»   » ಯಶ್ ನನ್ನ ಗೆಳೆಯ ಎಂದ ರೋರಿಂಗ್ ಸ್ಟಾರ್ ಶ್ರೀಮುರಳಿ

ಯಶ್ ನನ್ನ ಗೆಳೆಯ ಎಂದ ರೋರಿಂಗ್ ಸ್ಟಾರ್ ಶ್ರೀಮುರಳಿ

Posted By:
Subscribe to Filmibeat Kannada
ಯಶ್ ನನ್ನ ಗೆಳೆಯ ಎಂದ ರೋರಿಂಗ್ ಸ್ಟಾರ್ ಶ್ರೀಮುರಳಿ | Filmibeat Kannada

ನಟ ಯಶ್ ನನ್ನ ಗೆಳೆಯ ಎಂದು ರೋರಿಂಗ್ ಸ್ಟಾರ್ ಶ್ರೀಮುರಳಿ ಹೇಳಿದ್ದಾರೆ. ಅಂದಹಾಗೆ, ಈ ಇಬ್ಬರು ಸ್ಟಾರ್ ಗಳು ಈಗ ಒಂದು ಸಿನಿಮಾಗೆ ಸಾಥ್ ನೀಡಿದ್ದಾರೆ. 'ಬಕಾಸುರ' ಸಿನಿಮಾಗೆ ಯಶ್ ಧ್ವನಿ ನೀಡಿದ್ದು, ಆ ಚಿತ್ರದ ಟ್ರೇಲರ್ ಅನ್ನು ಶ್ರೀ ಮುರಳಿ ಬಿಡುಗಡೆ ಮಾಡಿದ್ದಾರೆ.

ನಿನ್ನೆ 'ಬಕಾಸುರ' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ವೇದಿಕೆ ಮೇಲೆ ಇದ್ದ ಚಿತ್ರದ ನಾಯಕ ಆರ್.ಜೆ.ರೋಹಿತ್ ''ನಮ್ಮ ಸಿನಿಮಾಗೆ ನಟ ಯಶ್ ಧ್ವನಿ ನೀಡಿದ್ದಾರೆ. ಆದರೆ ಇನ್ನೊಬ್ಬ ನಟ ಶ್ರೀ ಮುರಳಿ ಆ ಟ್ರೇಲರ್ ರಿಲೀಸ್ ಮಾಡುತ್ತಿದ್ದಾರೆ.'' ಎಂದು ಹೇಳಿದರು. ಆಗ ಮಾತನಾಡಿದ ಶ್ರೀ ಮುರಳಿ ''ಯಶ್ ನನ್ನ ಸ್ನೇಹಿತ, ನೀವು ಅವರ ಸ್ನೇಹಿತ, ನಾವೆಲ್ಲ ಸ್ನೇಹಿತರು. ಅದಕ್ಕೆ ಸ್ನೇಹಿತರ ಸಿನಿಮಾಗೆ ಪ್ರೋತ್ಸಾಹ ನೀಡಲು ಬಂದೆ'' ಎಂದರು.

Bakasura kannada movie thriller released by Srimurali

ಇನ್ನು 'ಕರ್ವ' ಸಿನಿಮಾದ ನಂತರ ನಿರ್ದೇಶಕ ನವನೀತ್ 'ಬಕಾಸುರ' ಸಿನಿಮಾ ಮಾಡಿದ್ದಾರೆ. ಸದ್ಯ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ 2 ಲಕ್ಷ ಹಿಟ್ಸ್ ಪಡೆಯುತ್ತಿದೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ನಟ ರವಿಚಂದ್ರನ್ ನಟಿಸಿದ್ದಾರೆ.'ಗಾಂಧಾರಿ' ಧಾರಾವಾಹಿ ಖ್ಯಾತಿಯ ನಟಿ ಕಾವ್ಯಗೌಡ ಈ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದಾರೆ. 'ಬಕಾಸುರ' ಸಿನಿಮಾ ಇದೇ ತಿಂಗಳ 30ಕ್ಕೆ ತೆರೆಗೆ ಬರಲಿದೆ.

English summary
Kannada actor Ravichandran's Bakasura kannada movie thriller released by Srimurali.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada