»   » ಲಾಸ್ಟ್ ಛಾನ್ಸ್: ಆರಂಭ ಟೈಟಲ್ ಡಿಜೈನ್ ಸ್ಪರ್ಧೆ

ಲಾಸ್ಟ್ ಛಾನ್ಸ್: ಆರಂಭ ಟೈಟಲ್ ಡಿಜೈನ್ ಸ್ಪರ್ಧೆ

Posted By:
Subscribe to Filmibeat Kannada
Director S Abhi Hanakere
ಟೈಟಲ್ ಏನೋ ಚೆನ್ನಾಗಿದೆ, ಆದ್ರೆ ಅದರ ಡಿಸೈನ್ ಹೀಗೆ ಇರಬೇಕಿತ್ತು, ಹಾಗಿರಬೇಕಿತ್ತು, ಡಿಜೈನ್ ಬೇರೆ ಥರ ಇದ್ರೆ ಚೆನ್ನಾಗಿರೋದು...ಹಂಗೆ, ಹಿಂಗೆ. ಈ ರೀತಿ ತುಂಬಾ ಸಲ ನೀವೇ ಮಾತನಾಡ್ತಾ ಇರ್ತೀರಿ. ನಿಜಾ ತಾನೆ? ಆದ್ರೆ ಈ ಸಲ ಸುಮ್ನೆ ಎಲ್ಲೋ ಕೂತ್ಕೊಂಡು ಬರೀ ಮಾತನಾಡಲು ಅವಕಾಶವಿಲ್ಲ, ಬನ್ನಿ ನೀವೇ ಡಿಸೈನ್ ಮಾಡಿ, ಅವಕಾಶ ನಾವ್ ಕೊಡ್ತೀವಿ ಅನ್ತಾಯಿದೆ ಕನ್ನಡದ ಒಂದು ಚಿತ್ರ ತಂಡ.

ಬರೀ ಡಿಸೈನ್ ಅಲ್ಲ. ಆಯ್ಕೆ ಆದವರಿಗೆ ತಮ್ಮ ಸಿನಿಮಾದಲ್ಲಿ ಕೆಲಸ ಮಾಡೋಕೆ ಅವಕಾಶ ಕೂಡ ಕಲ್ಪಿಸುತ್ತಾರಂತೆ, ನೀವು ಡಿಸೈನ್ ಮಾಡಿ ಕಳುಹಿಸಬೇಕಾದ ಟೈಟಲ್ ಹೀಗಿದೆ. "ಆರಂಭ" The Last Chance.

ಮೀಸೆ ಪ್ರಕಾಶ್ @ ಮಧುಗಿರಿ ಪ್ರಕಾಶ್ ಗಾಂಧಿನಗರದಲ್ಲಿ ಬಹು ಪರಿಚಿತ ಹೆಸರು, 25 ವರ್ಷಗಳ ಹಿಂದೆ ಇಂಡಸ್ಟ್ರಿನಲ್ಲಿ ಹೀರೋ ಆಗಬೇಕು ಅಂತ ಬಂದು, ಅನಿವಾರ್ಯ ಕಾರಣಗಳಿಂದ ಪ್ರೊಡಕ್ಷನ್ ಮೇನೇಜರ್ ಆಗಿ, ಬರೀ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದವರು. ತಮ್ಮ ಹಣೆಬರಹದಲ್ಲಿ ಇರದಿದ್ದನ್ನು ಈಗ ತಮ್ಮ ಮಗನ ಹಣೆಯಲ್ಲಿ ಕಾಣಲು ಹೊರಟಿದ್ದಾರೆ ಮೀಸೆ ಪ್ರಕಾಶ್.

ತಮ್ಮ ಮಗನ್ನ ನಾಯಕ ನಟನನ್ನಾಗಿ ಮಾಡಿ ತಮ್ಮ ಕನಸನ್ನು ಈಡೇರಿಸಿಕೊಳ್ಳುವ ತವಕ ಅವರದ್ದು. ವಿಲನ್ ಆಗಿ, ಹಾಸ್ಯ ನಟನಾಗಿ, ಒಟ್ಟಿನಲ್ಲಿ ಪೋಷಕ ಕಲಾವಿದನಾಗಿ ರಾಜ್, ಧರ್ಮ, ಮಠ, ತರ್ಲೆ ನನ್ಮಗ, ಭೀಮಾ ತೀರದಲ್ಲಿ, ಆ ದಿನಗಳು, ಭಾಗ್ಯದ ಬಳೆಗಾರ, ಕಂಠಿ ಇನ್ನೂ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಆರಂಭ, "The Last Chance" ಚಿತ್ರದ ಸಂಗೀತದ ಜವಾಬ್ದಾರಿ ಸಂಗೀತ ಮಾಂತ್ರಿಕ "ಗುರುಕಿರಣ್". ಡೈರೆಕ್ಟರ್ ಎಸ್. ಅಭಿ ಹನಕೆರೆ ಅವರು ಶರ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರ ಪ್ರೇಮಿಗಳೇ ನೀವೂ ಒಂದು ವಾರದೊಳಗೆ ( 21 ನವೆಂಬರ್ ) ಟೈಟಲ್ ಡಿಸೈನ್ ಮಾಡಿ ಈ ವಿಳಾಸಕ್ಕೆ ಕಳುಹಿಸಿ. # 1225, 3ನೇ ಮಹಡಿ, 4ನೇ ಮುಖ್ಯರಸ್ತೆ, 3ನೇ ಕ್ರಾಸ್, 1ನೇ ಬ್ಲಾಕ್, ಮಾನಸ ನಗರ, ನಾಗರಬಾವಿ, ಬೆಂಗಳೂರು-72. ಅಥವಾ ಈ ಮೇಲ್ ವಿಳಾಸಕ್ಕೆ ಕಳಿಸಿ : hanakere@sify.com

ಸೊ, ಟೈಟಲ್ ಡಿಸೈನ್ ಮಾಡೋದಕ್ಕೆ ನಿಮಗೆ ಲಾಸ್ಟ್ ಛಾನ್ಸ್! hurry up..ಆಯ್ಕೆಯಾದ Design ಅನ್ನು ಪ್ರಖ್ಯಾತ ನಟರೊಬ್ಬರು ಬಿಡುಗಡೆ ಮಾಡುತ್ತಾರೆ ಎಂದು ನಿರ್ದೇಶಕ ಎಸ್.ಅಭಿ ಹನಕೆರೆ ಬುಧವಾರ ಒನ್ ಇಂಡಿಯಾ ವರದಿಗಾರರಿಗೆ ತಿಳಿಸಿದರು. (ಒನ್ಇಂಡಿಯಾ ಕನ್ನಡ)

English summary
Arambha, The Last Chance - Kannada Movie Title design Contest. Send your design to director S. Abhi Hanakere and get a chance to work in The movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada