»   » ಅರ್ಜುನ್, ದುನಿಯಾ ವಿಜಯ್ ಕೈಹಿಡಿದ ಬ್ರೂಸ್ ಲೀ

ಅರ್ಜುನ್, ದುನಿಯಾ ವಿಜಯ್ ಕೈಹಿಡಿದ ಬ್ರೂಸ್ ಲೀ

Posted By:
Subscribe to Filmibeat Kannada
ಯಶಸ್ವಿ ಚಿತ್ರ ಅದ್ದೂರಿ ನಿರ್ದೇಶಕ ಎಪಿ ಅರ್ಜುನ್ ಅವರ ಮುಂದಿನ ಚಿತ್ರಕ್ಕೆ ದುನಿಯಾ ವಿಜಯ್ ನಾಯಕರು ಎಂಬ ವಿಷಯ ಈಗಾಗಲೇ ಜಗಜ್ಜಾಹೀರಾಗಿದೆ. ಅಂಬಾರಿ ಹಾಗೂ ಅದ್ದೂರಿಯಲ್ಲಿ ಹೊಸಬರೊಂದಿಗೆ ಸಿನಿಮಾ ಮಾಡಿ ಗೆದ್ದ ಅರ್ಜುನ್, ಮಂಬರುವ ಚಿತ್ರಕ್ಕೆ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಎನಿಸಿಕೊಂಡಿರುವ ದುನಿಯಾ ವಿಜಯ್ ಆಯ್ಕೆ ಮಾಡಿರುವುದು ವಿಶೇಷ. ಮತ್ತೊಂದು ವಿಶೇಷವೆಂಬಂತೆ ಚಿತ್ರಕ್ಕೆ ಹಸರು ಪಕ್ಕಾ ಆಗಿದೆ.

ಅರ್ಜುನ್, ದುನಿಯಾ ವಿಜಯ್ ಸಂಗಮದ ಈ ಚಿತ್ರಕ್ಕೆ 'ಬ್ರೂಸ್ ಲೀ' ಎಂದು ನಾಮಕರಣ ಮಾಡಲಾಗಿದೆ. ಈ ಮೊದಲು ಈ ಹೆಸರನ್ನು ಕೋಮಲ್ ಹಾಗೂ ಜಯಣ್ಣ ಸಂಗಮದ ಇನ್ನೊಂದು ಚಿತ್ರಕ್ಕೆ ಇಡಲು ಯೋಚಿಸಲಾಗಿತ್ತು. ಆದರೀಗ 'ಬ್ರೂಸ್ ಲೀ' ಕೋಮಲ್ ಕೈಜಾರಿ ವಿಜಯ್ ಪಾಲಾಗಿದೆ. ಕೋಮಲ್ ಖುಷಿಯಿಂದಲೇ ಬಿಟ್ಟುಕೊಟ್ಟಿದ್ದಾರೆಂಬುದು ವಿಶೇಷ ಸಂಗತಿ.

ಅಂಬಾರಿ ಸೂಪರ್ ಹಿಟ್ ಆದ ನಂತರ ಅದ್ದೂರಿ ಮೂಲಕ ಪ್ರೇಕ್ಷಕರೆದುರು ಬರಲು ಬರೋಬ್ಬರಿ ಎರಡು ವರ್ಷಗಳ ಅಂತರ ತೆಗೆದುಕೊಂಡಿದ್ದರು ಅರ್ಜುನ್. ಆದರೆ ಈಗ ಹಾಗಾಗಿಲ್ಲ, ಅದ್ದೂರಿ 50 ದಿನ ಪೂರೈಸಿ ಮುನ್ನುಗ್ಗುತ್ತಿದ್ದಂತೆ ಇತ್ತ ನಿರ್ದೇಶಕ ಅರ್ಜುನ್ ಹೊಸ ಚಿತ್ರ 'ಬ್ರೂಸ್ ಲೀ' ತಯಾರಿಯಲ್ಲಿ ತೊಡಗಿದ್ದಾರೆ. ಅರ್ಜುನ್ ಚಿತ್ರದ ನಿರ್ಮಾಣವನ್ನು ವಹಿಸಿಕೊಂಡಿರುವವರು ನಿರ್ಮಾಪಕ ಜಯಣ್ಣ.

ಸದ್ಯವೇ ಹೊಸ ಸ್ಕ್ರಿಪ್ಟ್ ಸಿದ್ಧಪಡಿಸಲು ಕುಳಿತುಕೊಳ್ಳಲಿದ್ದಾರೆ ಅರ್ಜುನ್. ಇತ್ತೀಚಿಗಷ್ಟೇ ರಜನಿಕಾಂತ್ ಚಿತ್ರ ಮುಗಿಸಿ ಚಕ್ರವರ್ತಿ ಚಿತ್ರೀಕರಣಕ್ಕೆ ಸಿದ್ಧರಾಗಿರುವ ದುನಿಯಾ ವಿಜಯ್, ಆನಂತರ ಅರ್ಜುನ್ ಅವರ ಹೊಸ ಚಿತ್ರ ಬ್ರೂಸ್ ಲೀ ಯಲ್ಲಿ ನಟಿಸಲಿದ್ದಾರೆ. ಇತ್ತೀಚಿಗೆ ತಮ್ಮ ಅದ್ದೂರಿ ಚಿತ್ರದ ಪ್ರಚಾರಕಾರ್ಯದಲ್ಲೇ ಮುಳುಗಿ ಹೋಗಿದ್ದ ಅರ್ಜುನ್, ಈಗಲೂ ಅದರಿಂದ ಈಚೆ ಬಂದಿಲ್ಲ. ಅವರ ಡೆಡಿಕೇಶನ್ ಗಾಂಧಿನಗರದ ಮೆಚ್ಚುಗೆ ಗಳಿಸಿದೆ.

ಅರ್ಜುನ್ ನಿರ್ದೇಶನದ ಅದ್ದೂರಿ ಚಿತ್ರ ಅಂದುಕೊಂಡಿದ್ದಕ್ಕಿಂತ ಹೆಚ್ಚು ಯಶಸ್ವಿಯಾಗಿದೆ. 50 ದಿನಗಳನ್ನು ಪೂರೈಸಿ ಇನ್ನೂ ಜನಭರಿತ ಪ್ರದರ್ಶನ ದಾಖಲಿಸುತ್ತಿದೆ. ನಿರ್ದೇಶಕ ಅರ್ಜುನ್ ಈ ಚಿತ್ರದ ಮೂಲಕ ಹೆಚ್ಚು ಎತ್ತರಕ್ಕೇರಿದ್ದರೆ ನವನಟ ಧ್ರುವ ಸರ್ಜಾ ಕನ್ನಡದ ಹೊಸ ಸ್ಟಾರ್ ಆಗುವ ಹಾದಿಯಲ್ಲಿದ್ದಾರೆ. ಇನ್ನು ನಟಿ ರಾಧಿಕಾ ಪಂಡಿತ್ ಅವರಿಗೆ ಅದ್ದೂರಿ ಮೂಲಕ ಎಕ್ಸ್ ಟ್ರಾ ಬೋನಸ್ ಸಿಕ್ಕಂತಾಗಿದೆ.

ಹೀಗಾಗಿ, ಸ್ಯಾಂಡಲ್ ವುಡ್ ಪ್ರೇಕ್ಷಕರ ಮನ ಗೆದ್ದಿರುವ ನಿರ್ದೇಶಕ ಅರ್ಜುನ್ ಅವರ ಮುಂದಿನ ಚಿತ್ರಕ್ಕಾಗಿ ಪ್ರೇಕ್ಷಕರು ಕಾಯುವಂತಾಗಿದೆ. ಇದನ್ನು ಅರಿತಿರುವ ಅರ್ಜುನ್, ತಡಮಾಡದೇ ಮುಂದಿನ ಚಿತ್ರ 'ಬ್ರೂಸ್ ಲೀ'ಗೆ ಸಿದ್ಧರಾಗಿದ್ದಾರೆ. ತಮ್ಮ ಅಭಿಮಾನಿಗಳು ಹಾಗೂ ಗಾಂಧಿನಗರದ ಜನರ ಅಭಿಲಾಷೆಗೆ ಬೆಲೆಕೊಟ್ಟು ತಕ್ಷಣ ಸ್ಪಂದಿಸಿರುವ ಅರ್ಜುನ್, ದುನಿಯಾ ವಿಜಯ್ ನಾಯಕತ್ವದ ಚಿತ್ರದೊಂದಿಗೆ ಮತ್ತೆ ಪ್ರೇಕ್ಷಕರೆದುರು ಪ್ರತ್ಯಕ್ಷವಾಗಲಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Director Ap Arjun to direct a new movie titled 'Bruce Lee' very soon under Jayanna Production. Duniya Vijay is the Hero for that Arjun's upcoming movie. This AP Arjun directed second movie 'Addhri' recorded a Grand Success in Sandalwood and screening successfully. 
 
Please Wait while comments are loading...