ಐಐಎಫ್‌ಟಿ: ನಟನೆ, ನಿರ್ದೇಶನ ತರಬೇತಿಗಾಗಿ ಅರ್ಜಿ ಆಹ್ವಾನ

ಇದಲ್ಲದೆ ಚಲನಚಿತ್ರ ಮತ್ತು ಟಿವಿ ನಿರ್ದೇಶನ ಹಾಗೂ ಸಂಕಲನ ಕಲೆಗಳಿಗೆ ಸಂಬಂಧಿಸಿದಂತೆಯೂ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು. ಖ್ಯಾತ ನಿರ್ದೇಶಕ ದೊರೆ ಭಗವಾನ್ ಅವರು ಸಂಸ್ಥೆಯ ಪ್ರಾಂಶುಪಾಲರಾಗಿದ್ದರೆ. ತಿಪಟೂರು ರಘು ಅವರು ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಇಬ್ಬರು ಖ್ಯಾತನಾಮರ ಮಾರ್ಗದರ್ಶನದಲ್ಲಿ ಸಂಸ್ಥೆಗೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಪ್ರಕಾಶ್ ಟಿ.ಎಂ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಮಹಾಲಕ್ಷ್ಮಿಪುರಂನಲ್ಲಿರುವ ಈ ತರಬೇತಿ ಕಲಿಕಾ ಕೇಂದ್ರದಲ್ಲಿ ನುರಿತ ಅಧ್ಯಾಪಕ ವೃಂದವಿದ್ದು, ವಿದ್ಯಾರ್ಥಿಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತಿ ನೀಡಲಾಗುವುದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಬ್ಯಾಚ್‌ಗಳಲ್ಲಿ ತರಬೇತಿ ನೀಡಲಾಗುತ್ತದೆ. ಮೊದಲ ಬ್ಯಾಚ್ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಮತ್ತು ಉದ್ಯೋಗಸ್ಥರಿಗೆ ಅನುಕೂಲವಾಗುವಂತೆ ಸಂಜೆ 6 ರಿಂದ 8 ಗಂಟೆಯ ವರೆಗೆ ತರಬೇತಿ ನೀಡಲಾಗುವುದು ಎಂದು ಪ್ರಕಾಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಶುಲ್ಕ ನೀಡಿಕೆಗೆ ಅವಕಾಶವಿದೆ. ಅಭಿನಯ ಮತ್ತು ನಿರ್ದೇಶನ ವಿಭಾಗದಲ್ಲಿ ಮಹಿಳೆಯರಿಗೆ ಶಿಕ್ಷಣ ಶುಲ್ಕದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲಾಗುವುದು ಮತ್ತು ಹೊರ ಊರಿನ ವಿದ್ಯಾರ್ಥಿಗಳಿಗೆ ಪಿ.ಜಿ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಿಲ್ಮ ಟೆಕ್ನಾಲಜಿ-ಐಐಎಫ್‌ಟಿ (ರಿ), # 80, ಅನಿಕೇತನ, 14ನೇ 'ಬಿ' ಮೇನ್, 2ನೇ ಸ್ಟೇಜ್, 2ನೇ ಫೇಸ್, ನಂದಿನಿ ಚಿತ್ರಮಂದಿರದ ಹಿಂಭಾಗ, ಮಹಾಲಕ್ಷ್ಮಿಪುರಂ, ಬೆಂಗಳೂರು-560086. ಇಲ್ಲಿಗೆ ಖುದ್ದಾಗಿ ಭೇಟಿ ನೀಡಿ ಪಡೆದುಕೊಳ್ಳಬಹುದು.
ಇಲ್ಲವೆ ದೂರವಾಣಿ : 080- 2349 0314 ಅಥವಾ ಮೊಬೈಲ್: 96638 08273 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಇಮೇಲ್: [email protected]ಗೆ ಇಮೇಲ್ ಮಾಡುವ ಮೂಲಕ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ವೆಬ್‌ಸೈಟ್ www.iftbengaluru.comಗೆ ಭೇಟಿ ನೀಡಬಹುದು.
ತಿಪಟೂರು ರಘು (98455 37734) ಟಿ.ಎಂ. ಪ್ರಕಾಶ್ (94820 18861) ದೊರೆ-ಭಗವಾನ್ (94484 89097) ಇವರಿಗೆ ನೇರವಾಗಿ ಕರೆ ಮಾಡುವ ಮೂಲಕವೂ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. (ಒನ್ಇಂಡಿಯಾ ಕನ್ನಡ)


Click it and Unblock the Notifications











