»   » ಸದ್ದಿಲ್ಲದೆ ಮದುವೆಯಾದ ಅನು ಪ್ರಭಾಕರ್-ರಘು ಮುಖರ್ಜಿ ಹೇಳಿದ್ದೇನು?

ಸದ್ದಿಲ್ಲದೆ ಮದುವೆಯಾದ ಅನು ಪ್ರಭಾಕರ್-ರಘು ಮುಖರ್ಜಿ ಹೇಳಿದ್ದೇನು?

Posted By:
Subscribe to Filmibeat Kannada

ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅನು ಪ್ರಭಾಕರ್ ಅವರು ಮೊಟ್ಟ ಮೊದಲ ಬಾರಿಗೆ ಶಿವರಾಜ್ ಕುಮಾರ್ ಅವರ 'ಹೃದಯಾ ಹೃದಯಾ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡರು.

ಅಲ್ಲಿಂದ ಇಲ್ಲಿಯವರೆಗೆ ಸುಮಾರು 50 ಸಿನಿಮಾಗಳಲ್ಲಿ ನಟಿಸಿರುವ ನಟಿ ಅನು ಪ್ರಭಾಕರ್ ಅವರು ಹಿರಿಯ ನಟಿ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಅವರನ್ನು ವರಿಸಿದ್ದರು. ತದನಂತರ ಇಬ್ಬರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಆದ ನಂತರ ಇಬ್ಬರು ಬೇರೆ-ಬೇರೆಯಾಗಿದ್ದರು.[ನಟಿ ಅನು ಪ್ರಭಾಕರ್ ವಿಚ್ಛೇದನ ಕೋರಿ ಅರ್ಜಿ]

ಇದೀಗ ನಟಿ ಅನು ಪ್ರಭಾಕರ್ ಅವರು ಬಹುಭಾಷಾ ನಟ ಹಾಗೂ 'ಪ್ಯಾರಿಸ್ ಪ್ರಣಯ', 'ಸವಾರಿ' ಚಿತ್ರದ ಖ್ಯಾತಿಯ ನಟ ರಘು ಮುಖರ್ಜಿ ಅವರನ್ನು ಸದ್ದಿಲ್ಲದೇ ಬೆಂಗಳೂರಿನ ಯಲಹಂಕದಲ್ಲಿರುವ ದೊಡ್ಡಬಳ್ಳಾಪುರ ರಸ್ತೆ ಅನಂತಪುರ ಗೇಟ್ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ಕುಟುಂಬದವರ ಸಮ್ಮುಖದಲ್ಲಿ ತೀರಾ ಖಾಸಗಿಯಾಗಿ ಮದುವೆ ಮಾಡಿಕೊಂಡಿದ್ದಾರೆ.[ಅನು ಪ್ರಭಾಕರ್-ರಘು ಮುಖರ್ಜಿ 'ಎರಡನೇ' ವಿವಾಹ ಮಹೋತ್ಸವ]

ಕನ್ನಡ ಚಿತ್ರರಂಗದಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಟಿ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಅವರು ತಮ್ಮ ಮದುವೆ ಬಗ್ಗೆ ಏನು ಹೇಳಿದ್ದಾರೆ ಅನ್ನೋದನ್ನ ನೋಡಿ ಕೆಳಗಿನ ಸ್ಲೈಡುಗಳಲ್ಲಿ....

ಅನು ಪ್ರಭಾಕರ್ ಮನದಾಳದ ಮಾತುಗಳು

"ದಯವಿಟ್ಟು ಕ್ಷಮಿಸಬೇಕು ಅಣ್ಣ, ನನ್ನ ಸೋದರ ಮಾವ, ಅಮ್ಮ ಹಾಗೂ ರಘು ಅವರ ಕುಟುಂಬದವರು ಸೇರಿ ಮಾಡ್ತಿರೋದು ಮದುವೆ ಆಗಿದ್ದರಿಂದ ಬಹಳ ಖಾಸಗಿಯಾಗಿ ನೆರವೇರಿದೆ.[ಕನ್ನಡ ಥಳಕು ಬಳುಕಿನ ಲೋಕದಲ್ಲಿ ದಾಂಪತ್ಯದ ಹುಳುಕು]

ನಿಮ್ಮೆಲ್ಲರ ಆಶೀರ್ವಾದ ಇರಲಿ - ಅನು ಪ್ರಭಾಕರ್

"ನೀವು (ಮಾಧ್ಯಮದವರು) ಆವಾಗ್ಲೇ ಬಂದು ಬಹಳ ಹೊತ್ತಿನಿಂದ ಕಾಯುತ್ತಾ ಕುಳಿತಿದ್ರಿ, ಆದರೆ ಖಾಸಗಿ ಕಾರ್ಯಕ್ರಮ ಆದ್ದರಿಂದ ಯಾರನ್ನೂ ಒಳಗೆ ಬಿಡಲು ಆಗಲಿಲ್ಲ. ನೀವೆಲ್ಲರೂ ಬಂದಿದ್ದು ತುಂಬಾ ಖುಷಿ ಆಯಿತು. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ, ಲೆಕ್ಕ ಇಲ್ಲದಂಗೆ ನನಗೆ ತುಂಬಾನೇ ಪ್ರೀತಿ ತೋರಿಸಿದ್ದೀರಾ ಇನ್ನು ಮುಂದೆ ನನಗೆ ತೋರಿಸಿದ ಹಾಗೆ ರಘು ಅವರಿಗೂ ಪ್ರೀತಿ ತೋರಿಸಿ ಅಂತ ಕೇಳಿಕೊಳ್ಳುತ್ತೇನೆ".- ಅನು ಪ್ರಭಾಕರ್

2 ತಿಂಗಳ ಹಿಂದೆ ಪ್ಲ್ಯಾನ್ ಮಾಡಿದ್ದ ಎರಡು ಕುಟುಂಬ

"ಎರಡು ತಿಂಗಳ ಹಿಂದೆ ಮದುವೆ ಮಾಡುವ ಬಗ್ಗೆ ಎರಡು ಕುಟುಂಬದವರು ಪ್ಲ್ಯಾನ್ ಮಾಡಿದ್ದರು. ತಾಯಂದಿರು ಇಬ್ಬರು ಸಲಹೆ ಕೊಟ್ಟು ಮದುವೆ ಆಗಿ ಅಂತ ಹೇಳಿದ್ದರಿಂದ ಅವರ ಅಸೆಯಂತೆ ಇಂದು ಮದುವೆ ಆದ್ವಿ. ಎರಡು ಕುಟುಂಬಗಳು ಸೇರಿ ನಿರ್ಧಾರ ಮಾಡಿರುವ ಮದುವೆ". ಅನು ಪ್ರಭಾಕರ್

ಸ್ನೇಹ ಇದೇ ರೀತಿ ಮುಂದುವರಿಯುತ್ತೆ

"ತುಂಬಾ ಖುಷಿ ಆಗ್ತಿದೆ, ಇವತ್ತು ನಾನು ಮತ್ತು ರಘು ಅವರು ಮದುವೆ ಮಾಡಿಕೊಂಡಿದ್ದೇವೆ, ತುಂಬಾ ವರ್ಷಗಳಿಂದ ನಮ್ಮಿಬ್ಬರ ನಡುವೆ ಸ್ನೇಹ ಸಂಬಂಧ ಇತ್ತು. ಇದನ್ನ ನೋಡಿ ನಮ್ಮಿಬ್ಬರ ಮನೆಯವರು ಇವರಿಬ್ಬರಿಗೆ ಮದುವೆ ಮಾಡಿದರೆ ಹೇಗೆ ಅಂತ ಯೋಚನೆ ಮಾಡಿ ಇಷ್ಟಪಟ್ಟು ಮದುವೆ ಮಾಡಿದ್ದಾರೆ. ಈಗ ಯಾವ ರೀತಿ ಸ್ನೇಹ ಸಂಬಂಧ ಇಟ್ಟುಕೊಂಡಿದ್ದೇವೆಯೋ ಹಾಗೆ ಮುಂದೆಯೂ ಅದನ್ನೇ ಮುಂದುವರಿಸುತ್ತೇವೆ'.- ಅನು ಪ್ರಭಾಕರ್

ರಘು ಮುಖರ್ಜಿ ಮನದಾಳದ ಮಾತುಗಳು

"ನಾವೆಲ್ಲ ನಿಮ್ಮ ಮುಂದೆ ಬರ್ಬೆಕು ಅಂತ ಅಂದುಕೊಂಡಿದ್ದೆವು ಆದರೆ ಬರೋಕ್ಕಾಗಲಿಲ್ಲ, ನೀವೆಲ್ಲಾ ತುಂಬಾ ಹೊತ್ತಿನಿಂದ ಬಿಸಿಲಿನಲ್ಲಿ ಕಾಯುತ್ತಾ ಇದ್ರಿ. ಮದುವೆ ಆದ ಮೇಲೆ ನಿಮ್ಮ ಜೊತೆ ಮಾತಾಡೋಣ ಅಂತ ಈಗ ನಿಮ್ಮ ಮುಂದೆ ಬಂದ್ವಿ". ರಘು ಮುಖರ್ಜಿ

ಆಶೀರ್ವಾದ ಇರಲಿ

"ನಾನು ಏನು ಕೇಳಿಕೊಳ್ಳುವುದು ಅಂದರೆ ಇಡೀ ಕರ್ನಾಟಕದ ಜನತೆಯ ಹಾಗೂ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ. ಎರಡು ಮನೆಯವರ ಒಪ್ಪಿಗೆ ಮೇರೆಗೆ ಈ ಮದುವೆ ನಡೆಯುತ್ತಿದೆ. ಈ ಮದುವೆಯಿಂದ ನಾವು ಮಾತ್ರವಲ್ಲದೇ ಎರಡು ಮನೆಯವರು ಸೇರಿ ಎಲ್ಲರೂ ಖುಷಿಪಟ್ಟಿದ್ದಾರೆ. ಅನು ಬಗ್ಗೆ ತುಂಬಾ ವರ್ಷಗಳಿಂದ ನನಗೆ ಚೆನ್ನಾಗಿ ಗೊತ್ತು, ನಾವು ಸಂತೋಷವಾಗಿ ಇರುತ್ತೇವೆ". -ರಘು ಮುಖರ್ಜಿ

English summary
Kannada Actress Anu Prabhakar ties knot Actor Raghu Mukherjee in Bengaluru, Today (April 25th).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada