»   » ಬಾಹುಬಲಿಯಲ್ಲಿ ಅಸ್ಲಂ ಖಾನ್ ಆಗಿ 'ಕಿಚ್ಚ' ಸುದೀಪ್

ಬಾಹುಬಲಿಯಲ್ಲಿ ಅಸ್ಲಂ ಖಾನ್ ಆಗಿ 'ಕಿಚ್ಚ' ಸುದೀಪ್

Posted By:
Subscribe to Filmibeat Kannada

ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ದ್ವಿಭಾಷೆಯಲ್ಲಿ ತಯಾರಾಗುತ್ತಿರುವ 'ಬಾಹುಬಲಿ' ಚಲನಚಿತ್ರ ಈಗಾಗಲೆ ಭಾರೀ ಸದ್ದು ಮಾಡಲು ಆರಂಭಿಸಿದೆ. ಭರ್ಜರಿಯಾದ ಸೆಟ್ಟಿಂಗುಗಳು, ಕದ್ದ ಪೋಸ್ಟರುಗಳು, ಬಿಡುಗಡೆಯಾದ ಅನುಷ್ಕಾ ಶೆಟ್ಟಿ ಮೊದಲ ಪೋಸ್ಟರು ಕೂಡ ಸುದ್ದಿಗೆ ಗ್ರಾಸವಾಗಿವೆ.

ಅಣ್ಣತಮ್ಮಂದಿರಾಗಿ ಪ್ರಭಾಸ್ ಮತ್ತು ರಾಣಾ ಡಗ್ಗುಬಾಟಿ ಪ್ರಮುಖ ಭೂಮಿಕೆಯಲ್ಲಿ ನಟಿಸುತ್ತಿದ್ದು, ಇಬ್ಬರ ನಡುವಿನ ಕಾದಾಟದ ಕಥೆಯನ್ನು ಬಾಹುಬಲಿ ಒಳಗೊಂಡಿದೆ. ಆದರೆ, ಈ ಚಿತ್ರದಲ್ಲಿ ಕನ್ನಡದ 'ಅಭಿನಯ ಚಕ್ರವರ್ತಿ' ಎಂದು ಬಿರುದಾಂಕಿತವಾಗಿರುವ 'ಕಿಚ್ಚ' ಸುದೀಪ್ ಅವರಿಗೇನು ಕೆಲಸ? [ದಂಗುಬಡಿಸುವ 'ಬಾಹುಬಲಿ' ಚಿತ್ರದ ಸೆಟ್ಸ್]

Baahubali: Dynamic And Dashing Sudeep As Aslaam Khan

ಬಹಿರಂಗವಾಗಿರುವ ಮಾಹಿತಿಯ ಪ್ರಕಾರ, ಸುದೀಪ್ ಅವರು ಅಸ್ಲಂ ಖಾನ್ ಎಂಬ ಪಾತ್ರವನ್ನು ಪೋಷಿಸುತ್ತಿದ್ದಾರೆ. ಸುದೀಪ್ ಕೈಯಲ್ಲಿ ಕತ್ತಿ ಹಿಡಿದುಕೊಂಡಿದ್ದು, ಹಲ್ಲು ಮಸೆಯುತ್ತಿರುವ ಪೋಸ್ಟರ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದರಲ್ಲಿ ಅವರದು ಎಂಥ ಪಾತ್ರ?

ತೆಲುಗಿನಲ್ಲಿಯೂ ಈ ಹಿಂದೆ ಸುದೀಪ್ ನಟಿಸಿರುವುದು ಎಲ್ಲರಿಗೂ ತಿಳಿದ ಸಂಗತಿ. ರಾಜಮೌಳಿ ಅವರೇ ನಿರ್ದೇಶಿಸಿದ್ದ 'ಈಗ' ಚಿತ್ರದಲ್ಲಿ ನೆಗೆಟೀವ್ ಪಾತ್ರವನ್ನು ಸುದೀಪ್ ಅತ್ಯದ್ಭುತವಾಗಿ ಪೋಷಿಸಿದ್ದರು. ಅವರ ನಟನೆ ಭಾರೀ ಮೆಚ್ಚುಗೆಗೂ ಪಾತ್ರವಾಗಿತ್ತು.

Baahubali: Dynamic And Dashing Sudeep As Aslaam Khan

ಈಗ ಬಿಡುಗಡೆಯಾಗಿರುವ ಸುದೀಪ್ ಅವರಿದ್ದ 'ಅಸ್ಲಂ ಖಾನ್' ಪಾತ್ರದ ಮೊದಲ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುಳಿದಾಡುತ್ತಿದೆ. ಒಂದು ಮಾಹಿತಿಯ ಪ್ರಕಾರ, ಈ ಚಿತ್ರದಲ್ಲಿಯೂ ಅವರದು ನೆಗೆಟೀವ್ ಶೇಡ್ ಇರುವಂಥ ಪಾತ್ರ. ['ಬಾಹುಬಲಿ' ಚಿತ್ರದ ಅನುಷ್ಕಾ ಫಸ್ಟ್ ಲುಕ್]
English summary
Check Kiccha Sudeep as Aslaam Khan in the upcoming bi-lingual movie Baahubali. Directed by ace director SS Rajamouli, Baahubali will soon reach the big screens. The multi-starrer movie has already in the spotlight for different reasons.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada