»   » ಅನು ಪ್ರಭಾಕರ್ ವಿರುದ್ಧ ತೊಡೆ ತಟ್ಟಿ ನಿಂತ ಕನ್ನಡಿಗರು.! ಕಾರಣವೇನು.?

ಅನು ಪ್ರಭಾಕರ್ ವಿರುದ್ಧ ತೊಡೆ ತಟ್ಟಿ ನಿಂತ ಕನ್ನಡಿಗರು.! ಕಾರಣವೇನು.?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಕೆಲ ದಿನಗಳ ಕಾಲ ನಟಿ ಅನು ಪ್ರಭಾಕರ್ ಸುದ್ದಿನೇ ಇರಲಿಲ್ಲ. ನಟ ರಘು ಮುಖರ್ಜಿ ಜೊತೆ ಹಸೆಮಣೆ ಏರಿ, ಎಲ್ಲರ ಹುಬ್ಬೇರಿಸಿದ್ದ ನಟಿ ಅನು ಪ್ರಭಾಕರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.

ಫೇಸ್ ಬುಕ್ ನಲ್ಲಿ ಅವರ ಪೇಜ್ ಗೆ ಐವತ್ತು ಸಾವಿರಕ್ಕೂ ಅಧಿಕ ಲೈಕ್ಸ್ ಇದೆ. ದಿನಕ್ಕೆ ಮೂರ್ನಾಲ್ಕು ಬಾರಿ ಏನಾದರೂ ಅಪ್ ಡೇಟ್ ಮಾಡುವ ನಟಿ ಅನು ಪ್ರಭಾಕರ್ ಮೊನ್ನೆ ಶುಕ್ರವಾರ, ಅಂದ್ರೆ ಜುಲೈ 22 ರಂದು ಒಂದು ಸ್ಟೇಟಸ್ ಪೋಸ್ಟ್ ಮಾಡಿದ್ದರು. ಅಲ್ಲಿಂದ ಶುರುವಾಯ್ತು ನೋಡಿ, ಫೇಸ್ ಬುಕ್ ನಲ್ಲಿ ದೊಡ್ಡ ಸಮರ.! [ಅನು ಪ್ರಭಾಕರ್-ರಘು ಮುಖರ್ಜಿ 'ಎರಡನೇ' ವಿವಾಹ ಮಹೋತ್ಸವ]

ಅಸಲಿಗೆ, ಅನು ಪ್ರಭಾಕರ್ ಮಾಡಿದ ದೊಡ್ಡ ಎಡವಟ್ಟು ಏನು ಎಂಬುದರ ಸಂಪೂರ್ಣ ವರದಿ ಇಲ್ಲಿದೆ ಓದಿರಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

ನಟಿ ಅನು ಪ್ರಭಾಕರ್ ಹಾಕಿದ ಪೋಸ್ಟ್ ಏನು.?

ಜುಲೈ 22 ರಂದು ನಟಿ ಅನು ಪ್ರಭಾಕರ್ 'ಹ್ಯಾಪಿ ಕಬಾಲಿ ವೀಕೆಂಡ್ ಫ್ರೆಂಡ್ಸ್' ಅಂತ ತಮ್ಮ ಫೋಟೋ ಸಮೇತ ಸ್ಟೇಟಸ್ ಅಪ್ ಡೇಟ್ ಮಾಡಿದ್ದರು. ['ಕಬಾಲಿ' ಫೀವರ್: ಅಪ್ಪಟ ಕನ್ನಡ ಪ್ರೇಮಿ ಬರೆದಿರುವ ಪತ್ರ, ತಪ್ಪದೆ ಓದಿ.!]

ಶುರುವಾಯ್ತು ಗದ್ದಲ.!

ನಟಿ ಅನು ಪ್ರಭಾಕರ್ ಮಾಡಿದ್ದ ಪೋಸ್ಟ್, ಕನ್ನಡಿಗರನ್ನು ಬಡಿದೆಬ್ಬಿಸಿತು. ರೊಚ್ಚಿಗೆದ್ದ ಕೆಲವರು ನಟಿ ಅನು ಪ್ರಭಾಕರ್ ರನ್ನ ಫೇಸ್ ಬುಕ್ ನಲ್ಲಿ ತರಾಟೆಗೆ ತೆಗೆದುಕೊಂಡರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ..... [ಚಿತ್ರ ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!]

ಕನ್ನಡಿಗ ಕೇಳಿದ ಪ್ರಶ್ನೆ.!

''ಪ್ರತಿ ವಾರ ಕನ್ನಡ ಚಿತ್ರಗಳು ಬಿಡುಗಡೆ ಆಗ್ತಾನೆ ಇರುತ್ತೆ. ಆದ್ರೆ, ನೀವು ಯಾವತ್ತೂ ಕನ್ನಡ ಚಿತ್ರದ ಹೆಸರು ಹಾಕಿ ಹ್ಯಾಪಿ ವೀಕೆಂಡ್ ಅಂತ ಸ್ಟೇಟಸ್ ಹಾಕಿಲ್ಲ. ದಯವಿಟ್ಟು ಮೊದಲು ಕನ್ನಡ ಚಿತ್ರಗಳನ್ನ ಸಪೋರ್ಟ್ ಮಾಡಿ'' ಅಂತ ಅರುಣ್ ಕುಮಾರ್.ಎಸ್ ಎನ್ನುವವರು ರಿಪ್ಲೈ ಮಾಡಿದರು.

ಅನು ಪ್ರಭಾಕರ್ ಕೊಟ್ಟ ಉತ್ತರ.?

''ಒಳ್ಳೆಯ ಕನ್ನಡ ಸಿನಿಮಾಗಳನ್ನ ನಾನು ಯಾವಾಗಲೂ ನೋಡ್ತೀನಿ, ಕನ್ನಡ ಸಿನಿಮಾ ನನ್ನ ಜೀವನ. ಹೀಗಾಗಿ, ಕನ್ನಡ ಚಿತ್ರಗಳನ್ನ ಸಪೋರ್ಟ್ ಮಾಡುವ ಕುರಿತು ಯಾರೂ ನನಗೆ ಪಾಠ ಮಾಡುವ ಅವಶ್ಯಕತೆ ಇಲ್ಲ. ನಾನು ರಜನಿಕಾಂತ್ ರವರ ದೊಡ್ಡ ಅಭಿಮಾನಿ ಅಷ್ಟೇ'' ಅಂತ ನಟಿ ಅನು ಪ್ರಭಾಕರ್ ಪ್ರತಿಕ್ರಿಯೆ ನೀಡಿದರು.

ಕನ್ನಡದವರೋ, ತಮಿಳಿನವರೋ..? ಮೊದಲು ಹೇಳಿ...

ಕನ್ನಡಿಗರ ಜೊತೆ ನಟಿ ಅನು ಪ್ರಭಾಕರ್ ರವರ ವಾದ-ವಿವಾದ ಇಲ್ಲಿದೆ ನೋಡಿ...

ಡಬ್ಬಿಂಗ್ ವಿರೋಧ ಯಾಕೆ.?

''ನಿಮಗೆ ಹೇಗೆ ಯಾವ ಭಾಷೆಯಲ್ಲಾದರೂ ಚಿತ್ರ ನೋಡುವ ಹಕ್ಕು ಇದೆಯೋ, ನನಗೂ ನನ್ನ ಭಾಷೆಯಲ್ಲಿ ಸಿನಿಮಾ ನೋಡುವ ಹಕ್ಕು ಇದೆ. ಹೀಗಾಗಿ ಡಬ್ಬಿಂಗ್ ಕುರಿತು ಯಾಕೆ ನೀವು ವಿರೋಧ ವ್ಯಕ್ತ ಪಡಿಸುತ್ತೀರಾ.? ನೀವು ಕನ್ನಡತಿ ಆಗಿದ್ದರೆ, ಕನ್ನಡ ಭಾಷೆಯಲ್ಲಿ ಸಿನಿಮಾ ನೋಡಲು ನೀವು ಡಿಮ್ಯಾಂಡ್ ಮಾಡ್ಬೇಕಿತ್ತು'' ಅಂತ ಕರಮುಡಿ ಕುಮಾರ್ ಎನ್ನುವವರು ಅನು ಪ್ರಭಾಕರ್ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದರು.

ಸಾಲು ಸಾಲು ಕಾಮೆಂಟ್ ಗಳು.!

'ಕಬಾಲಿ' ಪ್ರೇಮ ತೋರಿಸಿದ ನಟಿ ಅನು ಪ್ರಭಾಕರ್ ವಿರುದ್ಧ ಸಾಲು ಸಾಲು ಕಾಮೆಂಟ್ ಗಳು ಬಿದ್ದಿರುವ ಪರಿ ಇದು.

ಹೋಲ್ ಸೇಲ್ ಉತ್ತರ ನೀಡಿದ ಅನು ಪ್ರಭಾಕರ್.!

''ನಾನು ಕನ್ನಡತಿ. ಅದನ್ನ ಸಾಬೀತು ಪಡಿಸಬೇಕಾಗಿಲ್ಲ. ಕನ್ನಡ ಸಿನಿಮಾನೇ ನನ್ನ ಜೀವನ. ಹಾಗಂತ ಬೇರೆ ಭಾಷೆಯ ಸಿನಿಮಾಗಳನ್ನ ನೋಡ ಬಾರದು ಅಂತ ಏನೂ ಇಲ್ಲ. ಸಿನಿಮಾಗೆ ಭಾಷೆ ಲಿಮಿಟ್ ಇಲ್ಲ. ಒಂದು ಒಳ್ಳೆ ಚಿತ್ರಕ್ಕೆ ಭಾಷೆಯ ಲಿಮಿಟ್ ಇಲ್ಲ. ನಾನು ನನ್ನ ಕುಟುಂಬ ಸದಾ ಟಿಕೆಟ್ ತಗೊಂಡು ಥಿಯೇಟರ್ ನಲ್ಲಿ ನೋಡ್ತೀವಿ. ಹೀಗಾಗಿ, ದಯವಿಟ್ಟು ದ್ವೇಷ ತುರುಕಬೇಡಿ. ಅದರಲ್ಲೂ ಕನ್ನಡ ಚಿತ್ರಗಳನ್ನ ವಿಶ್ವದಾದ್ಯಂತ ಹೊಗಳುತ್ತಿರುವ ಕಾಲದಲ್ಲಿ'' ಅಂತ ನಟಿ ಅನು ಪ್ರಭಾಕರ್ ಕಾಮೆಂಟ್ ಮಾಡಿದರು.

ಕಾಮೆಂಟ್ ಗಳು ನಿಲ್ಲಿಲ್ಲ.!

'ನಾನು ಹಾಗಲ್ಲ' ಅಂತ ನಟಿ ಅನು ಪ್ರಭಾಕರ್ ಹೇಳಿದರೂ, ಕಾಮೆಂಟ್ ಗಳು ನಿಲ್ಲಿಲ್ಲ. ''ಡಬ್ಬಿಂಗ್ ಬಂದರೆ ಕನ್ನಡ ಸಂಸ್ಕೃತಿ ಹಾಳಾಗುತ್ತೆ ಅಂತ ಹೇಳುವವರೇ ಪರಭಾಷೆಯ ಚಿತ್ರಗಳಿಗೆ ಪ್ರಚಾರ ನೀಡುತ್ತಾರೆ'' ಅಂತ ಹಲವಾರು ಕಾಮೆಂಟ್ ಗಳು ಶುರು ಆಯ್ತು.

ಭಯ ಆಗುತ್ತೆ.!

''ರಜನಿ ಫ್ಯಾನ್ ಎಂಬ ಕಾರಣಕ್ಕೆ ಜನರಿಗೆ ಇಷ್ಟೊಂದು ದ್ವೇಷ ಯಾಕೆ. ನನಗೆ ಭಯ ಆಗುತ್ತೆ. ಜಗತ್ತಿನ ಮೂಲೆ ಮೂಲೆಯಲ್ಲೂ ಒಬ್ಬ ಮನುಷ್ಯ ಮತ್ತೊಬ್ಬನನ್ನು ಕೊಲ್ಲುತ್ತಿರುವುದು ಆಶ್ಚರ್ಯವೇ ಇಲ್ಲ. ಎಲ್ಲಾ ಭಿನ್ನಾಭಿಪ್ರಾಯಗಳನ್ನ ಮನುಷ್ಯ ಸೃಷ್ಟಿಸುತ್ತಿರುವುದು. ದೇವರು ಅಲ್ಲ'' ಅಂತ ಅನು ಪ್ರಭಾಕರ್ ತಮ್ಮ ಫೇಸ್ ಬುಕ್ ವಾಲ್ ಮೇಲೆ ಬರೆದುಕೊಂಡಿದ್ದಾರೆ.

ಕೊನೆ ಸ್ಪಷ್ಟೀಕರಣ.!

ಜುಲೈ 22 ರ ಇಡೀ ದಿನ ಫೇಸ್ ಬುಕ್ ನಲ್ಲಿ ಆದ ರಗಳೆ ಕಂಡು ರೋಸಿಹೋದ ಅನು ಪ್ರಭಾಕರ್ ಕೊನೆಗೆ ಹಾಕಿದ ಸ್ಟೇಟಸ್ ಇದು.

English summary
Kannada Actress Anu Prabhakar had taken Facebook to express her excitement over Tamil Movie 'Kabali' release. But this has irked Kannadigas in Facebook.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada