For Quick Alerts
  ALLOW NOTIFICATIONS  
  For Daily Alerts

  ದೊಡ್ಮನೆ ಆಸ್ತಿ ವಿಚಾರ ತೆಗೆದ ಉಮಾಪತಿ ವಿರುದ್ಧ ದರ್ಶನ್ ಗರಂ

  |

  ''ನನ್ನದು 25 ಕೋಟಿ ವಿಚಾರ ಬಿಟ್ರು, ದೊಡ್ಮನೆ ಆಸ್ತಿ ವಿಚಾರ ಏಕೆ ಎಳೆದು ತಂದ್ರು'' ಎಂದು ನಟ ದರ್ಶನ್ ಮೈಸೂರಿನಲ್ಲಿ ನಿರ್ಮಾಪಕ ಉಮಾಪತಿ ವಿರುದ್ಧ ಗರಂ ಆಗಿದ್ದಾರೆ.

  ''ಬೇಕು ಅಂತಾನೇ ಈ ವಿಷಯ ಪ್ರಸ್ತಾಪ ಮಾಡಿದ್ದಾರೆ. 25 ಕೋಟಿ ವಿಚಾರದ ಗಮನವನ್ನು ಬೇರೆಡೆಗೆ ನೂಕುವ ಕಾರಣಕ್ಕಾಗಿ ಈ ವಿಷಯ ಆರಂಭಿಸಿದ್ದಾರೆ'' ಎಂದು ನಟ ದರ್ಶನ್ ತೀವ್ರ ಕೆಂಡಾಮಂಡಲರಾದರು.

  'ದೊಡ್ಮನೆ ಆಸ್ತಿ': ದರ್ಶನ್ ಕೇಳಿದ್ರು, ಉಮಾಪತಿ ಕೊಡಲ್ಲ ಅಂದಿದ್ರು 'ದೊಡ್ಮನೆ ಆಸ್ತಿ': ದರ್ಶನ್ ಕೇಳಿದ್ರು, ಉಮಾಪತಿ ಕೊಡಲ್ಲ ಅಂದಿದ್ರು

  ''ದೊಡ್ಮನೆ ಯಾವತ್ತಿದ್ದರೂ ನಮ್ಮ ಪಾಲಿಗೆ ದೊಡ್ಮನೆ. ನಮ್ಮಪ್ಪ ಬಂದಿದ್ದು ಅದೇ ಸಂಸ್ಥೆಯಿಂದ. ನಾನು ಆ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಪೂರ್ಣಿಮಾ ಎಂಟರ್‌ಪ್ರೈಸ್‌ನಲ್ಲಿ ಬಂದ ಜೋಡಿಹಕ್ಕಿ ಸಿನಿಮಾದಲ್ಲಿ ನಾನು 175 ರೂಪಾಯಿ ಸಂಬಳ ತೆಗೆದುಕೊಂಡು ಲೈಟ್‌ಬಾಯ್ ಆಗಿ ಕೆಲಸ ಮಾಡಿದ್ದೇನೆ. ಇದಕ್ಕೂ ದೊಡ್ಡನೆಗೂ ಯಾವುದೇ ಸಂಬಂಧವಿಲ್ಲ. ಇಂತಹ ನೂರು ಪ್ರಾಪರ್ಟಿಗಳು ದೊಡ್ಮನೆ ಬಳಿ ಇವೆ.'' ಎಂದು ಹೇಳಿದರು.

  ''ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಂದ ಆ ಪ್ರಾಪರ್ಟಿ ರಿಜಿಸ್ಟರ್ ಮಾಡಿಕೊಂಡು ಬಂದಾಗ ನನಗೆ ವಿಷಯ ಅವರೇ ಹೇಳಿದ್ದು. ಆ ಮೇಲೆ ನಾನು ನಿರ್ಮಾಪಕರೇ ಆ ಪ್ರಾಪರ್ಟಿ ಕೊಡೋತರ ಇದ್ದರೆ ನನಗೆ ಕೊಡಿ, ಮೊದಲೇ ನನ್ನ ಹತ್ರಾ ಹಣ ಇರಲ್ಲ. ಎಲ್ಲವೂ ಖರ್ಚು ಆಗಿಬಿಡುತ್ತೆ'' ಎಂದು ಹೇಳಿದ್ದೆ.

  ವೈರಲ್ ಆಯ್ತು ಕುಮಾರಸ್ವಾಮಿ, ಇಂದ್ರಜಿತ್ ಲಂಕೇಶ್ ಫೋಟೋ | Darshan Hotel Controversy | Filmibeat Kannada

  ''ನನಗೇ ಬೇಕೇ ಬೇಕು ಅಂತ ಕೇಳಿಲ್ಲ, ಅವರು ಕೊಡಲ್ಲ ಅಂತ ಹೇಳಿಲ್ಲ. ಈವತ್ತು ದೊಡ್ಮನೆ ಆಸ್ತಿ ಬಗ್ಗೆ ಮಾತಾಡ್ತಾರೆ ಅಲ್ವಾ, ಇಷ್ಟು ವರ್ಷದಿಂದ ಆ ಪ್ರಾಪರ್ಟಿ ಬಾಡಿಗೆ ನನಗೆ ಏಕೆ ತಗೊಂಡು ಬಂದು ಕೊಟ್ರು?'' ಎಂದು ಪ್ರಶ್ನಿಸಿದ್ದಾರೆ.

  English summary
  Assualt Allegations: Challenging star Darshan fires on Umapathy Srinivas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X