜೊತೆಗೆ ಅಪಾರ ಸಂಖ್ಯೆಯ ತುಂಬಿದ್ದಾರೆ. ಅಭಿಮಾನಿಗಳ ಮಧ್ಯೆ ಕಿಚ್ಚ ಕುಳಿತಿದ್ದಾರೆ. ಈ ಫೋಟೋವನ್ನು ಅನಿಲ್ ಕುಂಬ್ಳೆ ಅನಾವರಣ ಮಾಡಿ ಕಿಚ್ಚನಿಗೆ ಮುಂಚಿತವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

  "ನನ್ನ ಆತ್ಮೀಯ ಸ್ನೇಹಿತ ಹಾಗೂ ಲೆಜೆಂಡ್ ನಟ ಕಿಚ್ಚಸುದೀಪ್ ಅವರ ಹುಟ್ಟುಹಬ್ಬದ ಕಾಮನ್ ಡಿಸ್ಪ್ಲೇ ಪಿಕ್ಟರ್. ಸ್ಫೂರ್ತಿದಾಯಕವಾಗಿರಿ" ಎಂದು ಬರೆದುಕೊಂಡಿದ್ದಾರೆ.

  ವರಮಹಾಲಕ್ಷ್ಮಿ ಹಬ್ಬಕ್ಕೆ ವಿಕ್ರಾಂತ್ ರೋಣ ಅಪ್‌ಡೇಟ್ ಕೊಟ್ಟ ಸುದೀಪ್ವರಮಹಾಲಕ್ಷ್ಮಿ ಹಬ್ಬಕ್ಕೆ ವಿಕ್ರಾಂತ್ ರೋಣ ಅಪ್‌ಡೇಟ್ ಕೊಟ್ಟ ಸುದೀಪ್

  ಅನಿಲ್ ಕುಂಬ್ಳೆ ಸರ್ಪ್ರೈಸ್ ಗೆ ಕಿಚ್ಚ ಸುದೀಪ್ ಫುಲ್ ಖುಷ್ ಆಗಿದ್ದಾರೆ. ಅನಿಲ್ ಕುಂಬ್ಳೆ ಟ್ವೀಟ್ ರಿಟ್ವೀಟ್ ಮಾಡಿ, "ಇದಕ್ಕಿಂತ ಉತ್ತಮವಾದ ಉಡುಗೊರೆ ಇನ್ನೇನು ಇರಲು ಸಾಧ್ಯ ಅನಿಲ್ ಕುಂಬ್ಳೆ ಸರ್. ಇದು ನಿಜಕ್ಕೂ ತುಂಬಾ ದೊಡ್ಡ ಸರ್ಪ್ರೈಸ್. ತುಂಬಾ ಧನ್ಯವಾದಗಳು" ಎಂದು ಬರೆದು ಅನಿಲ್ ಕುಂಬ್ಳೆ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

  Anil Kumble released Kiccha Sudeeps birthday CDP

  ಸುದೀಪ್ ಸಿಡಿಪಿ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಫೋಟೋ ಶೇರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಕಿಚ್ಚನ ಸಿಡಿಪಿ ಟ್ವಿಟ್ಟರ್ ಟಾಪ್ ಟ್ರೆಂಡಿಂಗ್ ನಲ್ಲಿದೆ. ಇನ್ನು 10 ದಿನಗಳು ಇರುವಾಗಲೇ ಅಭಿಮಾನಿಗಳ ಸಂಭ್ರಮ ಮುಗಿಸಲು ಮುಟ್ಟಿದೆ. ಇನ್ನು ಹುಟ್ಟುಹಬ್ಬದ ದಿನ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ.

  ಅಂದಹಾಗೆ ಪ್ರತಿವರ್ಷದಂತೆ ಈಗ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಲು ಸಾಧ್ಯವಿಲ್ಲ. ಅಪಾರ ಸಂಖ್ಯೆಯ ಅಭಿಮಾಿಗಳು ಸೇರುವ ಹಾಗಿಲ್ಲ. ಕಳೆದ ವರ್ಷದಂತೆ ಈ ವರ್ಷ ಸಹ ಸರಳವಾಗಿ ಕಿಚ್ಚ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಏನೆಲ್ಲ ಗಿಫ್ಟ್ ಸಿಗಲಿದೆ ಎನ್ನುವ ಕುತೂಹಲದಿಂದ ಕಾಯುತ್ತಿದ್ದಾರೆ.

  ಶಿವಣ್ಣನ ನಾಯಕಿ ಮೆಹ್ರಿನ್‌ಗೆ ಸುದೀಪ್ ಪಾಠಶಿವಣ್ಣನ ನಾಯಕಿ ಮೆಹ್ರಿನ್‌ಗೆ ಸುದೀಪ್ ಪಾಠ

  ವಿಕ್ರಾಂತ್ ರೋಣ ಸಿನಿಮಾದಿಂದ ಟೀಸರ್ ಬಿಡುಗಡೆಯಾಗುತ್ತಾ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಜೊತೆಗೆ ಕೋಟಿಗೊಬ್ಬ-3 ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಹಾಗಾಗಿ ಹುಟ್ಟುಹಬ್ಬದ ದಿನ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುತ್ತಾ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಫ್ಯಾನ್ಸ್. ಆದರೆ ಇದುವರೆಗೂ ಕಿಚ್ಚ ಟೀಂ ಕಡೆಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

  ಸುದೀಪ್ ಸದ್ಯ ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾ ಬಳಿಕ ಕಿಚ್ಚ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಹಾಗಾಗಿ ಹುಟ್ಟುಹಬ್ಬದ ದಿನ ಕಿಚ್ಚನ ಹೊಸ ಸಿನಿಮಾ ಅನೌನ್ಸ್ ಆಗುತ್ತಾ ಎಂದು ಕಾದುನೋಡಬೇಕು. ಕಿಚ್ಚನ ಮುಂದಿನ ಸಿನಿಮಾ ಯಾವುದು? ಯಾರ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ. ಸದ್ಯ ಕಿಚ್ಚನ ಫ್ಯಾನ್ಸ್ ಅನಿಲ್ ಕುಂಬ್ಳೆ ಅನಾವರಣ ಮಾಡಿರುವ ಸಿಡಿಪಿಯನ್ನು ಶೇರ್ ಮಾಡಿ, ಸಂಭ್ರಮಿಸುತ್ತಿದ್ದಾರೆ.

  English summary
  Cricketer Anil Kumble released Kiccha Sudeep's birthday CDP.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X