For Quick Alerts
  ALLOW NOTIFICATIONS  
  For Daily Alerts

  ಕಾರ್ಪೋರೇಟರ್ ಆಗಬೇಕೆಂದು ಹೊರಟ ನಟಿಗೆ ಸಿಗದ 'ವಿಜಯಲಕ್ಷ್ಮಿ'

  By Suneetha
  |

  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಆಗಸ್ಟ್ 22 ರಂದು ನಡೆದಿದ್ದು, ಇಂದು (ಆಗಸ್ಟ್ 25) ಚುನಾವಣಾ ಫಲಿತಾಂಶ ಪ್ರಕಟಣೆಗೊಂಡಿದೆ.

  ನಟಿ ನಿರ್ಮಾಪಕಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರು ಇದೇ ಮೊದಲನೇ ಬಾರಿಗೆ ಬಿಬಿಎಂಪಿ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಸುಮಾರು 40 ವರ್ಷಗಳ ಸಿನಿಪಯಣದ ಬಳಿಕ ಚುನಾವಣಾ ಅಖಾಡಕ್ಕೆ ಇಳಿದಿದ್ದ ಇವರು ಬಿಜೆಪಿ ಪರವಾಗಿ ನಂ.103 ರ ಕಾವೇರಿ ಪುರ ವಾರ್ಡ್ ನಲ್ಲಿ ಸ್ಪರ್ಧಿಸಿದ್ದರು.

  ಇಂತಿಪ್ಪ ನಟಿ, ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಅವರು ಬಿಬಿಎಂಪಿ ಚುನಾವಣೆಯಲ್ಲಿ ನಂ.103ರ ಕಾವೇರಿ ಪುರ ವಾರ್ಡ್ (ಗೋವಿಂದರಾಜ ನಗರ) ನಲ್ಲಿ ಸ್ಪರ್ಧಿಸಿದ್ದು, ಇದೀಗ ಚುನಾವಣಾ ಫಲಿತಾಂಶ ಕೂಡ ಹೊರಬಿದ್ದಿದೆ.[ಬಿಬಿಎಂಪಿ ಚುನಾವಣೆಗೆ ಚಿತ್ರೋದ್ಯಮದ ಸಂಭಾವ್ಯರ ಪಟ್ಟಿ]

  ಅಂದಹಾಗೆ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ನಟಿ, ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಅವರು ಚುನಾವಣಾ ಸ್ಪರ್ಧೆಯಲ್ಲಿ 2 ಸಾವಿರ ಮತಗಳ ಅಂತರದಲ್ಲಿ ಮೂರನೇ ಸ್ಥಾನಕ್ಕೆ ಕುಸಿದು ಸೋಲನ್ನು ಅನುಭವಿಸಿದರೆ, ಜೆಡಿಎಸ್ ಮಹಿಳಾ ಅಭ್ಯರ್ಥಿ ರಮೀಳಾ ಉಮಾಶಂಕರ್ ಅವರು ಮೊದಲನೇ ಸ್ಥಾನದಲ್ಲಿ ಗೆದ್ದು, ಗದ್ದುಗೆ ಏರಿದ್ದಾರೆ.

  ಕಾವೇರಿ ಪುರ ವಾರ್ಡ್ ನಲ್ಲಿ ಬಿಜೆಪಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ವಿಜಯಲಕ್ಷ್ಮಿ ಸಿಂಗ್ ಅವರ ಪರವಾಗಿ ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್, ಖ್ಯಾತ ನಟ ವಿಜಯಲಕ್ಷ್ಮಿ ಸಿಂಗ್ ಪತಿ ಜೈಜಗದೀಶ್, ಅಳಿಯ ಆದಿತ್ಯ, ನಿರ್ಮಾಪಕರಾದ ಭಾ.ಮಾ ಹರೀಶ್ ಮುಂತಾದ ಚಂದನವನದ ಖ್ಯಾತ ದಿಗ್ಗಜರುಗಳು ಪ್ರಚಾರಕ್ಕಾಗಿ ಸಾಥ್ ನೀಡಿದ್ದರು.

  English summary
  Kannada actress and producer Vijayalakshmi Singh, wife of actor Jai Jagadish, lost in BBMP Elections 2015. She contested from BJP from Kaveripura ward(Govindaraja Nagara Assembly), but lost to JDS candidate Ramila Umashankar. BBMP Election conducted on 22nd August and Results announced on 25th August, 2015.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X