For Quick Alerts
  ALLOW NOTIFICATIONS  
  For Daily Alerts

  ಅನಾರೋಗ್ಯದಿಂದ ಚೇತರಿಸಿಕೊಂಡ ಅರ್ಜುನ್ ಜನ್ಯ: ಕೆಲಸಕ್ಕೆ ವಾಪಸ್

  |

  ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇತ್ತೀಚಿಗೆ ಲಘು ಹೃದಯಾಘಾತದಿಂದ ಕಳೆದ ತಿಂಗಳು ಏಪ್ರಿಲ್ ಕೊನೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರ್ಜುನ್ ಜನ್ಯ, ಒಂದಿಷ್ಟು ದಿನಗಳ ಕಾಲ ವಿಶ್ರಾಂತಿಯಲ್ಲಿದ್ದರು. ಸದ್ಯ ಚೇತರಿಸಿಕೊಂಡಿರುವ ಅರ್ಜುನ್ ಮತ್ತೆ ಕೆಲಸಕ್ಕೆ ವಾಪಸ್ ಆಗಿದ್ದಾರೆ.

  ಅರ್ಜುನ್ ಜನ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜನ್ಯ ಸಂಗೀತ ನಿರ್ದೇಶನದ ಸಾಲು ಸಾಲು ಸಿನಿಮಾಗಳು ರಿಲೀಸ್ ಗೆ ತಯಾರಿ ನಡೆಸುತ್ತಿವೆ. ಸದ್ಯ ಜನ್ಯ ವಾಪಸ್ ಆಗುವ ಮೂಲಕ ಅರ್ಧಕ್ಕೆ ನಿಂತ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ಅಂದ್ಹಾಗೆ ಜನ್ಯ ಕೆಲಸಕ್ಕೆ ಮರಳಿರುವುದು ನಿರ್ದೇಶಕ ಪ್ರೇಮ್ ಸಾರಥ್ಯದಲ್ಲಿ ಬರುತ್ತಿರುವ ಏಕ್ ಲವ್ ಯಾ ಸಿನಿಮಾ ಕೆಲಸಕ್ಕೆ.

  ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್

  ಏಕ್ ಲವ್ ಯಾ ಸಿನಿಮಾಗೆ ಜನ್ಯ ಸಂಗೀತ

  ಏಕ್ ಲವ್ ಯಾ ಸಿನಿಮಾಗೆ ಜನ್ಯ ಸಂಗೀತ

  ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಏಕ್ ಲವ್ ಯಾ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅರ್ಧಕ್ಕೆ ನಿಲ್ಲಿಸಿದ್ದ ಕೆಲಸವನ್ನು ಪೂರ್ಣ ಮಾಡಲು ಜನ್ಯ ಕೆಲಸಕ್ಕೆ ಮರಳಿದ್ದಾರೆ. ಏಕ್ ಲವ್ ಯಾ ಸಿನಿಮಾ ಕೆಲಸ ಮಾಡುತ್ತಿರುವ ವಿಚಾರವನ್ನು ನಿರ್ದೇಶಕ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಮ್ಯೂಸಿಕ್ ಬೀಟ್ಸ್ ಇರೋವರ್ಗೂ ಹಾರ್ಟ್ ಬೀಟ್ ನಿಲ್ಲಲ್ಲ

  ನಿರ್ದೇಶಕ ಪ್ರೇಮ್, ಅರ್ಜುನ್ ಜನ್ಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ "ಮ್ಯೂಸಿಕ್ ಬೀಟ್ಸ್ ಇರೋವರ್ಗೂ ನಮ್ ಹಾರ್ಟ್ ಬೀಟ್ ಯಾವತ್ತೂ ನಿಲ್ಲಲ್ಲ ಅಂತ ವಾಪಸ್ ಬಂದಿದ್ದಾರೆ ನಮ್ ಅರ್ಜುನ್ ಜನ್ಯ. ಮ್ಯಾಜಿಕ್ ಕಂಪೋಸರ್ ಮ್ಯಾಜಿಕಲ್ ಪವರ್ ಯಿಂದ ವಾಪಸ್ ಆಗಿದ್ದಾರೆ. ಏಕ್ ಲವ್ ಆಡಿಯೋ ಸಧ್ಯದಲ್ಲೇ ಬರಲಿದೆ" ಎಂದು ಬರೆದುಕೊಂಡಿದ್ದಾರೆ.

  'ದಾಸ' ದರ್ಶನ್ ಚಿತ್ರಕ್ಕೂ ತಟ್ಟಿತು ಕೊರೊನಾ ವೈರಸ್ ಭೀತಿ.!'ದಾಸ' ದರ್ಶನ್ ಚಿತ್ರಕ್ಕೂ ತಟ್ಟಿತು ಕೊರೊನಾ ವೈರಸ್ ಭೀತಿ.!

  ಏಪ್ರಿಲ್ ಕೊನೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಜನ್ಯ

  ಏಪ್ರಿಲ್ ಕೊನೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಜನ್ಯ

  ಕಳೆದ ತಿಂಗಳು ಎಪ್ರಿಲ್ ಕೊನೆಯಲ್ಲಿ ಅರ್ಜುನ್ ಜನ್ಯ ತೀವ್ರ ಎದೆ ನೋವಿನ ಕಾರಣ ತಕ್ಷಣ ಮೈಸೂರಿನ ಕಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ಅವರಿಗೆ ಲಘು ಹೃದಯಾಘಾತವಾಗಿರುವ ಬಗ್ಗೆ ವೈದ್ಯರು ತಿಳಿಸಿದ್ದರು. ಚಿಕಿತ್ಸೆಯ ಬಳಿಕ ಡಿಸ್ಚಾರ್ಜ್ ಆಗಿದ್ದ ಜನ್ಯ ವಿಶ್ರಾಂತಿಯಲ್ಲಿ ಇದ್ದರು. ಸುಮಾರು 20 ದಿನಗಳ ರೆಸ್ಟ್ ಬಳಿಕ ಮತ್ತೆ ಕೆಲಸಕ್ಕೆ ಮರಳಿದ್ದಾರೆ.

  ಅರ್ಜುನ್ ಜನ್ಯ ಅನಾರೋಗ್ಯ: 'ರಾಬರ್ಟ್' ಆಡಿಯೋ ರಿಲೀಸ್ ಗೆ ಸಮಸ್ಯೆ ಆಗಲ್ಲ ಎಂದ ನಿರ್ದೇಶಕ.!ಅರ್ಜುನ್ ಜನ್ಯ ಅನಾರೋಗ್ಯ: 'ರಾಬರ್ಟ್' ಆಡಿಯೋ ರಿಲೀಸ್ ಗೆ ಸಮಸ್ಯೆ ಆಗಲ್ಲ ಎಂದ ನಿರ್ದೇಶಕ.!

  ಕಿರುತೆರೆಗೂ ಮರಳುವ ಸಾಧ್ಯತೆ

  ಕಿರುತೆರೆಗೂ ಮರಳುವ ಸಾಧ್ಯತೆ

  ಸದ್ಯ ಸಿನಿಮಾ ಕೆಲಸಗಳನ್ನು ಪ್ರಾರಂಭಿಸಿರುವ ಜನ್ಯ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಂಗೀತ ಕಾರ್ಯಕ್ರಮದಲ್ಲೂ ಭಾಗಿಯಾಗುವ ಸಾಧ್ಯತೆ ಇದೆ. ಇತ್ತೀಚಿಗಷ್ಟೆ ವಿಡಿಯೋ ಮೂಲಕ ಮಾತನಾಡಿದ್ದ ಜನ್ಯ ಸಧ್ಯದಲ್ಲೇ ಸರಿಗಮಪ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಜನ್ಯ ಸಂಗೀತ ನಿರ್ದೇಶನದ ರಾಬರ್ಟ್, ಕೋಟಿಗೊಬ್ಬ-3, ಗಾಳಿಪಟ-2, ಮದಗಜ ಸೇರಿದಂತೆ ಸಾಕಷ್ಟು ಸಿನಿಮಾಗಳು ಇವೆ.

  English summary
  Kannada Famous Music Director Arjun Janya back on his work after Heart Attack. He is started work from Ek Love ya movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X