Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರಿ ಮೊತ್ತಕ್ಕೆ 'ಅಯೋಗ್ಯ' ಸಿನಿಮಾ ಡಬ್ಬಿಂಗ್ ಹಕ್ಕು ಮಾರಾಟ

ಹಾಡುಗಳ ಮೂಲಕವೇ ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ 'ಅಯೋಗ್ಯ'. ಬಿಡುಗಡೆ ಆದ ಪ್ರತಿ ಹಾಡುಗಳು ಸೂಪರ್ ಹಿಟ್ ಲೀಸ್ಟ್ ಸೇರಿಕೊಂಡಿದ್ದು ಸಿನಿಮಾ ಪ್ರೇಕ್ಷಕರಿಂದ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆರಂಭದಿಂದಲೇ ನಿರೀಕ್ಷೆ ಮೂಡಿಸಿರುವ 'ಅಯೋಗ್ಯ' ಚಿತ್ರ ಮತ್ತೆ ಸದ್ದು ಮಾಡುತ್ತಿದೆ.
ಸತೀಶ್ ನೀನಾಸಂ ಅಭಿನಯದ 'ಅಯೋಗ್ಯ' ಚಿತ್ರದ ಡಬ್ಬಿಂಗ್ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಹೌದು ಬಾಲಿವುಡ್ ಅಂಗಳಕ್ಕೆ 'ಅಯೋಗ್ಯ' ಕಾಲಿಡುತ್ತಿದ್ದಾನೆ. ಸಿನಿಮಾ ಬಿಡುಗಡೆ ಮುಂಚಿತವಾಗಿದೆ ಪ್ರೇಮ್ ವ್ಯಾಸ್ ಎನ್ನುವವರು ಹಿಂದಿ ಡಬ್ಬಿಂಗ್ ರೈಟ್ಸ್ ಅನ್ನು 81 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ಈ ವಿಚಾರ ಚಿತ್ರತಂಡಕ್ಕೆ ಖುಷಿಯನ್ನು ತಂದಿದೆ.
ದಾರಿ ಬಿಡಿ 'ಅಯೋಗ್ಯ' ಸತೀಶ ಬರ್ತಾವ್ನೆ
ಚಿತ್ರೀಕರಣ ಕಂಪ್ಲೀಟ್ ಮಾಡಿ ತೆರೆಗೆ ಬರಲು ಸಿದ್ದವಾಗಿರುವ 'ಅಯೋಗ್ಯ' ಸಿನಿಮಾವನ್ನು ಇದೇ ತಿಂಗಳ 17 ರಂದು ಬಿಡುಗಡೆ ಮಾಡಲು ಸಿನಿಮಾ ತಂಡ ಸಿದ್ದತೆ ಮಾಡಿಕೊಂಡಿದೆ. ಈಗಾಲೇ ಚಿತ್ರತಂಡ ಪ್ರಚಾರದ ಕೆಲಸವನ್ನು ಶುರು ಮಾಡಿದ್ದು ಇಂದು ಸೆನ್ಸಾರ್ ಸರ್ಟಿಫಿಕೇಟ್ ಅನ್ನು ಪಡೆಯಲಿದ್ದಾನೆ 'ಅಯೋಗ್ಯ'.
ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಮಹೇಶ್ ಕುಮಾರ್ ನಿರ್ದೇಶನ ಮಾಡಿರುವ ಅಯೋಗ್ಯ ಚಿತ್ರ ಪ್ರಾರಂಭದಿಂದಲೇ ಉತ್ತಮ ಪ್ರತಿಕ್ರಿಯೆಯನ್ನು ಅಭಿಮಾನಿಗಳಿಂದ ಪಡೆದುಕೊಳ್ಳುತ್ತಿದೆ. ಎಲ್ಲಾ ಸೂಚನೆಗಳನ್ನು ನೋಡಿದರೆ ಚಿತ್ರ ಹಿಟ್ ಲೀಸ್ಟ್ ಸೇರುವ ಸಾಧ್ಯತೆಯೂ ಇದೆ.