For Quick Alerts
  ALLOW NOTIFICATIONS  
  For Daily Alerts

  ಬಾಸು ಅದೇ ಹಳೇ ಕಥೆಯಲ್ಲಿ ಲೈವ್ ಫುಟೇಜ್

  By Rajendra
  |

  ಯುವಕರ ಉತ್ಸಾಹ ಒಂದು ಕಡೆ ಹಾಗೂ ಧೈರ್ಯ ಜೊತೆಗೂಡಿ ಹಲವಾರು ಯುವ ಪ್ರತಿಭೆಗಳು ಚಿತ್ರರಂಗದಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಇದೀಗ ಹಿರಿಯ ನಿರ್ದೇಶಕ ಎ ಆರ್ ಬಾಬು ಅವರ ಪುತ್ರ ಶಾನ್ ಅವರು 'ಬಾಸು ಅದೇ ಹಳೇ ಕಥೆ' ಎಂಬ ಶೀರ್ಷಿಕೆಯಲ್ಲಿ ಚಿತ್ರವನ್ನು ಅಚ್ಚು ಕಟ್ಟಾಗಿ ಪೂರ್ತಿಗೊಳಿಸಿ ಮೊದಲ ಪ್ರತಿಯನ್ನು ಸಿದ್ದ ಮಾಡಿಕೊಂಡು ಅತಿ ಶಿಘ್ರದಲ್ಲೆ ಸೆನ್ಸಾರ್ ಬಳಿ ಹೋಗಲಿದ್ದಾರೆ.

  ಈ ಚಿತ್ರದಲ್ಲಿ ಶಾನ್ ಅವರು ಲೈವ್ ಫುಟೇಜ್ ಬಳಸಿರುವುದು ವಿಶೇಷ. ಬೆಂಗಳೂರಿನ ಕೆಲವು ಕಾಲೇಜುಗಳ ಬಳಿ ನಿಂತು, ನಾನೊಬ್ಬ ಅನಾಥ. ನನ್ನನ್ನು ಪ್ರೀತಿಸುವಿರಾದರೆ ಒಂದು ಚುಂಬನ ಮೂಲಕ ತಿಳಿಸಿದ ಎಂಬ ಬೋರ್ಡ್ ಹಾಕಿ ನಿಂತಿರುತ್ತಾರೆ. ಹುಡುಗಿಯರು ಹೇಗೆಲ್ಲಾ ವರ್ತಿಸುತ್ತಾರೆ ಎಂಬುದನ್ನು ಲೈವ್ ಆಗಿ ಚಿತ್ರೀಕರಿಸಿಕೊಳ್ಳಲಾಗಿದೆಯಂತೆ. [ತಾರೆ ರೂಪಿಕಾ ಖತರ್ನಾಕ್ ಕಲರ್ ಕಲರ್ ಚಿತ್ರಗಳು]

  ಚಿತ್ರದ ಮೊದಲ ಏಳು ನಿಮಿಷ ತೆರೆಯ ಮೇಲೆ ಯಾರು ಕಾಣಿಸಿಕೊಳ್ಳುವುದಿಲ್ಲ - 3 ನಿಮಿಷದಲ್ಲೇ ಚಿತ್ರದ ಕಥೆ ಹೇಳಿ ಮುಗಿಸಿರುತ್ತಾರೆ. ಇದಾದ ಮೇಲೆ ಎರಡು ಘಂಟೆ ಕಥೆಯ ಓಟ ನೀವು ನೋಡಬಹುದು. ಈ ಚಿತ್ರ ಮಾಡಲು ನನ್ನ ಅಪ್ಪ ಹಾಗೂ ಸಂಕಲನಕಾರ ಶ್ಯಾಮ್ ನನಗೆ ಬೆಂಗಾವಲಾಗಿ ಪ್ರೋತ್ಸಾಹಿಸಿದರು ಎಂದು ಶಾನ್ ಹೇಳಿಕೊಳ್ಳುತ್ತಾರೆ.

  ನಾಯಕಿ ಶೋಬಿನಾ ಅವರು ಈ ಹಿಂದೆ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿ ಆರ್ ಬಾಬ್ಬಿ ಅವರು ಎರಡು ಹಾಡುಗಳ ರಾಗ ಸಂಯೋಜನೆ ಮಾಡಿದ್ದಾರೆ. ಅದರಲ್ಲಿ ಒಂದು ಹಾಡನ್ನು ಕೆ ಜೆ ಯೇಸುದಾಸ್ ಅವರು ಹಾಡಿದ್ದಾರೆ.

  ಚಿತ್ರಕ್ಕೆ ಸ್ಕೈ ಲೈನ್ ಸ್ಟುಡಿಯೋದಲ್ಲಿ ಚಿತ್ರೇತರ ಚಟುವಟಿಕೆಗಳು ಪೂರ್ತಿ ಆಗಿದೆ. ಗಣೇಶ್ ಈ ಚಿತ್ರದ ಛಾಯಾಗ್ರಾಹಕರು. ಆರ್ಯ ಮೌರ್ಯ ಗೌಡ ಅವರು ಈ ಚಿತ್ರದ ವಿತರಣೆ ಹಕ್ಕನ್ನು ಪಡೆದಿದ್ದಾರೆ. ಈ ಚಿತ್ರದ ಟ್ಯಾಗ್ ಲೈನ್ ಸಹ ಭಿನ್ನವಾಗಿದೆ ಕಥೆ ನಿಮ್ದೇ, ಚಿತ್ರಕಥೆ ದೇವರ್ದು, ನಿರ್ದೇಶನ ನಿಮ್ ಹುಡುಗ.

  English summary
  Kannada movie 'Bassu Adhe Haley Kathe' contains live video footages. Apart from directing, Shaan has also written the story, screenplay, dialogues and even acted in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X