»   » ಡಿವಿಡಿ ರೂಪದಲ್ಲಿ ಅವಾರ್ಡ್ ವಿನ್ನಿಂಗ್ ಕನ್ನಡ ಚಿತ್ರಗಳು

ಡಿವಿಡಿ ರೂಪದಲ್ಲಿ ಅವಾರ್ಡ್ ವಿನ್ನಿಂಗ್ ಕನ್ನಡ ಚಿತ್ರಗಳು

Posted By:
Subscribe to Filmibeat Kannada

ಪ್ರಶಸ್ತಿ ಪುರಸ್ಕೃತ ಸಿನಿಮಾಗಳು ಸಾಮಾನ್ಯ ಪ್ರೇಕ್ಷಕ ವರ್ಗವನ್ನು ತಲುಪುತ್ತಿಲ್ಲ. ಚಿತ್ರಮಂದಿರದಲ್ಲಿ ಯಾಕೆ ಬಿಡುಗಡೆಯಾಗಲ್ಲ. ಆ ರೀತಿಯ ಚಿತ್ರಗಳನ್ನು ನೋಡುವುದು ಬಲು ದುರ್ಲಭ ಎಂಬ ಮಾತುಗಳು ಹಾಗೂ ಈ ರೀತಿಯ ಸಿನಿಮಾಗಳ ಇತಿಮಿತಿಗಳ ನಡುವೆ ಟೋಟಲ್ ಕನ್ನಡ ಸಂಸ್ಥೆ ಒಂದಷ್ಟು ಉತ್ತಮ ಚಿತ್ರಗಳನ್ನು ಡಿವಿಡಿ ರೂಪದಲ್ಲಿ ಹೊರತರುತ್ತಿದೆ.

ಈ ಬಾರಿ ನಾಲ್ಕು ಕನ್ನಡ ಸಿನಿಮಾಗಳನ್ನು ಡಿವಿಡಿ ರೂಪದಲ್ಲಿ ಬಿಡುಗಡೆ ಮಾಡುತ್ತಿದೆ. ಪಿ ಶೇಷಾದ್ರಿ ನಿರ್ದೇಶನದ 'ಬೆಟ್ಟದ ಜೀವ' ಹಾಗೂ 'ಭಾರತ್ ಸ್ಟೋರ್ಸ್', ಗಿರೀಶ್ ಕಾಸರವಳ್ಳಿ ಅವರ 'ಕೂರ್ಮಾವತಾರ', ಕೆಎನ್ ಟಿ ಶಾಸ್ತ್ರಿ ಅವರ 'ಸರಸಮ್ಮನ ಸಮಾಧಿ' ಚಿತ್ರಗಳು ಡಿವಿಡಿ ರೂಪದಲ್ಲಿ ಲಭ್ಯ. [ಪಿ ಶೇಷಾದ್ರಿ ಚಿತ್ರದ ವಿರುದ್ಧ ಕಥೆ ಕದ್ದ ಆರೋಪ]

Total Kannada

ಇದೇ ಶನಿವಾರ (ಏ.26) ಬೆಳಗ್ಗೆ 10.30ಕ್ಕೆ ಸರಿಯಾಗಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಡಿವಿಡಿ ಬಿಡುಗಡೆಯಾಗಲಿದೆ. ಗಿರೀಶ್ ಕಾಸರವಳ್ಳಿ, ಪಿ ಶೇಷಾದ್ರಿ, ಬಸಂತಕುಮಾರ್ ಪಾಟೀಲ್, ಕುಂ.ವೀರಭದ್ರಪ್ಪ, ಕೆಎನ್ ಟಿ ಶಾಸ್ತಿ ಹಾಗೂ ಹೆಚ್ ಜಿ ದತ್ತಾತ್ರೇಯ ಉಪಸ್ಥಿತರಿರುತ್ತಾರೆ.

ಡಿವಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಾರ್ತಾ ಇಲಾಖೆ ನಿರ್ದೇಶಕ ಎನ್ ಆರ್ ವಿಶುಕುಮಾರ್ ಆಗಮಿಸಲಿದ್ದಾರೆ. ಕಾರ್ಯಕ್ರಮವನ್ನು ಹರಿಹರಪುರ ಮಂಜುನಾಥ್ ನಿರೂಪಿಸಲಿದ್ದಾರೆ. ಸ್ಥಳ: ಬಿಪಿ ವಾಡಿಯಾ ಸಭಾಂಗಣ, ಬಿಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-04. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99862 22402 (ಒನ್ಇಂಡಿಯಾ ಕನ್ನಡ)

English summary
Award winning four Kannada Movie DVDs by Total Kannada release event held on April 26th Saturday 10:30 AM. Bhaarth Stores - Directed by P Sheshardri, Bettadha Jeeva - Directed by P Sheshardri, Koormaavathaara - Directed by Girish Kasarvalli and Sarasammana Samaadhi - Directed by K N T Shasthri. Venue : Indian Institute of World Culture, B P Wadia Road, Basavanagudi, Bangalore. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada