»   » 'ಬಸವಣ್ಣ' ಚಿತ್ರದ ನಾಯಕಿ ರಾಗಿಣಿ ಕಾಲಿಗೆ ಡ್ಯಾಮೇಜ್

'ಬಸವಣ್ಣ' ಚಿತ್ರದ ನಾಯಕಿ ರಾಗಿಣಿ ಕಾಲಿಗೆ ಡ್ಯಾಮೇಜ್

Posted By:
Subscribe to Filmibeat Kannada

ಸಾಮಾನ್ಯವಾಗಿ ಚಿತ್ರೀಕರಣದಲ್ಲಿ ನಾಯಕನಟರು ಗಾಯಗೊಂಡಿರುವುದನ್ನು ಓದಿರುತ್ತೀರಿ. ಸಾಹಸ ಸನ್ನಿವೇಶಗಳಲ್ಲಿ ಅವರು ಪಾಲ್ಗೊಳ್ಳಬೇಕಾದರೆ ಸಣ್ಣಪುಟ್ಟ ಅವಘಡಗಳು ತಪ್ಪಿದ್ದಲ್ಲ. ಅಪರೂಪಕ್ಕೆ ಎಂಬಂತೆ ಒಮ್ಮೆಮ್ಮೆ ನಾಯಕಿರೂ ಗಾಯಗೊಳ್ಳುವುದುಂಟು.

ರಿಯಲ್ ಸ್ಟಾರ್ ಉಪೇಂದ್ರ ನಾಯಕನಟನಾಗಿ ಅಭಿನಯಿಸುತ್ತಿರುವ 'ಬಸವಣ್ಣ' (ಬದಲಾಗುತ್ತಿರುವ ಶೀರ್ಷಿಕೆ 'ಬ್ರಾಹ್ಮಣ') ಚಿತ್ರೀಕರಣಕ್ಕಾಗಿ ತರಬೇತಿ ಪಡೆಯುತ್ತಿರಬೇಕಾದರೆ ರಾಗಿಣಿ ಗಾಯಗೊಂಡಿದ್ದಾರೆ. ಈ ಚಿತ್ರದ ದೃಶ್ಯವೊಂದಕ್ಕಾಗಿ ಜಿಮ್ ತರಬೇತಿ ಪಡೆಯಬೇಕಾದರೆ ಅವರ ಕಾಲಿಗೆ ಪೆಟ್ಟಾಗಿದೆ.


ಅವರ ಬಲಗಾಲಿಗೆ ಬ್ಯಾಂಡೇಜ್ ಮಾಡಲಾಗಿದ್ದು ಎರಡು ದಿನ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಥೈಲ್ಯಾಂಡ್ ನಲ್ಲಿ ಚಿತ್ರೀಕರಣ ನಡೆಸಲು ಅವರು ತರಬೇತಿ ಪಡೆಯುತ್ತಿದ್ದರು. ಈ ಬಗ್ಗೆ ಅವರು Thnks for all d love guys will b ok in 2 days ...hurt myself in training of my next with upi ...jus another hurt ;) ಎಂದು ಟ್ವೀಟಿಸಿದ್ದಾರೆ.

ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಗಾಯಗೊಳ್ಳುವುದು ಸಹಜ. ಆದರೆ ನನ್ನ ಬಗ್ಗೆ ನೀವೆಲ್ಲಾ ತೋರಿದ ಕಾಳಜಿಗೆ ನಾನು ಕೃತಜ್ಞಳಾಗಿದ್ದೇನೆ. ಶೀಘ್ರದಲ್ಲೇ ಚೇತರಿಸಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ.

ತಮ್ಮೆಲ್ಲರ ಅಭಿಮಾನಕ್ಕೆ ತುಂಬ ಧನ್ಯವಾದಗಳು ಎಂದು ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಅಂದಹಾಗೆ ಈ ಹಿಂದೊಮೆ ರಾಗಿಣಿ ಮನೆಗೆ ನಾಗಿಣಿ ಬಂದ ಸುದ್ದಿಯನ್ನು ಓದಿಯೇ ಇರುತ್ತೀರ. (ಒನ್ಇಂಡಿಯಾ ಕನ್ನಡ)

<blockquote class="twitter-tweet blockquote"><p>Thnks for all d love guys will b ok in 2 days ...hurt myself in training of my next with upi ...jus another hurt ;) <a href="http://t.co/TmS06mCPut">pic.twitter.com/TmS06mCPut</a></p>— RAGINI DWIVEDI (@raginidwivedi24) <a href="https://twitter.com/raginidwivedi24/statuses/359674332911386627">July 23, 2013</a></blockquote> <script async src="//platform.twitter.com/widgets.js" charset="utf-8"></script>

English summary
Kannada actress Ragini Dwivedi injured while training at a gym. Thnks for all d love guys will b ok in 2 days ...hurt myself in training of my next with upi ...jus another hurt ;), the actress tweets. &#13;
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada