For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ ಬಾಲಯ್ಯ: ಪವರ್ ಸ್ಟಾರ್, ರಾಕಿಂಗ್ ಸ್ಟಾರ್ ಸಾಥ್

  |
  ಇಲ್ಲಿ ರಾಜ್ ಕುಮಾರ್ ಅಲ್ಲಿ ಎನ್ ಟಿ ಆರ್..! | FILMIBEAT KANNADA

  ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ ಅಭಿನಯದ 'ಎನ್.ಟಿ.ಆರ್ ಕಥಾನಾಯಕಡು' ಸಿನಿಮಾ ಇದೇ ವಾರ ತೆರೆಕಾಣ್ತಿದೆ. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಬಾಲಯ್ಯ ಇಂದು ಬೆಂಗಳೂರಿಗೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದರು.

  ಈ ವೇಳೆ ಬಾಲಕೃಷ್ಣ ಅವರನ್ನ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸ್ವಾಗತಿಸಿದರು. ಬಾಲಯ್ಯ ಜೊತೆ ವೇದಿಕೆ ಹಂಚಿಕೊಂಡ ಯಶ್ ಹಾಗೂ ಪುನೀತ್, ಎನ್.ಟಿ.ಆರ್ ಅವರ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.

  ಇಂದು ಬೆಂಗಳೂರಿಗೆ ಬರ್ತಾರೆ 'ಪೆಟ್ಟಾ' ಮತ್ತು 'ಎನ್ ಟಿ ಆರ್' ಟೀಂ

  ಬಳಿಕ ಮಾತನಾಡಿದ ಬಾಲಯ್ಯ ''ಎನ್.ಟಿ.ಆರ್ ಕೇವಲ ತೆಲುಗು ಜನರ ಸ್ಟಾರ್ ಅಲ್ಲ, ಅವರೊಬ್ಬರ ಇಂಡಿಯನ್ ಸ್ಟಾರ್. ಕನ್ನಡ ಪ್ರೇಕ್ಷಕರು ಇಷ್ಟಪಡುತ್ತಿದ್ದ ನಟ ಅವರು. ಅವರ ಸಿನಿಮಾಗಳು, ಅವರು ನಡೆದ ಬಂದ ಹಾದಿ, ಆಫ್ ದಿ ಸ್ಕ್ರೀನ್ ನಲ್ಲಿ ಎನ್.ಟಿ.ಆರ್ ಹೇಗಿದ್ದರು ಎಂಬುದನ್ನ ಎಲ್ಲರೂ ತಿಳಿಯಬೇಕು. ಆ ಉದ್ದೇಶದಿಂದಲೇ ಈ ಸಿನಿಮಾ ಮಾಡಿದ್ದೇವೆ'' ಎಂದು ಬಾಲಯ್ಯ ಹೇಳಿದರು.

  'ಕೆಜಿಎಫ್' ಟ್ರೈಲರ್ ನೋಡಿ ಲೆಜೆಂಡ್ ಬಾಲಯ್ಯ ಏನಂದ್ರು.?

  ವಿಶೇಷವಾಗಿ ಡಾ ರಾಜ್ ಕುಮಾರ್ ಕುಟುಂಬದ ಜೊತೆಗಿನ ಆತ್ಮೀಯತೆಯನ್ನ ಹೇಳಿಕೊಂಡರು. ಅಣ್ಣಾವ್ರು ನಮ್ಮೊಂದಿಗೆ ಇಲ್ಲವಾದರೂ, ಅವರ ಕುಟುಂಬದವರು ಮತ್ತು ಅಣ್ಣ ತಮ್ಮಂದಿರಂತೆ ಇದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

  NTR ಬಯೋಪಿಕ್ ನಲ್ಲಿ ಶ್ರೀದೇವಿಯಾಗಲು ಅವಕಾಶ ಪಡೆದ ಸ್ಟಾರ್ ನಟಿ.!

  ಇನ್ನು ಕನ್ನಡದಲ್ಲಿ ಈ ಸಿನಿಮಾ ಬರುತ್ತಾ ಎಂದು ಕೇಳಿದ್ದಕ್ಕೆ ''ಇಲ್ಲ, ಕನ್ನಡದಲ್ಲಿ ಡಬ್ ಮಾಡಲು ಸಮಯ ಸಾಕಾಗಿಲ್ಲ. ಎರಡು ಭಾಗಗಳಾಗಿ ತಯಾರಾಗಿದೆ'' ಎಂದರು. ಇನ್ನು ಎನ್.ಟಿ.ಆರ್ ಚಿತ್ರದಲ್ಲಿ ರಾಜ್ ಕುಮಾರ್ ಅವರ ಪಾತ್ರವೂ ಇರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಜನರಿಗೆ ನಿರಾಸೆಯಾಗಿದೆ. ಯಾಕಂದ್ರೆ, ಈ ಚಿತ್ರದಲ್ಲಿ ರಾಜ್ ಕುಮಾರ್ ಬರುವುದಿಲ್ಲವಂತೆ.

  ಇನ್ನುಳಿದಂತೆ ಕ್ರಿಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಬಾಲಕೃಷ್ಣ, ವಿದ್ಯಾಬಾಲನ್, ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ ಸೇರಿದಂತೆ ಬಹುದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್, ಬಾಲಿವುಡ್ ನಟಿ ವಿದ್ಯಾಬಾಲನ್ ಹಾಗೂ ತೆಲುಗು ನಟ ಕಲ್ಯಾಣ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

  English summary
  Telugu actor Balakrishna starrer ntr kathanayakudu movie will release on january 9th all over india. so, balakrishna conducted pressmeet in bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X