»   » ನೇಣು ಬಿಗಿದ ಸ್ಥಿತಿಯಲ್ಲಿ ಕಿರುತೆರೆ ಖ್ಯಾತ ನಟಿ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಕಿರುತೆರೆ ಖ್ಯಾತ ನಟಿ ಪತ್ತೆ

By: ರವಿಕಿಶೋರ್
Subscribe to Filmibeat Kannada
Actress Mita Noor
ಬಾಂಗ್ಲಾದೇಶದ ಕಿರುತೆರೆ ಪ್ರಸಿದ್ಧ ನಟಿ ಸಬೀನಾ ಯಾಸ್ಮಿನ್ ಮಿತಾ ನೂರ್ (42) ಅವರು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಈ ಘಟನೆ ಢಾಕಾದ ಅವರ ನಿವಾಸದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಮ್ಮ ನಿವಾಸದ ಲಿವಿಂಗ್ ರೂಂನಲ್ಲಿ ಫ್ಯಾನಿಗೆ ಸ್ಕಾರ್ಪ್ ನಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮಿತಾ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಆಕೆಯ ದೇಹವನ್ನು ಕಳುಹಿಸಲಾಗಿದೆ. ಮಿತಾ ಸಾವಿಗೆ ನಿಖರವಾದ ಕಾರಣ ಗೊತ್ತಾಗಿಲ್ಲ.

ಮಿತಾ ಅವರಿಗೆ ಪತಿ ಹಾಗೂ ಇಬ್ಬರು ಪುತ್ರರಿದ್ದಾರೆ. ಎಲ್ಲರೂ ಒಟ್ಟಿಗೆ ವಾಸವಾಗಿದ್ದರು. ಪ್ರಾಥಮಿಕ ವರದಿಯ ಪ್ರಕಾರ ಆಕೆಯ ದೇಹದ ಮೇಲೆ ಅಲ್ಲಲ್ಲಿ ಕಪ್ಪು ಕಲೆಗಳಾಗಿರುವುದು ಪತ್ತೆಯಾಗಿದೆ. ಮೇಲ್ಮೋಟಕ್ಕೆ ಇದು ಆತ್ಮಹತ್ಯೆಯಂತೆ ತೋರುತ್ತಿದೆ ಎಂದು 'ಡೈಲಿ ಸ್ಟಾರ್' ಪತ್ರಿಕೆ ವರದಿ ಮಾಡಿದೆ.

ತಾನು ಹಾಗೂ ಮಕ್ಕಳು ಮನೆಯಲ್ಲಿ ಇಲ್ಲದೆ ಸಮಯದಲ್ಲಿ ಮಿತಾ ಅವರು ನಿದ್ರೆ ಮಾತ್ರೆ ಸೇವಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಪತಿ ಶಹನೂರ್ ರೆಹಮಾನ್ ಮುಜುಂದಾರ್ ಪೊಲೀಸರಿಗೆ ತಿಳಿಸಿದ್ದಾರೆ. ಅಸ್ವಾಭಾವಿಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
Television actress Sabina Yasmin Mita Noor allegedly committed suicide yesterday at her Gulshan home in the capital. An unnatural death case was filed with Gulshan Police Station in this connection, reports The Daily Star.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada