'ಅವನೇ ಶ್ರೀಮನ್ನಾರಾಯಣ' ಟೀಸರ್ ಕ್ವಾಲಿಟಿ ಕಂಡು ಜೈ ಎಂದ ಕನ್ನಡಿಗರು
ನಟ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಸಿಕ್ಕಿದೆ. ರಕ್ಷಿತ್ ಹೊಸ ಸಿನಿಮಾ 'ಅವನೇ ಶ್ರೀನ್ನಾರಾಯಣ' ಟೀಸರ್ ಬಿಡುಗಡೆಯಾಗಿದೆ. ಸಂಜೆ ಆರು ಗಂಟೆಗೆ ಬಿಡುಗಡೆಯಾಗಬೇಕಿದ್ದ ಟೀಸರ್ ತಾಂತ್ರಿಕ ತೊಂದರೆಯಿಂದ ಬಹಳ ತಡವಾಗಿ ರಿಲೀಸ್ ಆಯ್ತು.
ತಡ ರಾತ್ರಿ ಬಿಡುಗಡೆಯಾದರೂ ಟೀಸರ್ ಗೆ ದೊಡ್ಡ ಪ್ರತಿಕ್ರಿಯೆ ಸಿಗಲು ಶುರುವಾಗಿದೆ. ಈ ಹಿಂದೆ ಚಿತ್ರದ ಒಂದು ಟೀಸರ್ ಬಂದಿದ್ದು, ಈಗ ಎರಡನೇ ಟೀಸರ್ ಕೂಡ ಸೂಪರ್ ಆಗಿದೆ. ಟೀಸರ್ ನ ಕ್ವಾಲಿಟಿ ಎಲ್ಲರ ಗಮನ ಸೆಳೆಯುವ ಅಂಶವಾಗಿದೆ.
ಬಾಲಿವುಡ್ ಸಿನಿಮಾಗಳ ಮಟ್ಟಿಗೆ ಕನ್ನಡದ ಸಿನಿಮಾವನ್ನು ಮಾಡಬಹುದು ಎಂದು ಇಡೀ ತಂಡ ತೋರಿಸಿಕೊಟ್ಟಿದೆ. ಮೊದಲ ಬಾರಿಗೆ ಸಿಂಪಲ್ ಸ್ಟಾರ್ ಪೊಲೀಸ್ ಆಗಿದ್ದಾರೆ. ಅವರ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಟೀಸರ್ ಮೂಲಕ ಆ ಪಾತ್ರವನ್ನು ಪರಿಚಯ ಮಾಡಿದ್ದಾರೆ.

''ರಾಕ್ಷಸನ ಎದುರಿಸಬೇಕಾದರೆ, ಮೊದಲು ನಮ್ಮೊಳಗಿನ ರಾಕ್ಷಸನಿಂದ ಮುಕ್ತವಾದ ಬೇಕು.'' ಎನ್ನುವ ಡೈಲಾಗ್ ರೋಮಾಂಚಕವಾಗಿವೆ.
ಕ್ಯಾಮರಾ ವರ್ಕ್, ಹಿನ್ನಲೆ ಸಂಗೀತ ಹೈಲೈಟ್ ಆಗಿದೆ. ಸಚಿನ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಕಿರಿಕ್ ಪಾರ್ಟಿ ಬಳಿಕ ಮತ್ತೆ ರಕ್ಷಿತ್ ಶೆಟ್ಟಿ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಎರಡು ವರ್ಷದ ಬಳಿಕ ರಕ್ಷಿತ್ ಸಿನಿಮಾ ಬಿಡುಗಡೆಯಾಗುತ್ತಿದೆ
ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಹೆಚ್ ಕೆ ಪ್ರಕಾಶ್ ಗೌಡ ಬಂಡವಾಳ ಹಾಕಿದ್ದಾರೆ. ಶಾನ್ವಿ ಶ್ರೀವತ್ಸವ್ ಚಿತ್ರದ ನಾಯಕಿ. ಇನ್ನು ಟೀಸರ್ ನಲ್ಲಿ ಸಿನಿಮಾ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.


Click it and Unblock the Notifications











