»   » 'ಅನ್ನದಾತರ ಅನ್ನದಾತ' ಅಂತೆ ಕಿಚ್ಚ ಸುದೀಪ್.!

'ಅನ್ನದಾತರ ಅನ್ನದಾತ' ಅಂತೆ ಕಿಚ್ಚ ಸುದೀಪ್.!

Posted By:
Subscribe to Filmibeat Kannada

''ನಿರ್ಮಾಪಕರು ಅನ್ನದಾತರು'' ಅಂತ ಡಾ.ರಾಜ್ ಕುಮಾರ್ ಸದಾ ಹೇಳುತ್ತಿದ್ದರು. ಅದರಂತೆ ನಿರ್ಮಾಪಕರನ್ನ ಡಾ.ರಾಜ್ ಕುಮಾರ್ ಗೌರವದಿಂದ ಕಾಣುತ್ತಿದ್ದರು.

ಈ ವಿಷಯ ಈಗ ಯಾಕೆ ಅಂದ್ರೆ, ಕಿಚ್ಚ ಸುದೀಪ್ ಅವರಿಗೆ ಹೊಸ ಬಿರುದು ಸಿಕ್ಕಿದೆ. ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳು 'ಕಲಾಭೂಷಣ' ಅಂತ ಹೊಸ ಬಿರುದು ಕೊಟ್ಟಿರುವುದನ್ನ ಇಂದು ಬೆಳಗ್ಗೆಯಷ್ಟೇ ನಾವೇ ನಿಮಗೆ ಹೇಳಿದ್ವಿ. [ಬರ್ತಡೆ ಬಾಯ್ ಕಿಚ್ಚ ಸುದೀಪ್ ಗೆ ಹೊಸ ಬಿರುದು]

ಅದರೊಂದಿಗೆ ಸುದೀಪ್ ಗೆ ಮತ್ತೊಂದು ಟೈಟಲ್ ಸಿಕ್ಕಿದೆ. 'ಅನ್ನದಾತರ ಅನ್ನದಾತ' ಅಂತ.! ಹೀಗಂತ ಸುದೀಪ್ ಅವರಿಗೆ ನಾಮಕರಣ ಮಾಡಿರುವುದು ಕಾಲಿವುಡ್ ನಿರ್ದೇಶಕ ಕೆ.ಎಸ್.ರವಿಕುಮಾರ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಚಿತ್ರತಂಡ.

sudeep

ತಮಿಳು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ರೆಡಿಯಾಗುತ್ತಿರುವ ಈ ಚಿತ್ರಕ್ಕೆ ತಮಿಳಿನಲ್ಲಿ 'ಮುಡಿಂಜ ಇವನ ಪುಡಿ' ಅಂತ ಹೆಸರಿಡಲಾಗಿದೆ. ಕನ್ನಡಲ್ಲಿ 'ಕೋಟಿಗೊಬ್ಬ-2' ಅಂತಲೇ ಫೇಮಸ್ ಆಗಿರುವ ಈ ಚಿತ್ರಕ್ಕಿನ್ನೂ ಶೀರ್ಷಿಕೆ ಫಿಕ್ಸ್ ಆಗಿಲ್ಲ.

ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಅದರಲ್ಲಿ ಸುದೀಪ್ ಅವರಿಗೆ 'ಅನ್ನದಾತರ ಅನ್ನದಾತ' ಅಂತ ಬಿರುದು ನೀಡಲಾಗಿದೆ. [ಕಿಚ್ಚನ ಬರ್ತ್ ಡೇ ಸ್ಪೆಷಲ್: ಫಸ್ಟ್ ಲುಕ್ ಟೀಸರ್ ಝಲಕ್]

ಡಾ.ರಾಜ್ ಕುಮಾರ್ ಹೇಳಿದಂತೆ ''ನಿರ್ಮಾಪಕರು ಅನ್ನದಾತರು''. ಸ್ಯಾಂಡಲ್ ವುಡ್ ನಲ್ಲಿ ಅನೇಕ ನಿರ್ಮಾಪಕರುಗಳಿಗೆ ಸುದೀಪ್ ಸಹಾಯ ಮಾಡಿದ್ದಾರೆ. ಕಷ್ಟದಲ್ಲಿದ್ದವರಿಗೆ ಆಪತ್ಭಾಂಧವರಾಗಿದ್ದಾರೆ. ಸುದೀಪ್ ಅವರ ಈ ಗುಣದಿಂದ ಈ ಬಿರುದು ನೀಡಲಾಗಿದ್ಯಾ ಅನ್ನುವುದಕ್ಕೆ ಚಿತ್ರತಂಡವೇ ಉತ್ತರಿಸಬೇಕು. [ನಿಮಗೆ ಗೊತ್ತಿಲ್ಲದ 'ನಲ್ಲ' ಸುದೀಪ್ ಇನ್ನೊಂದು ಮುಖ]

sudeep
English summary
Kannada Actor Sudeep is celebrating his 41st birthday today. On this occasion, Sudeep has got new title 'Annadathara Annadatha' from K.S.Ravikumar directorial yet-to-be-titled movie team.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada