For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಕುಮಾರ್ - ಚಿ.ಉದಯಶಂಕರ್ ಸಂಭಾಷಣೆಯ ಹಳೆಯ ಆಡಿಯೋ ಬಹಿರಂಗ

  |

  ವರನಟ ಡಾ.ರಾಜ್ ಕುಮಾರ್ ಅವರ ಸಿನಿಮಾಗಳ ಯಶಸ್ಸಿನ ಹಿಂದೆ, ಅವರ ಜೊತೆಗಿದ್ದ ಚಿತ್ರತಂಡವೂ ಅಷ್ಟೇ ಕಾರಣ ಎಂದರ ಅತಿಶಯೋಕ್ತಿಯಾಗಲಾರದು. ಎಂತೆಂತಹ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿದ್ದರು ಎಂದು ಹೇಳುವುದಕ್ಕೇ ಹೆಮ್ಮೆಯಾಗುತ್ತದೆ.

  ಈ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡ್ಕೊಳಿ ಕೊರೊನ ವಿರುದ್ಧ ಹೋರಾಡಿ | Puneeth Rajkumar | Aarogya Setu

  ಡಾ.ರಾಜ್ ಜೊತೆ ಬಹಳ ಹತ್ತಿರ ಒಡನಾಟವನ್ನು ಹೊಂದಿದ್ದ ಕೆಲವೇ ಕೆಲವರ ಪೈಕಿ, ಸಂಭಾಷಣೆಕಾರ, ನಿರ್ದೇಶಕ, ಚಿತ್ರ ಸಾಹಿತಿ ಚಿ.ಉದಯಶಂಕರ್ ಕೂಡಾ ಒಬ್ಬರು. ಎಂಬತ್ತು/ತೊಂಬತ್ತರ ದಶಕದಲ್ಲಿ ರಾಜ್ - ಉದಯಶಂಕರ್ ಜೋಡಿಯ ಹಲವು ಚಿತ್ರಗಳು, ಗಲ್ಲಾಪೆಟ್ಟಿಗೆಯನ್ನು ಸೂರೆ ಮಾಡಿದ್ದವು.

  ಉದಯ ಶಂಕರ್ ಅವರನ್ನು ದುರ್ಬಳಕೆ ಮಾಡಿಕೊಂಡವರೇ ಹೆಚ್ಚು: ನಿರ್ದೇಶಕ ಭಗವಾನ್

  ನವರಸಗಳನ್ನೂ ಅರಿದು ಕುಡಿದು ನಟಿಸಬಲ್ಲ ನಟ ಎಂದರೆ ಅದು ರಾಜ್ ಕುಮಾರ್ ಎಂದು, ಚಿ.ಉದಯಶಂಕರ್ ಹಲವು ಬಾರಿ ಹೇಳಿದ್ದುಂಟು. ಉದಯಶಂಕರ್ ಸಾಹಿತ್ಯದ ಹಾಡುಗಳು, ಈಗಲೂ ಮನೆಮನೆಯಲ್ಲಿ ಗುನುಗುವಂತದ್ದು.

  ಹಿಂದೊಮ್ಮೆ ಚಿ.ಉದಯಶಂಕರ್ ಅವರು ಆಕಾಶವಾಣಿಗಾಗಿ ಡಾ.ರಾಜ್ ಕುಮಾರ್ ಅವರ ಸಂದರ್ಶನ ನಡೆಸಿದ್ದರು. ಆ ಆಡಿಯೋ ಸಂದರ್ಶನದ ಪ್ರಮುಖ ಭಾಗದ ಅಕ್ಷರ ರೂಪ ಇಲ್ಲಿದೆ. ಅಣ್ಣಾವ್ರು ಹಲವು ವಿಷಯಗಳನ್ನು ಸಂದರ್ಶನದಲ್ಲಿ ಹೇಳಿದ್ದಾರೆ.

  ಅಣ್ಣಾವ್ರು ಕನ್ನಡಿಗರ ಮನದಲ್ಲಿ ಎಂದಿಗೂ ಅಜರಾಮರ ಎಂದು ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  ಅಭಿಮಾನಿಗಳ ಪ್ರೀತಿಗೆ ನಾನು ಶರಣಾಗತಿಯಾದೆ

  ಅಭಿಮಾನಿಗಳ ಪ್ರೀತಿಗೆ ನಾನು ಶರಣಾಗತಿಯಾದೆ

  ಚಿ.ಉ: ಬೇಡರ ಕಣ್ಣಪ್ಪ ಮತ್ತು ಜೀವನಚೈತ್ರಕ್ಕೂ ತಂದೆಗೂ, ಮಗನಿಗೂ ವಯಸ್ಸಿನ ಅಂತರ. ಆದರೂ, ನೀವು ಮಾತ್ರ ಅಂದಿನಿಂದ ಇಂದಿನವರೆಗೆ, ಯುವಕರಾಗಿಯೇ ಕಾಣಿಸುತ್ತೀರಾ. ಅದರ ರಹಸ್ಯವೇನು?

  ಡಾ.ರಾಜ್: ಅದು ನಮಗೂ ಅರ್ಥವಾಗದ ವಿಷಯ. ನಾಟಕದಿಂದ ಹೋದವನು ನಾನು, ಸಣ್ಣವನಾಗಿಯೇ ಇದ್ದೆ. ಒಂದೆರಡು ತಿಂಗಳು ನಮಗೇನು ಕೆಲಸವಿರಲಿಲ್ಲ. ಹೊಟ್ಟೆಗೆ ಚೆನ್ನಾಗಿ ರಸಕವಳ ಬೀಳುತ್ತಿತ್ತು. ಹಾಗಾಗಿ, ಮೈ ಬಂದು ಬಿಟ್ಟಿತು.

  ಬೇಡರ ಕಣ್ಣಪ್ಪ ಆದ ಮೇಲೆ, ನನ್ನ ಎರಡನೇ ಸಿನಿಮಾ 'ಸೋದರಿ'. ಆ ಚಿತ್ರದಲ್ಲಿ ಹೀರೋ ಪಾತ್ರವನ್ನು ಇನ್ನೊಬ್ಬರು ಮಾಡಬೇಕಾಗಿತ್ತು. ಆದರೆ, ಆ ಪಾತ್ರವನ್ನು ನಾನು ಮಾಡಿದೆ. ಅವರಿಗಾಗಿ ಹೊಲಿಸಿದ್ದ ಉಡುಗೆ-ತೊಡುಗೆಗಳನ್ನು ನನಗೆ ತಗಲಾಕಿದರು.

  ಸಿನಿಮಾ ಬಿಡುಗಡೆಯಾದಅ ನಂತರ, ನಾನು ಶಿವಾಜಿ ಚಿತ್ರಮಂದಿರದಲ್ಲಿ ಆ ಸಿನಿಮಾ ನೋಡಲು ಹೋದೆ. ಅದು ಅಭಿಮಾನಿಗಳಿಗೆ ಗೊತ್ತಾಯಿತು. ಕೋಳಿ ಕಳ್ಳ ಎಂದು ಜನರು ನನ್ನನ್ನು ಚೇಡಿಸುತ್ತಾರೋ ಎನ್ನುವ ಆತಂಕ ನನಗಿತ್ತು. ಆದರೆ, ಅಭಿಮಾನಿಗಳು ಚಪ್ಪಾಳೆ ತಟ್ಟಿ, ಕನ್ನಡ ನಿಮ್ಮಿಂದ ಬೆಳೆಯಬೇಕು ಎಂದರು. ಅಭಿಮಾನಿಗಳ ಪ್ರೀತಿಗೆ ನಾನು ಶರಣಾಗತಿಯಾದೆ.

  ಡಾ.ರಾಜ್ - ಚಿ.ಉದಯಶಂಕರ್ ಸಂಭಾಷಣೆಯ ಆಡಿಯೋ ಬಹಿರಂಗ

  ಡಾ.ರಾಜ್ - ಚಿ.ಉದಯಶಂಕರ್ ಸಂಭಾಷಣೆಯ ಆಡಿಯೋ ಬಹಿರಂಗ

  ಚಿ.ಉ: ಆಕ್ರೋಶದ ಪಾತ್ರವನ್ನು ಮಾಡಿದಾಗ ಎರಡೂ ಭಾವಗಳು ನಿಮ್ಮಲ್ಲಿ ಅತ್ಯದ್ಭುತವಾಗಿ ಕಾಣಿಸುತ್ತದೆ. ಇದನ್ನು ಹೇಗೆ ನಿಭಾಯಿಸುತ್ತಿದ್ದೀರಿ?

  ಡಾ.ರಾಜ್: ಯಾವುದೋ ಒಂದು ಶಕ್ತಿ ನನ್ನನ್ನು ನೂಕುತ್ತದೆ. ಅಭಿನಯ ಸಾಕು ಎಂದುಕೊಂಡಿದ್ದೆ. ಆದರೆ, ಜನರ ಆಪೇಕ್ಷೆ ಇರುವವರೆಗೆ ನಾನು ಪಾತ್ರ ಮಾಡಬೇಕಾಗಿ ಬಂತು. ನೀವೆಲ್ಲಾ ನನಗೆ ಬೆನ್ನೆಲುಬಾಗಿ ನಿಂತ್ರಿ. ಎರಡ್ಮೂರು ವರ್ಷದ ಗ್ಯಾಪ್ ನಂತರ ಅಭಿನಯಕ್ಕೆ ಇಳಿದಾಗ, ನನಗೂ ಭಯ.

  ಎಲ್ಲಾ ಚಿತ್ರದಲ್ಲಿ ಅಭಿನಯಿಸಿದಾಗಲೂ ನನಗೆ ಸ್ವಲ್ಪ ಮಟ್ಟಿನ ಭಯ ಇದ್ದೇ ಇರುತ್ತದೆ. ಕಲಾವಿದನಿಗೆ ಈ ಸ್ವಲ್ಪ ಭಯ ಇರಬೇಕು ಎನ್ನುವುದು ನನ್ನ ಭಾವನೆ. ಮುಖಕ್ಕೆ ಮೇಕ್ ಅಪ್ ಮಾಡಿಕೊಂಡು, ಬಟ್ಟೆಬರೆ ಹಾಕಿಕೊಂಡು ಹೋದಾಗ, ಈ ಪಾತ್ರವನ್ನು ಹೀಗೆ ಮಾಡೋಣ ಎನ್ನುವ ಲೆಕ್ಕಾಚಾರದಲ್ಲಿ ಹೋಗಿರುತ್ತವೆ. ನಾನು ಇಂತಹ ಪಾತ್ರವನ್ನು ಮಾಡಿದ್ದೇನಾ ಎಂದು, ನನ್ನ ಸಿನಿಮಾಗಳನ್ನು ನಾನು ನೋಡಿದಾಗ, ನನಗೂ ಕೆಲವು ಪ್ರಶ್ನೆಯಾಗಿಯೇ ಉಳಿದಿದೆ. ತಂದೆ ತಾಯಿ ನಮಗೆ ತೋರಿದ ಮಾರ್ಗದರ್ಶನ ಬಹಳ ಮುಖ್ಯ.

  ಮುತ್ತತ್ತಿ ಹನುಮಂತರಾಯನ ಅನುಗ್ರಹ

  ಮುತ್ತತ್ತಿ ಹನುಮಂತರಾಯನ ಅನುಗ್ರಹ

  ಚಿ.ಉ: ಮಾತೇ ಮುತ್ತು ಎಂತಾರೆ. ಮುತ್ತುರಾಯ ಎಂದೂ ನಿಮ್ಮನ್ನು ಕರೆಯಲಾಗುತ್ತದೆ. ಈ ಬಗ್ಗೆ?

  ಡಾ.ರಾಜ್: ನಮ್ಮ ಅಪ್ಪಾಜಿ ಪ್ರೀತಿಯಿಂದ ಇಟ್ಟ ಹೆಸರು. ಮುತ್ತತ್ತಿ ಹನುಮಂತರಾಯ ದೇವಸ್ಥಾನಕ್ಕೆ ಹೋಗಿ, ಸ್ವಾಮಿಯ ಸೇವೆ ಮಾಡಿದರೆ, ಮಕ್ಕಳಾಗುತ್ತದೆ ಎಂದು ನಮ್ಮಪ್ಪನಿಗೆ ಪಕ್ಕದ ಊರಿನವರು ಹೇಳಿದ್ದರಂತೆ. ಅದರಂತೇ, ಅಪ್ಪ, ನಮ್ಮಮ್ಮನನ್ನು ಕರೆದುಕೊಂಡು ಹೋಗಿ ಸೇವೆ ಮಾಡಿದ್ದರು.

  ರಾಮನವಮಿಯ ಆಸುಪಾಸಿನಲ್ಲಿ ನಾನು ಹುಟ್ಟಿದ್ದು. ಹನುಮಂತರಾಯನ ಅನುಗ್ರಹ, ತಂದೆತಾಯಿಯ ಆಶೀರ್ವಾದವೂ ಇರಬಹುದು. ಪ್ರೀತಿ ಸಿಗುವ ಜಾಗದಲ್ಲಿ ನಾವು ಶರಣಾಗತರಾಗಬೇಕು. ಈ ರೀತಿಯ ಅಭಿಮಾನ ನಮಗೆ ಸಿಕ್ಕಾಗ ಏನು ಹೇಳಬೇಕು ಎಂದು ಗೊತ್ತಾಗುವುದಿಲ್ಲ.

  ಹೆಣ್ಣಿಗೆ ಮಾತ್ರ ಆ ಶಕ್ತಿಯಿರುವುದು

  ಹೆಣ್ಣಿಗೆ ಮಾತ್ರ ಆ ಶಕ್ತಿಯಿರುವುದು

  ಚಿ.ಉ: ನಿಮ್ಮ ಯಶಸ್ಸಿನ ಹಿಂದಿನ ಪಾತ್ರ ಯಾವುದು?

  ಡಾ.ರಾಜ್: ಎಲ್ಲರಿಗೂ ಗೊತ್ತಿರುವ ವಿಚಾರ. ಜಗತ್ತು ನಿಂತಿರುವುದು ಶಕ್ತಿಯಿಂದ, ಶಕ್ತಿಯೆಂದರೆ ಯಾರು. ಅದು ಹೆಣ್ಣಿಗೆ ಮಾತ್ರ ಆ ಶಕ್ತಿಯಿರುವುದು. ನಮ್ಮ ಸಂಸ್ಕೃತಿ ಸಾರುತ್ತಿರುವುದೂ ಅದನ್ನೇ. ನಾನು ಹೇಳುವುದೂ ಅದನ್ನೇ.

  ನನ್ನ ಜೀವನದಲ್ಲೂ ನನಗೆ ಅದೇ ಶಕ್ತಿ.

  English summary
  Chi. Udayashankar Interview Of Dr. Rajkumar For Akashavani, Audio Is Viral Now,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X