»   » ಅರ್ಜುನ್ ಜನ್ಯಗೆ ಮರೆಯಲಾಗದ ಉಡುಗೊರೆ ಕೊಟ್ಟ ಎ.ಆರ್ ರೆಹಮಾನ್

ಅರ್ಜುನ್ ಜನ್ಯಗೆ ಮರೆಯಲಾಗದ ಉಡುಗೊರೆ ಕೊಟ್ಟ ಎ.ಆರ್ ರೆಹಮಾನ್

Posted By:
Subscribe to Filmibeat Kannada
ಅರ್ಜುನ್ ಜನ್ಯಗೆ ಮರೆಯಲಾಗದ ಉಡುಗೊರೆ ಕೊಟ್ಟ ಎ.ಆರ್ ರೆಹಮಾನ್ | Filmibeat Kannada

ಸ್ಯಾಂಡಲ್ ವುಡ್ ನ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಗೆ ಸಂಗೀತ ನಿರ್ದೇಶಕನಾಗಬೇಕೆಂಬ ಕನಸು ಮೊಳಕೆಯೊಡೆದದ್ದೇ ಆಕಸ್ಮಿಕ. ಅರ್ಜುನ್ ಕುಟುಂಬದಲ್ಲಿ ಸಂಗೀತವನ್ನು ಕಲಿತವರಾಗಲೀ, ಆಸಕ್ತಿಯಿಂದ ಕೇಳುವವರಾಗಲೀ ಇರಲಿಲ್ಲ. ಹೀಗಿರುವಾಗ, ಸಂಗೀತ ನಿರ್ದೇಶಕನಾಗಬೇಕೆಂಬ ಹಂಬಲ ತುಂಬಿದ್ದು 'ರೋಜಾ' ಚಿತ್ರದ ಹಾಡುಗಳು. ಅಲ್ಲಿಂದ ಆರಂಭವಾಗಿದ್ದೇ ಅರ್ಜುನ್ ಜನ್ಯ ಮತ್ತು ಎ.ಆರ್ ರೆಹಮಾನ್ ಅವರ ಸಂಬಂಧ.

ತಮ್ಮ ತಂದೆ ಸಾಯುವುದಕ್ಕು ಹಿಂದಿನ ದಿನಗಳಲ್ಲಿ ಎ.ಆರ್ ರೆಹಮಾನ್ ಬಗ್ಗೆ ಹಾಗೂ 'ರೋಜಾ' ಚಿತ್ರದ ಹಾಡುಗಳ ಬಗ್ಗೆ ಹೇಳಿದ್ದರಂತೆ. ಅದೇ ಕೊನೆ ತಂದೆ ಸಾವನ್ನಪ್ಪಿದರು. ಆಗಲೇ ಅರ್ಜುನ್ ಗೆ ತಾನು ರೆಹಮಾನ್ ರಂತೆ ಸಂಗೀತ ನಿರ್ದೇಶಕನಾಗಬೇಕೆಂಬ ಕನಸು ಹುಟ್ಟಿದ್ದು.

ಅರ್ಜುನ್ ಜನ್ಯ ಬಹು ವರ್ಷದ ಕನಸು ಈಗ ಈಡೇರಿತಾ.?

ಆ ಕನಸು ಈಗ ಬಹುಶಃ ಈಡೇರಿದೆ. ಅರ್ಜುನ್ ಜನ್ಯ ಕನ್ನಡದ ಎ.ಆರ್ ರೆಹಮಾನ್ ಎಂದೇ ಖ್ಯಾತಿಗಳಿಸಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ರೆಹಮಾನ್ ಅವರಿಂದ ಜನ್ಯಗೆ ಮರೆಯಲಾಗದ ಉಡುಗೊರೆ ಸಿಕ್ಕಿದೆ. ಏನದು? ಮುಂದೆ ಓದಿ.......

ನೆಚ್ಚಿನ ವ್ಯಕ್ತಿಯಿಂದ ಅರ್ಜುನ್ ಗೆ ಗಿಫ್ಟ್

ತಮ್ಮ ನೆಚ್ಚಿನ ವ್ಯಕ್ತಿ ಎ.ಆರ್ ರೆಹಮಾನ್ ಅವರಿಂದ ಅರ್ಜುನ್ ಜನ್ಯಗೆ ಆಟೋಗ್ರಫ್ ಹಾಕಿರುವ ಚಿತ್ರಕಲೆ ಉಡುಗೊರೆಯಾಗಿದೆ ಸಿಕ್ಕಿದೆ. ಈ ಚಿತ್ರವನ್ನ ಇಂಪನಾ ಜಯರಾಜ್ ಬಿಡಿಸಿದ್ದು, ಇದರ ಮೇಲೆ ರೆಹಮಾನ್ ಸಹಿ ಮಾಡಿದ್ದಾರೆ.

ಅರ್ಜುನ್ ಜನ್ಯ 'ಸಂಗೀತ ಲೋಕ'ಕ್ಕೆ ಬರಲು ಬಲವಾದ ಕಾರಣ ಏನು?

ಜನ್ಯ ಸ್ಟುಡಿಯೋದಲ್ಲಿ ಈ ಗಿಫ್ಟ್

7 ಅಡಿ ಎತ್ತರ ಇರುವ ಈ ಚಿತ್ರಕಲೆಯನ್ನ ಜನ್ಯ ತಮ್ಮ ಸ್ಟುಡಿಯೋದಲ್ಲಿ ಇರಿಸಿಕೊಳ್ಳಲಿದ್ದಾರಂತೆ. ''ಇದು ಜೀವನದ ಅತ್ಯಾದ್ಭುತ ಕ್ಷಣ''ವೆಂದು ಅರ್ಜುನ್ ಜನ್ಯ ಬಣ್ಣಸಿದ್ದಾರೆ.

ಅರ್ಜುನ್ ಜನ್ಯ ಪಾಲಿಗೆ ಇಂದು ಅದೃಷ್ಟದ ದಿನ, ಯಾಕೆ?

ಇಂತಹ ಕ್ಷಣಕ್ಕೆ ವಿಜಯ ಪ್ರಕಾಶ್ ಕಾರಣ

ಅರ್ಜುನ್ ಜನ್ಯ ಪಾಲಿನ ಈ ಸುವರ್ಣ ಕ್ಷಣಕ್ಕೆ ಕಾರಣವಾಗಿದ್ದು ಗಾಯಕ ವಿಜಯ ಪ್ರಕಾಶ್. ಅವರಿಗೆ ಅರ್ಜುನ್ ಜನ್ಯ ಹೃದಯ ಪೂರ್ವಕ ಧನ್ಯವಾದಗಳನ್ನ ತಿಳಿಸಿದ್ದಾರೆ.

ಎ.ಆರ್‌. ರೆಹಮಾನ್ ಹುಟ್ಟಿರಲಿಲ್ಲಂದ್ರೆ ಜನ್ಯ ಇಲ್ಲ

ಸ್ವತಃ ಅರ್ಜುನ್ ಜನ್ಯ ಅವರೇ ಹಳೀಕೊಳ್ಳುವ ಪ್ರಕಾರ ''ಎ.ಆರ್‌. ರೆಹಮಾನ್ ಹುಟ್ಟಿರಲಿಲ್ಲಂದ್ರೆ ಈ ಅರ್ಜುನ್ ಜನ್ಯ ಇರುತ್ತಿರಲಿಲ್ಲ'' ಎಂದು ತಮ್ಮ ಅಭಿಮಾನವನ್ನ ಅದೇಷ್ಟೋ ಬಾರಿ ವ್ಯಕ್ತಪಡಿಸಿದ್ದಾರೆ. 'ಎ.ಆರ್ ರೆಹಮಾನ್ ನನಗೆ ಸ್ಫೂರ್ತಿ' ಎಂದು ಬಹಳ ಹೆಮ್ಮೆಯಿಂದ ಹೇಳುತ್ತಾರೆ ಮ್ಯಾಜಿಕಲ್ ಕಂಪೋಸರ್.

ಮೊದಲ ಭೇಟಿ

ಅಂದ್ಹಾಗೆ, ಅರ್ಜುನ್ ಜನ್ಯ ಮತ್ತು ರೆಹಮಾನ್ ಮೊದಲ ಸಲ ಭೇಟಿಯಾಗಲು ಕಾರಣ ನಿರ್ದೇಶಕ ಬದ್ರಿ ಪ್ರಸಾದ್. ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡಲು ಎ.ಆರ್.ರೆಹಮಾನ್ ಬಂದಿದ್ದರು. ಸ್ನೇಹಿತ ಗಾಯಕ ಬದ್ರಿ ಪ್ರಸಾದ್ ಒಬೆರಾಯ್ ಹೋಟೆಲ್‌ಗೆ ನನ್ನನ್ನು ಬರುವಂತೆ ಹೇಳಿ ರೆಹಮಾನ್ ಗೆ ನನ್ನನ್ನು ಪರಿಚಯಿಸಿದರು. ನನ್ನ ಜೀವನದ ಬಹುದೊಡ್ಡ ಅಚ್ಚರಿಯದು. ಅವರ ಆಶೀರ್ವಾದ ನನ್ನ ಬದುಕಿನಲ್ಲಿ ಹೊಸ ತಿರುವು ನೀಡಿತು. ಗುಟ್ಕಾ, ಕುಡಿತದ ಚಟವನ್ನೂ ಅಂಟಿಸಿಕೊಂಡಿದ್ದ ಜನ್ಯ. ಅಲ್ಲಿಂದ... ಮದ್ಯ, ಗುಟ್ಕದ ಸಹವಾಸಕ್ಕೆ ಗುಡ್ ಬೈ ಹೇಳಿದರು.

English summary
Kannada musical composer arjun janya got Autographed by his music God A.R.RAHMAN on the painting which is going to be displayed in my new studio.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X