»   » ಎಫ್.ಟಿ.ಟಿ.ಐ ನೂತನ ಅಧ್ಯಕ್ಷರಾಗಿ ನಟ ಅನುಪಮ್ ಖೇರ್ ಆಯ್ಕೆ

ಎಫ್.ಟಿ.ಟಿ.ಐ ನೂತನ ಅಧ್ಯಕ್ಷರಾಗಿ ನಟ ಅನುಪಮ್ ಖೇರ್ ಆಯ್ಕೆ

Posted By:
Subscribe to Filmibeat Kannada

ಭಾರತದ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (Film and Television Institute of India) ನೂತನ ಅಧ್ಯಕ್ಷರಾಗಿ ಬಾಲಿವುಡ್ ನಟ ಅನುಪಮ್ ಖೇರ್ ಬುಧವಾರ (ಅಕ್ಟೋಬರ್ 11) ಆಯ್ಕೆಯಾಗಿದ್ದಾರೆ.

65 ವರ್ಷದ ಬಾಲಿವುಡ್ ನಟ ಅನುಪಮ್ ಖೇರ್, ಗಜೇಂದ್ರ ಚೌಹಣ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಗಜೇಂದ್ರ ಚೌಹಣ್ ಅವರು ಜೂನ್ 9, 2015 ರಿಂದ ಎಫ್.ಟಿ.ಟಿ.ಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

Anupam Kher Selected new FTII chairman

ಅನುಪಮ್ ಖೇರ್ ಹಿಂದಿ ಚಿತ್ರರಂಗದ ಖ್ಯಾತ ನಟ, ನಿರ್ದೇಶಕರಾಗಿದ್ದು, ಸುಮಾರು 500ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೇವಲ ಬಾಲಿವುಡ್ ಮಾತ್ರವಲ್ಲದೇ, ಹಾಲಿವುಡ್ ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಇವರ ನೀಡಿರುವ ಸೇವೆಯನ್ನ ಪರಿಗಣಿಸಿ 2004 ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2016ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ.

ಕನ್ನಡದ 'ಆಚಾರ್ಯ ಅರೆಸ್ಟ್' ಚಿತ್ರದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್

English summary
Actor Anupam Kher was on Wednesday (October 11th) appointed as the chairman of Film and Television Institute of India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada