For Quick Alerts
  ALLOW NOTIFICATIONS  
  For Daily Alerts

  ಓಂ ಪ್ರಕಾಶ್ ರಾವ್ ಚಿತ್ರದಲ್ಲಿ ಅನುಪಮ್ ಖೇರ್

  By Rajendra
  |

  ಬಾಲಿವುಡ್ ಚಿತ್ರರಂಗದ ಹೆಸರಾಂತ ನಟ ಅನುಪಮ್ ಖೇರ್ ಕನ್ನಡಕ್ಕೆ ಬರುವುದು ಬಹುತೇಕ ಗ್ಯಾರಂಟಿಯಾಗಿದೆ. ಈ ಹಿಂದೆ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನವನ್ನು ಹೇಮಂತ್ ಹೆಗಡೆ ಮಾಡಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಹೇಮಂತ್ ಅವರ 'ನಿಂಬೆ ಹುಳಿ' ಚಿತ್ರಕ್ಕೆ ಅನುಪಮ್ ಕಡೆಗೂ ಬರಲೇ ಇಲ್ಲ.

  ಈಗ ಓಂ ಪ್ರಕಾಶ್ ರಾವ್ ಅವರು ತಮ್ಮ 'ಅಯ್ಯ' ಚಿತ್ರಕ್ಕೆ ಅನುಪಮ್ ಖೇರ್ ಅವರನ್ನು ಕರೆಸುತ್ತಿದ್ದಾರೆ. ಈಗಾಗಲೆ ಖೇರ್ ಜೊತೆ ಮಾತುಕತೆಯೂ ಆಗಿದೆಯಂತೆ. 'ಅಯ್ಯ' ಚಿತ್ರದಲ್ಲಿ ಅಭಿನಯಿಸುವ ಬಗ್ಗೆ ಅವರು ಒಪ್ಪಿಗೆಯನ್ನೂ ಕೊಟ್ಟಿದ್ದಾರೆ ಎನ್ನುತ್ತಾರೆ ಓಂ.

  ಸದ್ಯಕ್ಕೆ ಅನುಪಮ್ ಖೇರ್ ಅವರು ಲಂಡನ್ ಪ್ರವಾಸದಲ್ಲಿದ್ದಾರಂತೆ. ಅಲ್ಲಿಂದ ವಾಪಸ್ ಆದ ಬಳಿಕ ಅವರು ಅಯ್ಯ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಓಂ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಚಿತ್ರದಲ್ಲಿ ಅವರದು ಕೇಂದ್ರ ಸಚಿವನ ಪಾತ್ರ.

  ಉತ್ತಮ ಆಡಳಿತಕ್ಕೆ ಹೆಸರಾದ ಅವರನ್ನು ಕೊಲ್ಲಲು ಪ್ಲಾನ್ ಮಾಡಲಾಗುತ್ತದೆ. ಅವರು ಕರ್ನಾಟಕಕ್ಕೆ ಬಂದಾಗ ಅವರನ್ನು ಮುಗಿಸಲು ಸ್ಕೆಚ್ ಹಾಕಲಾಗುತ್ತದೆ. ಆದರೆ ಅದು ಸಾಧ್ಯವಾಗುವುದಿಲ್ಲ. ಕಾರಣ ಕರ್ನಾಟಕದ ಸೂಪರ್ ಕಾಪ್ 'ಅಯ್ಯ'.

  'ಅಯ್ಯ'ನ ಚಾಣಾಕ್ಷ ತನದಿಂದ ಕೇಂದ್ರ ಸಚಿವರು ಪಾರಾಗುತ್ತಾರೆ. ಅದೇನು ಎಂಬುದನ್ನು ತೆರೆಯ ಮೇಲೆ ನೋಡಿ ಎನ್ನುತ್ತಿದ್ದಾರೆ ಓಂ ಪ್ರಕಾಶ್ ರಾವ್. ಅ.23ರಿಂದ ಚಿತ್ರ ಆರಂಭವಾಗಲಿದ್ದು ನ.6ರ ತನಕ ಸತತ ಚಿತ್ರೀಕರಣ ನಡೆಯಲಿದೆ. (ಏಜೆನ್ಸೀಸ್)

  English summary
  Bollywood veteran and critically acclaimed star Anupam Kher is all set mark his debut in Sandalwood industry very soon. Kher plays a central minister in Om Prakash Rao directed forthcoming film 'Ayya'. However the role isn't a full fledged one as it is just a cameo in which he will star.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X