For Quick Alerts
  ALLOW NOTIFICATIONS  
  For Daily Alerts

  5 ವರ್ಷಗಳ ಬಳಿಕ ರೀ ರಿಲೀಸ್ ಆಗುತ್ತಿದೆ ಸೂಪರ್ ಹಿಟ್ ಸಿನಿಮಾ 'ರಂಗಿತರಂಗ'

  |

  ನಿರೂಪ್ ಭಂಡಾರಿ ನಟನೆಯ ಅನೂಪ್ ಭಂಡಾರಿ ನಿರ್ದೇಶನದ ಸೂಪರ್ ಹಿಟ್ ರಂಗಿತರಂಗ ಸಿನಿಮಾ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದೆ. ಸುಮಾರು 5 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ರಂಗಿತರಂಗ ಸಿನಿಮಾವನ್ನು ಇನ್ನೂ ನೋಡದವರು ಚಿತ್ರಮಂದಿರಗಳಲ್ಲಿ ನೋಡಿ ಎಂಜಾಯ್ ಮಾಡುವ ಅವಕಾಶ ಮತ್ತೆ ಬಂದಿದೆ.

  ಅಂದ್ಹಾಗೆ ಲಾಕ್ ಡೌನ್ ಬಳಿಕ ಚಿತ್ರಮಂದಿಗಳು ಓಪನ್ ಆಗಿ ಕೆಲವೇ ದಿನಗಳಾಗಿದೆ. ಹೊಸ ಸಿನಿಮಾಗಳನ್ನು ರಿಲೀಸ್ ಮಾಡಲು ಯಾರು ಮುಂದೆ ಬರ್ತಿಲ್ಲ. ಹಾಗಾಗಿ ಈಗಾಗಲೇ ರಿಲೀಸ್ ಆಗಿರುವ ಸಿನಿಮಾಗಳ ರೀ ರಿಲೀಸ್ ಗೆ ಅವಕಾಶ ಸಿಕ್ಕಿದೆ. ಸಾಕಷ್ಟು ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. ಕಳೆದ ವಾರ ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಸಿನಿಮಾ ರಿಲೀಸ್ ಆಗಿತ್ತು.

  'ಫ್ಯಾಂಟಮ್' ಲೋಕಕ್ಕೆ ಲಂಡನ್ ನಿಂದ ಬಂದ ಸಂಜು: ವಿಶ್ ಮಾಡಿದ ವಿಕ್ರಾಂತ್ ರೋಣ'ಫ್ಯಾಂಟಮ್' ಲೋಕಕ್ಕೆ ಲಂಡನ್ ನಿಂದ ಬಂದ ಸಂಜು: ವಿಶ್ ಮಾಡಿದ ವಿಕ್ರಾಂತ್ ರೋಣ

  ರಂಗಿತರಂಗ ಸಿನಿಮಾ 2015 ಜುಲೈ 3ರಲ್ಲಿ ತೆರೆಗೆ ಬಂದಿತ್ತು. ಹೊಸಬರಾಗಿದ್ದ ಭಂಡಾರಿ ಬ್ರದರ್ಸ್ ಮೊದಲ ಸಿನಿಮಾಗೆ ಕನ್ನಡ ಸಿನಿಮಾಪ್ರಿಯರು ಮನಸೋತಿದ್ದರು. ಸ್ಯಾಂಡಲ್ ವುಡ್ ಮಾತ್ರವಲ್ಲದೆ ದೇಶ ವಿದೇಶದಲ್ಲೂ ಸಿನಿಮಾ ಸಖತ್ ಸದ್ದು ಮಾಡಿತ್ತು. ರಿಲೀಸ್ ಆದ ಪ್ರಾರಂಭದಲ್ಲಿ ಚಿತ್ರಮಂದಿರಳು ಸಿಗದೆ ಸಿನಿಮಾತಂಡ ಒದ್ದಾಡಿತ್ತು. ಬಳಿಕ ಸಿನಿಮಾ ಅದ್ಭುತವಾಗಿದೆ ಎಂದು ಗೊತ್ತಾಗುತ್ತಿದಂತೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಯಿತು.

  ಎಲ್ಲರ ಮುಂದೆ ಅಭಿಮಾನಿಯನ್ನು ಪ್ರೀತಿಯಿಂದ ಮಾತನಾಡಿಸಿದ ಡಿ ಬಾಸ್ | Darshan | Munirathna | Filmibeat Kannada

  ಚಿತ್ರದಲ್ಲಿ ನಿರೂಪ್ ಭಂಡಾರಿ ನಾಯಕಿಯಾಗಿ ಕಾಣಿಸಿಕೊಂಡರೇ, ನಾಯಕಿಯರಾಗಿ ರಾಧಿಕಾ ನಾರಾಯಣ್, ಆವಂತಿಕಾ ಶೆಟ್ಟಿ ನಟಿಸಿದ್ದರು. ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಮತ್ತೆ ರಂಗಿತರಂಗ ತೆರೆಗೆ ಬರ್ತಿದೆ. ಐನಾಕ್ಸ್, ಸಿನಿಪೊಲಿಸ್ ಸೇರಿದಂತೆ ಮಲ್ಟಿಫ್ಲೆಕ್ಸ್ ಗಳಲ್ಲಿ ರಿಲೀಸ್ ಆಗುತ್ತಿದೆ.

  English summary
  Nirup Bhandari starrer Super hit Rangitaranga movie re-released today after 5 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X