For Quick Alerts
  ALLOW NOTIFICATIONS  
  For Daily Alerts

  ಥಿಯೇಟರ್‌ಗೆ 100% ಕೊಟ್ಟಿಲ್ಲ, ಮತ್ತೊಂದು ನಿರೀಕ್ಷೆಯ ಚಿತ್ರ ಮುಂದಕ್ಕೆ

  |

  ರಾಜ್ಯದಲ್ಲಿ ಸದ್ಯಕ್ಕೆ ಕೊರೊನಾ ವೈರಸ್ ಹೊಸ ಪ್ರಕರಣಗಳು ನಿಯಂತ್ರಣದಲ್ಲಿದೆ. ರಾಜ್ಯದಾದ್ಯಂತ ಮದುವೆ, ಸಮಾರಂಭಗಳು, ಶಾಲಾ-ಕಾಲೇಜುಗಳು ನಡೆಸಲು ಅನುಮತಿ ಕೊಡಲಾಗಿದೆ. ಆದರೆ, ಮೂರನೇ ಭೀತಿಯಿರುವ ಹಿನ್ನೆಲೆ ಆತಂಕವೂ ಇದೆ. ಯಾವುದೇ ಕ್ಷಣದಲ್ಲಿ ಮತ್ತೆ ಸೋಂಕು ಏರಿಕೆಯಾಗಬಹುದು, ಮತ್ತೆ ಲಾಕ್‌ಡೌನ್ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು ಎಂಬ ಭಯವೂ ಇದೆ.

  ಇನ್ನು ಚಿತ್ರಮಂದಿರಗಳ ವಿಚಾರದಲ್ಲೂ ಇದೇ ಆತಂಕ ಮುಂದುವರಿದಿದೆ. ಶೇಕಡಾ 50 ಪರ್ಸೆಂಟ್ ಅಡಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. 100 ಪರ್ಸೆಂಟ್ ಅವಕಾಶ ಸಿಗುವವರೆಗೂ ಸ್ಟಾರ್ ನಟರ ಚಿತ್ರಗಳು ಬರುವುದಿಲ್ಲ ಎಂಬ ನಿರ್ಧಾರ ಮಾಡಿವೆ. ಈ ನಡುವೆ ಅಲ್ಲೊಂದು ಇಲ್ಲೊಂದು ಚಿತ್ರ ಬಂದರೂ ಪ್ರಸ್ತುತ ಪ್ರೇಕ್ಷಕರ ಕೊರತೆ ಕಾಣುತ್ತಿದೆ.

  ಡಾಲಿಯ 'ಹೆಡ್‌ಬುಷ್' ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ಖ್ಯಾತ ನಟಡಾಲಿಯ 'ಹೆಡ್‌ಬುಷ್' ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ಖ್ಯಾತ ನಟ

  ಹಾಗಾಗಿ, ರಿಲೀಸ್ ದಿನಾಂಕ ಘೋಷಿಸಿದ್ದ ಚಿತ್ರಗಳು ಮತ್ತೆ ಮುಂದೂಡಿದ್ದವು. ಈಗ ಧನಂಜಯ್ ಅಭಿನಯದ ಚಿತ್ರವೂ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿದೆ.

  'ಡಾಲಿ' ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಸೆಪ್ಟೆಂಬರ್ 24ಕ್ಕೆ ರಿಲೀಸ್ ಆಗಬೇಕಿತ್ತು. ಅಷ್ಟೊತ್ತಿಗೆ 100 ಪರ್ಸೆಂಟ್ ಅನುಮತಿ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಬಿಡುಗಡೆ ದಿನಾಂಕ ಪ್ರಕಟಿಸಲಾಗಿತ್ತು. ಆದ್ರೀಗಿನ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳಿಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ಕೊಡುವುದು ದೂರದ ಮಾತಾಗಿದೆ. ಹಾಗಾಗಿ, ಬಡವ ರಾಸ್ಕಲ್ ಚಿತ್ರ ಮತ್ತೆ ಮುಂದಕ್ಕೆ ಹೋಗಿದೆ.

  ಈ ಬಗ್ಗೆ ಸ್ವತಃ ಧನಂಜಯ್ ಟ್ವಿಟ್ಟರ್‌ನಲ್ಲಿ ಖಚಿತಪಡಿಸಿದ್ದಾರೆ. ನೆಟ್ಟಿಗರೊಬ್ಬರು 'ಬಡವ ರಾಸ್ಕಲ್ ಸಿನಿಮಾ ಮುಂದಕ್ಕೆ ಹೋಯ್ತಾ'? ಎಂದು ಪ್ರಶ್ನಿಸಿ ಟ್ವಿಟ್ಟರ್‌ನಲ್ಲಿ ಕೆಆರ್‌ಜಿ ಸ್ಟುಡಿಯೋಸ್ ಮತ್ತು ಧನಂಜಯ್‌ಗೆ ಟ್ಯಾಗ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಡಾಲಿ, ''ಹೌದು, ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಹೊಸ ದಿನಾಂಕ ಶೀಘ್ರದಲ್ಲಿ ಘೋಷಿಸುತ್ತೇವೆ'' ಎಂದಿದ್ದಾರೆ.

  ರಚಿತಾ ಜೊತೆ ಡಾಲಿ ಧನಂಜಯ್ 'ಮಾನ್ಸೂನ್ ರಾಗ'ರಚಿತಾ ಜೊತೆ ಡಾಲಿ ಧನಂಜಯ್ 'ಮಾನ್ಸೂನ್ ರಾಗ'

  ಶಂಕರ್ ಗುರು ಈ ಚಿತ್ರ ನಿರ್ದೇಶಿಸಿದ್ದು, ಧನಂಜಯ್ ಮತ್ತು ಅಮೃತಾ ಅಯ್ಯಂಗರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಡಾಲಿ ಪಿಕ್ಚರ್ಸ್ ಅಡಿಯಲ್ಲಿ ಸ್ವತಃ ಧನಂಜಯ್ ಈ ಸಿನಿಮಾಗೆ ಬಂಡವಾಳ ಹಾಕಿದ್ದು, ರಾಜ್ಯಾದ್ಯಂತ ಕೆಆರ್‌ಜಿ ಸ್ಟುಡಿಯೋ ಬಿಡುಗಡೆ ಮಾಡುತ್ತಿದೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದರು. ಆನಂದ್ ಆಡಿಯೋ ಸಾಂಗ್ಸ್ ಖರೀದಿಸಿದ್ದು, ಈಗಾಗಲೇ ಬಿಡುಗಡೆಯಾಗಿದ್ದ ಹಾಡುಗಳು ಹಿಟ್ ಆಗಿತ್ತು.

  Badava Rascal Movie Released Postponed

  ಇದಕ್ಕೂ ಮುಂಚೆ ಧನಂಜಯ್ ಮತ್ತು ದುನಿಯಾ ವಿಜಯ್ ನಟಿಸಿರುವ 'ಸಲಗ' ಸಿನಿಮಾ ಸಹ ಬಿಡುಗಡೆ ಮುಂದೂಡಿದೆ. ಆಗಸ್ಟ 20 ರಂದು ಸಲಗ ಬರಬೇಕಿತ್ತು. 100 ಪರ್ಸೆಂಟ್ ಅವಕಾಶ ನೀಡದ ಕಾರಣ ಬಿಡುಗಡೆಯಿಂದ ಹಿಂದಕ್ಕೆ ಸರಿದಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಚಿತ್ರವೂ ರಿಲೀಸ್ ದಿನಾಂಕ ಘೋಷಿಸಿ ಆಮೇಲೆ ಮುಂದಕ್ಕೆ ಹೋಗಿದೆ.

  ಥಿಯೇಟರ್‌ಗಳಿಗೆ 100 ಪರ್ಸೆಂಟ್ ಅನುಮತಿ ಸಿಗಲಿ ಎಂದು ಕಾಯುತ್ತಿರುವ ಸ್ಟಾರ್ ನಟರ ಚಿತ್ರಗಳ ನಡುವೆ, ಲೂಸ್ ಮಾದ ಯೋಗೇಶ್ ನಟನೆಯ 'ಲಂಕೆ' ಚಿತ್ರ ಸೆಪ್ಟೆಂಬರ್ 10 ರಂದು ಶುಕ್ರವಾರ ಬಿಡುಗಡೆಯಾಗಿದೆ.

  ಧನಂಜಯ್ ಸಿನಿಮಾಗಳ ವಿವರ

  'ಬಡವ ರಾಸ್ಕಲ್' ಸಿನಿಮಾ ಹೊರತುಪಡಿಸಿ ಧನಂಜಯ್ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ. 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ನಟಿಸಿರುವ 'ಪುಷ್ಪ' ಸಿನಿಮಾದಲ್ಲಿ ಧನಂಜಯ್ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಸುಕುಮಾರ್ ಈ ಚಿತ್ರ ನಿರ್ದೇಶಿಸಿದ್ದು, ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ ತಿಂಗಳಲ್ಲಿ 'ಪುಷ್ಪ ಭಾಗ-1' ರಿಲೀಸ್ ಆಗುತ್ತಿದೆ. ರೋಹಿತ್ ಪದಕಿಯ ರತ್ನನ್ ಪ್ರಪಂಚ, ಶಿವಣ್ಣನ 'ಬೈರಾಗಿ,' ಜಗ್ಗೇಶ್ ಜೊತೆ ತೋತಾಪುರಿ, ಡಾಲಿ ಸಿನಿಮಾ, ಆರ್ಕೆಸ್ಟ್ರಾ ಮೈಸೂರು ಅಂತಹ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Kannada Actor Dhananjaya starrer Badava Rascal Movie Released Postponed. next date will announce soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X