»   » 'ಜೋಗಿ'ಗೆ ಮತ್ತೆ ಅಮ್ಮನಾದ ಅರುಂಧತಿ ನಾಗ್..!

'ಜೋಗಿ'ಗೆ ಮತ್ತೆ ಅಮ್ಮನಾದ ಅರುಂಧತಿ ನಾಗ್..!

Posted By:
Subscribe to Filmibeat Kannada

ಕನ್ನಡ ಸಿನಿ ಪ್ರಿಯರಿಗೆ 'ಜೋಗಿ' ಸಿನಿಮಾದ ಬಗ್ಗೆ ಹೆಚ್ಚು ಹೇಳ್ಬೇಕಾಗಿಲ್ಲ ಬಿಡಿ. ಬ್ಲಾಕ್ ಬಸ್ಟರ್ ಸಿನಿಮಾ ಜೋಗಿ, ಔಟ್ ಅಂಡ್ ಔಟ್ ರೌಡಿಸಂ ಬ್ಯಾಕ್ ಗ್ರೌಂಡ್ ಸಿನಿಮಾ ಆದ್ರೂ ಚಿತ್ರದಲ್ಲಿನ ಅಮ್ಮ-ಮಗನ ಸೆಂಟಿಮೆಂಟ್ ಪ್ರೇಕ್ಷಕರ ಮನಮುಟ್ಟಿತ್ತು. ಇದೀಗ ಅಂತದ್ದೇ ಅಮ್ಮ-ಮಗನ ಅನುಬಂಧ 'ಹಿಟ್ಲರ್' ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮರುಕಳಿಸಲಿದೆ.

ಹಾಗಂತ ಶಿವಣ್ಣ ಹಿಟ್ಲರ್ ಅಲ್ಲ..! ಹ್ಯಾಟ್ರಿಕ್ ಹೀರೋಗೆ ಅರುಂಧತಿ ನಾಗ್ ಮತ್ತೊಮ್ಮೆ ತಾಯಿಯಾಗಿ ಕಾಣಿಸಿಕೊಳ್ತಿಲ್ಲ..! ಬದ್ಲಾಗಿ, ಶಿವಣ್ಣನ ಜಾಗದಲ್ಲಿ 'ಜೋಗಿ'ಯ ಸೂತ್ರಧಾರ ಪ್ರೇಮ್ ಅವರಿಗೆ ಅರುಂಧತಿ ತಾಯಿಯಾಗಲಿದ್ದಾರೆ.

ಹೌದು, ಡೈರೆಕ್ಟರ್ ಕ್ಯಾಪ್ ನ ಸೈಡಿಗಿಟ್ಟು ಸದ್ಯ ನಟನೆಯಲ್ಲೇ ಬಿಜಿಯಾಗಿರೋ ಪ್ರೇಮ್ ಲಿಸ್ಟ್ ಗೆ ಎಂಟ್ರಿಯಾಗಿರೋ ಹೊಸ ಸಿನಿಮಾ 'ಪ್ರೇಮ್ ಹಿಟ್ಲರ್'. ಹಿಟ್ಲರ್ ಓಕೆ..! ಪ್ರೇಮ್ ಯಾಕೆ..? ಅಂತ ನೀವು ಕೇಳ್ಬಹುದು. 'ಅಡ್ಡ'ದ ಅಕ್ಕಪಕ್ಕ ಪ್ರೇಮ್ ಸೇರಿಸಿದ ಹಾಗೆ ಇಲ್ಲೂ ಟೈಟಲ್ ಕಾಂಟ್ರವರ್ಸಿಯಾಗ್ಬಾರ್ದು ಅಂತ ಹಿಟ್ಲರ್ ಜೊತೆ ಪ್ರೇಮ್ ಇರಲೇಬೇಕಂತೆ.

ಪ್ರೇಮ್ ಜೊತೆ ಬರೋಬ್ಬರಿ 11 ವರ್ಷಗಳ ಕಾಲ ಸಹಾಯಕ ನಿರ್ದೇಶಕನಾಗಿದ್ದ ರಘು ಹಾಸನ್, ತಮ್ಮ ಗುರುಗಳಿಗೋಸ್ಕರ ಒಂದುವರೆ ವರ್ಷಗಳ ಕಾಲ ರೆಡಿಮಾಡಿರೋ ಸ್ಕ್ರಿಪ್ಟ್ ಈ 'ಪ್ರೇಮ್ ಹಿಟ್ಲರ್'.

ಈಗಾಗ್ಲೇ ರಿಲೀಸ್ ಆಗಿರೋ ಪೋಸ್ಟರ್ ಗಳಲ್ಲಿ ಕಂಪ್ಲೀಟ್ ರಫ್ ಅಂಡ್ ಟಫ್ ಆಗಿ ಕಾಣೋ ಪ್ರೇಮ್, ಹಿಟ್ಲರ್ ಚಿತ್ರದಲ್ಲಿ ಕ್ರಾಂತಿಕಾರಿ..! ರೆವೆಲ್ಯೂಷನರಿ ಸಬ್ಜೆಕ್ ಹೊಂದಿರೋ 'ಪ್ರೇಮ್ ಹಿಟ್ಲರ್' ಚಿತ್ರದಲ್ಲಿ ತಾಯಿ-ಮಗನ ಸೆಂಟಿಮೆಂಟ್ ಹೈಲೈಟ್.

Arundhathi nag playing mother for Jogi prem in Hitler3

'ಜೋಗಿ' ಚಿತ್ರದಲ್ಲಿನ ಶಿವಣ್ಣ-ಅರುಂಧತಿ ನಾಗ್ ಪಾತ್ರಗಳು, 'ಪ್ರೇಮ್ ಹಿಟ್ಲರ್'ನಲ್ಲಿ ನೆನಪಿಸುವಂತಿರಲಿವೆ. ಹೀಗಾಗೇ ತಾಯಿ ಪಾತ್ರಕ್ಕೆ ಅರುಂಧತಿ ನಾಗ್ ರನ್ನೇ ಸೆಲೆಕ್ಟ್ ಮಾಡಲಾಗಿದೆ ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಹಂಚಿಕೊಂಡಿದ್ದಾರೆ ನಿರ್ದೇಶಕ ರಘು ಹಾಸನ್. ಕ್ಯೂಟ್ ಬೆಡಗಿ ಕೃತಿ ಕರಬಂಧ ಅಥವಾ ಪಾರ್ವತಿ ಮೆನನ್ ನಾಯಕಿಯಾಗುವ ಸಾಧ್ಯತೆಗಳಿವೆ.

ಕಥೆ ಕೇಳಿ ಗ್ರೀನ್ ಸಿಗ್ನಲ್ ಕೊಟ್ಟಿರೋ ಅರುಂಧತಿ ನಾಗ್ ಡಿಸೆಂಬರ್ ವೇಳೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರಂತೆ. 'ಹುಚ್ಚುಡುಗ್ರು' ಚಿತ್ರಕ್ಕೆ ಬಂಡವಾಳ ಹಾಕಿದ್ದ ವೇದಮೂರ್ತಿ, 'ಪ್ರೇಮ್ ಹಿಟ್ಲರ್' ಗೆ ಪ್ರೊಡ್ಯೂಸರ್. ಸದ್ಯಕ್ಕಿನ್ನೂ ಪ್ರೀ ಪ್ರೊಡಕ್ಷನ್ ಹಂತದಲ್ಲಿರೋ 'ಪ್ರೇಮ್ ಹಿಟ್ಲರ್'ಗೆ ಡಿಸೆಂಬರ್ ಮೊದಲ ವಾರ ಮುಹೂರ್ತ ಫಿಕ್ಸ್ ಆಗಿದೆ. (ಫಿಲ್ಮಿಬೀಟ್ ಕನ್ನಡ ಎಕ್ಸ್‌ಕ್ಲೂಸಿವ್)

English summary
Arundhathi Nag is roped in for 'Prem Hitler' to play a mother to Jogi prem. 'Prem Hitler' being directed by Raghu Hassan, who was co-director for jogi prem for 11 years. Since the movie Jogi was super-hit due to mother sentiment, director Raghu Hassan is trying out get the same combo. Arundhathi nag has given a nod to the movie and 'Prem Hitler' is going on floors in the first week of December, 2014.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada