»   » 'ಬಹುಪರಾಕ್'ನ ಸ್ನೇಹ ಮತ್ತು ಪ್ರೀತಿ ಮೇಘನಾ ರಾಜ್

'ಬಹುಪರಾಕ್'ನ ಸ್ನೇಹ ಮತ್ತು ಪ್ರೀತಿ ಮೇಘನಾ ರಾಜ್

Posted By:
Subscribe to Filmibeat Kannada

ಸಿಂಪಲ್ ಸುನಿ ಆಕ್ಷನ್ ಕಟ್ ನಲ್ಲಿ ಮೂಡಿಬಂದಿರುವ ಎರಡನೇ ಚಿತ್ರ 'ಬಹುಪರಾಕ್'. ಈ ಬಾರಿ ಸುನಿ ಏನೆಲ್ಲಾ ಮ್ಯಾಜಿಕ್ ಮಾಡಿದ್ದಾರೆ ಎಂಬ ಕುತೂಹಲ ಸ್ಯಾಂಡಲ್ ವುಡ್ ನಲ್ಲಿ ನೆಲೆಸಿದೆ. ಚಿತ್ರ ಇದೇ ಜುಲೈ 25ಕ್ಕೆ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಜೊತೆ ಮೇಘನಾ ರಾಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗಲೆ ಚಿತ್ರ ಮುಂಬೈನಲ್ಲಿ ಸೆನ್ಸಾರ್ ಆಗಿದ್ದು, ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಟಿವಿ ರೈಟ್ಸ್ ಉದಯ ವಾಹಿನಿಗೆ ಮಾರಾಟವಾಗಿದ್ದು ಉತ್ತಮ ರೇಟಂತೂ ಸಿಕ್ಕಿದೆ ಎನ್ನುತ್ತಾರೆ ನಿರ್ದೇಶಕರು.

ಈ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಚಿತ್ರದ ನಾಯಕಿ ಮೇಘನಾ ರಾಜ್ ಸಹ ಒಬ್ಬರು. ಚಿತ್ರದಲ್ಲಿ ಅವರದು ಎರಡು ಶೇಡ್ ಉಳ್ಳ ಪಾತ್ರ. ಸ್ನೇಹ ಮತ್ತು ಪ್ರೀತಿಯ ಪಾತ್ರಗಳಿಗಾಗಿ ಅವರು ಏನೆಲ್ಲಾ ಕಷ್ಟಪಟ್ಟರು, ತಮ್ಮ ಪಾತ್ರದ ಬಗ್ಗೆ ಒನ್ಇಂಡಿಯ ಜೊತೆ ಕೆಲವು ಸಂಗತಿಗಳನ್ನು ಹಂಚಿಕೊಂಡರು. ಆ ವಿವರಗಳು ಸ್ಲೈಡ್ ನಲ್ಲಿ.

ಬಹುಪರಾಕ್ ಚಿತ್ರದ ತಮ್ಮ ಪಾತ್ರದ ಬಗ್ಗೆ ಹೇಳಿ?

ಚಿತ್ರದಲ್ಲಿ ತಮ್ಮದು ಸ್ನೇಹ ಮತ್ತು ಪ್ರೀತಿಯ ಎರಡು ಶೇಡ್ ಗಳುಳ್ಳ ಪಾತ್ರ. ಎರಡೂ ಒಂದಕ್ಕಿಂತ ಒಂದು ಭಿನ್ನ. ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ಹೊರಳುವುದು ನಿಜಕ್ಕೂ ನನ್ನ ಮಟ್ಟಿಗೆ ಸವಾಲಿನದಾಗಿತ್ತು. ಒಂದು ಕೇಕ್ ವಿವಿಧ ಪದರಗಳಂತೆ ನನ್ನ ಪಾತ್ರ ಚಿತ್ರದಲ್ಲಿ ಬರುತ್ತದೆ.

ಸ್ಯಾಂಡ್ ವಿಚ್ ನಂತಹ ಪಾತ್ರ ನನ್ನದು

ಶ್ರೀನಗರ ಕಿಟ್ಟಿ ಹಾಗೂ ಸುನಿ ಅವರ ಬೆಂಬಲ ಇದ್ದಿದ್ದರಿಂದ ಈ ರೀತಿಯ ಸವಾಲಿನ ಪಾತ್ರ ನಿರ್ವಹಿಸಲು ಸಾಧ್ಯವಾಯಿತು. ನನ್ನ ವೃತ್ತಿಜೀವನದಲ್ಲಿ ಈ ರೀತಿಯ ಪಾತ್ರ ಮಾಡಿಲ್ಲ. ಚಿತ್ರದ ಎರಡೂ ಪಾತ್ರಗಳು ಸಿಂಬಾಲಿಕ್ ಆಗಿರುತ್ತವೆ. ಪ್ರತಿಯೊಂದು ಲೇಯರ್ ನಲ್ಲೂ ಪ್ರೀತಿ ಸ್ನೇಹವನ್ನು ಕಾಣಬಹುದು. ಕೆಲವೇ ಕೆಲವು ಸಾಲುಗಳಲ್ಲಿ ನನ್ನ ಪಾತ್ರದ ಬಗ್ಗೆ ಹೇಳುವುದು ತುಂಬಾ ಕಷ್ಟ. ಸಂಪೂರ್ಣ ಕಥೆ ಗೊತ್ತಾದ ಮೇಲಷ್ಟೇ ಅರ್ಥವಾಗುತ್ತದೆ.

ಎರಡೂ ಪಾತ್ರಗಳನ್ನು ಹೇಗೆ ನಿಭಾಯಿಸಿದಿರಿ?

ಒಂದೇ ದಿನ ಎರಡು ಪಾತ್ರ, ಎರಡು ಭಿನ್ನ ಮನೋಸ್ಥಿತಿಗಳಲ್ಲಿ ನಾನು ಅಭಿನಯಿಸಬೇಕಾಗಿತ್ತು. ಅದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಬಾಡಿ ಲಾಂಗ್ವೇಜ್ ಬದಲಾಗಬೇಕಿತ್ತು, ದೈಹಿಕವಾಗಿಯೂ ಸವಾಲಿನಿಂದ ಕೂಡಿತ್ತು. ಅದು ಮೇಕಪ್ ಇರಬಹುದು, ಹೇರ್ ಸ್ಟೈಲ್ ಇರಬಹುದು ಹೀಗೆ ಎಲ್ಲವೂ ಒಂದು ಪಾತ್ರದಿಂದ ಇನ್ನೊಂದಕ್ಕೆ ಬದಲಾಗಬೇಕಿತ್ತು. ಒಂದೇ ದಿನ ಎರಡು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಬೇಕಾಗಿತ್ತು.

ಈ ಚಿತ್ರದಲ್ಲಿ ಒಂದು ಹಾಡನ್ನೂ ಹಾಡಿದ್ದೀರಾ? ಹೇಗಿತ್ತು ನಿಮ್ಮ ಅನುಭವ?

ಇದು ನನ್ನ ಚೊಚ್ಚಲ ಹಾಡು. ಅದೊಂದು ಮರೆಯಲಾಗದ ಅನುಭವ. ಅಪ್ಪ (ಸುಂದರ್ ರಾಜ್) ರಂಗಭೂಮಿಯಲ್ಲಿದ್ದಾಗ ಅವರ ಜೊತೆ ಹಾಡಿದ ಅನುಭವ ನನಗಿತ್ತು. ಆ ಒಂದು ಅಭ್ಯಾಸ ಈ ಚಿತ್ರದಲ್ಲಿ ಹಾಡಲು ಅನುಕೂಲವಾಯಿತು. ರಾಜ್ ಮ್ಯೂಸಿಕ್ ಚಾನಲ್ ನಲ್ಲಿ ನಾನು ಗಣೇಶನ ಒಂದು ಸ್ತ್ರೋತ್ರ ಹಾಡಿದ್ದೆ. ಅದನ್ನು ನೋಡಿದ್ದ ಸುನಿ ಅವರು ಈ ಹಾಡು ಹಾಡಲು ಅವಕಾಶ ಕೊಟ್ಟರು.

ಆ ಹಾಡು ಹೇಗೆ ಮೂಡಿಬಂದಿದೆ?

ಈ ಹಾಡನ್ನು (ಬಹುಪರಾಕ್ ಟೈಟಲ್ ಸಾಂಗ್) ಹಾಡಬೇಕಾದರೆ ತುಂಬಾ ನರ್ವಸ್ ಆಗಿದ್ದೆ. ಅಪ್ಪ ಅಮ್ಮ ಜೊತೆಗೆ ಬಂದಿದ್ದರು. ಅವರು ನನ್ನ ಹಾಡನ್ನು ಓಕೆ ಮಾಡಿದ ಮೇಲೆ ನನಗೆ ಸಮಾಧಾನವಾಯಿತು. ಇದು ನನ್ನ ಮೊದಲ ಹಿನ್ನೆಲೆ ಗಾಯನ. ನನ್ನ ಜೊತೆಗೆ ಕಿಟ್ಟಿ ಅವರು ಹಾಡಿದ್ದಾರೆ. ಆದರೆ ಅವರು ಈಗಾಗಲೆ ಹಲವಾರು ಹಾಡುಗಳನ್ನು ಹಾಡಿರುವ ಕಾರಣ ಅವರೊಬ್ಬ ಅನುಭವಿ ಎನ್ನಬಹುದು.

English summary
Suni's next movie Bahuparak starring Srinagar Kitty and Meghana Raj is slated to release on 25th July. My character is what connects the different layers of the movie like the icing on a cake. While it was quite mentally demanding, I got good support from Suni and Srinagar Kitty says Meghana Raj.
Please Wait while comments are loading...