»   » ಕೊನೆಗೂ 'ಕಟ್ಟಪ್ಪ'ನನ್ನ ಕ್ಷಮಿಸಿದ ಕರುನಾಡು

ಕೊನೆಗೂ 'ಕಟ್ಟಪ್ಪ'ನನ್ನ ಕ್ಷಮಿಸಿದ ಕರುನಾಡು

Posted By:
Subscribe to Filmibeat Kannada

'ಕನ್ನಡಿಗರು ವಿಶಾಲ ಹೃದಯದವರು'.....'ಕನ್ನಡಿಗರು ಕ್ಷಮಿಸುವ ಗುಣವುಳ್ಳವರು'.....ಇದು ಕನ್ನಡಿಗರ ಗುಣ. 9 ವರ್ಷದ ಹಿಂದೆ ಕನ್ನಡಿಗರ ಬಗ್ಗೆ ಕೀಳಾಗಿ ಮಾತನಾಡಿದ್ದ ತಮಿಳು ನಟ ಸತ್ಯರಾಜ್ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದ ಮೇಲೆ ಕೊನೆಗೂ ಕನ್ನಡಿಗರು ಕಟ್ಟಪ್ಪನನ್ನ ಕ್ಷಮಿಸಿದ್ದಾರೆ.[ಕರ್ನಾಟಕದಲ್ಲಿ 'ಬಾಹುಬಲಿ 2' ಬಿಡುಗಡೆ, ಬಂದ್ ವಾಪಸ್: ವಾಟಾಳ್ ನಾಗರಾಜ್ ಸ್ಪಷ್ಟನೆ]

ಆದ್ರೆ, ಮತ್ತೊಮ್ಮೆ ಈ ರೀತಿ ಘಟನೆಗಳು ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಕನ್ನಡ ನಾಡಿನ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿದಲ್ಲಿಟ್ಟುಕೊಳ್ಳಬೇಕು ಎಂದು ಬುದ್ಧಿ ಕಲಿಸಿದ್ದಾರೆ. ಈ ಮೂಲಕ ಕಳೆದ ಕೆಲ ದಿನಗಳಿಂದ 'ಬಾಹುಬಲಿ' ಚಿತ್ರದ ವಿರುದ್ಧ ನಡೆಯುತ್ತಿದ್ದ ಹೋರಾಟ, ಪ್ರತಿಭಟನೆ ಎಲ್ಲವೂ ಅಂತ್ಯವಾಗಿದೆ..... ಮುಂದೆ ಓದಿ....

'ಕಟ್ಟಪ'ನನ್ನ ಕ್ಷಮಿಸಿದ ಕರುನಾಡು!

ಕನ್ನಡದ ಬಗ್ಗೆ ಹೀನಾಯವಾಗಿ ಮಾತನಾಡಿದ್ದ ತಮಿಳು ನಟ ಸತ್ಯರಾಜ್ ಅವರನ್ನ ಕಡೆಗೂ ಕರುನಾಡಿನ ಜನತೆ ಕ್ಷಮಿಸಿದ್ದಾರೆ. ಕನ್ನಡಿಗರ ಒತ್ತಾಯಕ್ಕೆ ಮಣಿದು ಬಹಿರಂಗವಾಗಿ ವಿಷಾದ ತಿಳಿಸಿದ ಮೇಲೆ ಸತ್ಯರಾಜ್ ಚಿತ್ರವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.[ಕನ್ನಡಿಗರನ್ನ ಉದ್ದೇಶಿಸಿ ಸತ್ಯರಾಜ್ ಮಾಡಿದ ತಮಿಳು ಭಾಷಣದಲ್ಲಿ ಏನಿದೆ.?]

ನಮ್ಮ ಹೋರಾಟ ಕೇವಲ ಸತ್ಯರಾಜ್ ವಿರುದ್ಧ!

ಈ ಹೋರಾಟ ಕೇವಲ ತಮಿಳು ನಟ ಸತ್ಯರಾಜ್ ಅವರ ವಿರುದ್ಧ ಮಾತ್ರ. 'ಬಾಹುಬಲಿ' ಚಿತ್ರಕ್ಕಾಗಲಿ, 'ಬಾಹುಬಲಿ' ನಿರ್ದೇಶಕರ ಮೇಲಾಗಲಿ ಅಲ್ಲ ಎಂದು ಕನ್ನಡ ಸಂಘಟನೆಗಳು ತಿಳಿಸಿವೆ. ಹೀಗಾಗಿ, ಇದು ಕನ್ನಡಿಗರಿಗೆ ಸಂದ ಜಯ ಎನ್ನಬಹುದು.[ಕನ್ನಡಿಗರ ಹೋರಾಟಕ್ಕೆ ಸಂದ ಜಯ: ಕಡೆಗೂ ತಲೆಬಾಗಿದ ಕಟ್ಟಪ್ಪ.!]

ಮತ್ತೊಮ್ಮೆ ಘಟನೆ ಮರುಕಳಿಸಬಾರದು!

ಸತ್ಯರಾಜ್ ತಮಿಳರ ಪರ ಎನ್ನುವುದಕ್ಕೆ ಯಾವುದೇ ದ್ವೇಷವಿಲ್ಲ. ಆದ್ರೆ, ಕನ್ನಡಿಗರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡಿರಬೇಕು. ಮತ್ತೊಮ್ಮೆ ಈ ರೀತಿ ಕೀಳಾಗಿ ಮಾತನಾಡಬಾರದು. ,ಮತ್ತೆ ಮಾತನಾಡಿದ್ರೆ ಮತ್ಯಾವ ಸಿನಿಮಾವೂ ಕರ್ನಾಟಕದಲ್ಲಿ ಬಿಡುಗಡೆಯಾಗಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.[ಕನ್ನಡಿಗರ ಮುಂದೆ ಮಂಡಿಯೂರಿದ ಕಟ್ಟಪ್ಪ: ಸಾ.ರಾ.ಗೋವಿಂದು ಪ್ರತಿಕ್ರಿಯೆ ಏನು.?]

ಅಲ್ಲಿ ಕನ್ನಡ ಬ್ಯಾನ್ ಮಾಡಿದ್ರೆ, ಇಲ್ಲಿ ತಮಿಳು ಬ್ಯಾನ್ ಮಾಡ್ತಿವಿ!

ಕನ್ನಡ ಸಿನಿಮಾಗಳನ್ನ ತಮಿಳುನಾಡಿನಲ್ಲಿ ಬ್ಯಾನ್ ಮಾಡಿದ್ರೆ, ಕರ್ನಾಟಕದಲ್ಲೂ ತಮಿಳು ಚಿತ್ರಗಳನ್ನ ರದ್ದುಗೊಳಿಸುತ್ತೇವೆ'' ಎಂದು ಕನ್ನಡ ಹೋರಾಟಗಾರರು ತಿಳಿಸಿದ್ದಾರೆ. ಆದ್ರೆ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರು, ತಮಿಳುನಾಡಿನಲ್ಲಿ ಕನ್ನಡ ಸಿನಿಮಾ ಪ್ರದರ್ಶನ ನಿಲ್ಲಿಸುವುದು ಎಂಬ ಸುದ್ದಿ ವದಂತಿ ಎಂದು ಸ್ಪಷ್ಟಪಡಿಸಿದ್ದಾರೆ.[ಮುಂದುವರೆದ 'ಕಟ್ಟಪ್ಪ'ನ ವಿವಾದ: ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳು ಬ್ಯಾನ್!]

ಯಾವುದೇ ಹಣ ಪಡೆದಿಲ್ಲ!

ಈ ಮಧ್ಯೆ 'ಬಾಹುಬಲಿ' ಚಿತ್ರದಿಂದ ಸಂಘಟನೆಗಳು ಹಣ ಪಡೆದುಕೊಂಡಿದೆ ಎಂಬ ಆರೋಪಗಳು ಕೇಳಿ ಬರುತ್ತಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್ ''ನಮ್ಮ ಒಕ್ಕೂಟ ಪ್ರಮಾಣಿಕವಾಗಿದೆ. ಯಾರೇ ಈ ಬಗ್ಗೆ ಬಂದು ಕೇಳಿದ್ರು ಹೇಳ್ತಿವಿ'' ಎಂದು ಸಮರ್ಥಿಸಿಕೊಂಡರು.[ಕನ್ನಡಿಗರನ್ನ ಹೀಯಾಳಿಸುತ್ತಿರುವ ತಮಿಳರು: ಟ್ವಿಟ್ಟರ್ ನಲ್ಲಿ ಘೋರ ಯುದ್ಧ.!]

'ಬಾಹುಬಲಿ' ಚಿತ್ರಕ್ಕೆ ಅಡ್ಡಿಯಿಲ್ಲ!

ಹೀಗಾಗಿ, ಏಪ್ರಿಲ್ 28 ರಂದು ಜಗತ್ತಿನಾದ್ಯಂತ ತೆರೆಕಾಣಲಿರುವ 'ಬಾಹುಬಲಿ-2 'ಚಿತ್ರಕ್ಕೆ ಕರ್ನಾಟಕದಲ್ಲಿ ಯಾವುದೇ ಅಡ್ಡಿ, ಆತಂಕವಿಲ್ಲದಂತಾಗಿದೆ.[ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಅಡ್ಡಿಯಾಗಿಲ್ಲ: ಸಾ.ರಾ.ಗೋವಿಂದು]

ಏಪ್ರಿಲ್ 28ಕ್ಕೆ ಬಂದ್ ಇಲ್ಲ!

'ಬಾಹುಬಲಿ' ಚಿತ್ರವನ್ನ ವಿರೋಧಿಸಿ ಏಪ್ರಿಲ್ 28 ರಂದು ಕರೆ ನೀಡಲಾಗಿದ್ದ 'ಬೆಂಗಳೂರು ಬಂದ್' ವಾಪಸ್ ಪಡೆಯಲಾಗಿದೆ. ಈ ಮೂಲಕ ಆ ದಿನ ಬೆಂಗಳೂರು ಯಥಾಸ್ಥಿತಿಯಲ್ಲಿರಲಿದೆ.

English summary
Kannada activist Vatal Nagaraj and others have decided to allow the screening of Telugu film 'Bahubali - The Conclusion' in Karnataka. Earlier, Satyaraj has apologised to Kannadigas for his remarks about Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada