For Quick Alerts
  ALLOW NOTIFICATIONS  
  For Daily Alerts

  Bengali film festival : ಏಪ್ರಿಲ್ 8ರಿಂದ ಬೆಂಗಳೂರಿನಲ್ಲಿ ಬಂಗಾಳಿ ಚಲನಚಿತ್ರೋತ್ಸವ

  |

  ಕೊಲಾಜ್‌ ಬಂಗಾಳಿ ಸಂಸ್ಥೆಯು ಉದ್ಯಾನ ನಗರಿ ಬೆಂಗಳೂರಿನಲ್ಲಿ ಮೊತ್ತ ಮೊದಲ 'ಬಂಗಾಳಿ ಚಲನಚಿತ್ರೋತ್ಸವ' ಆಯೋಜಿಸುತ್ತಿದ್ದು, ಮೂರು ದಿನಗಳ ಕಾಲ ನಡೆಯಲಿರುವ ಫಿಲ್ಮ್‌ ಫೆಸ್ಟಿವಲ್ ಏಪ್ರಿಲ್‌ 8ರಂದು ಶುರುವಾಗಿ ಏಪ್ರಿಲ್‌10ರಂದು ಅಂತ್ಯಗೊಳ್ಳಲಿದೆ. ನಗರದ ಕೋರಮಂಗಲದಲ್ಲಿರುವ ಸೇಂಟ್‌ ಜಾನ್ಸ್‌ಆಡಿಟೋರಿಯಂನಲ್ಲಿ ಈ ಫಿಲ್ಮ್‌ ಫೆಸ್ಟಿವಲ್ ನಡೆಯಲಿದೆ.

  ಕೊಲಾಜ್ ವಾರ್ಷಿಕ ಚಲನಚಿತ್ರೋತ್ಸವವಾಗಿದ್ದು, ಬಂಗಾಳಿ ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಬಂಗಾಳಿವಲಸಿಗರಿಗೆ ಬಂಗಾಳಿ ಸಿನಿಮಾದ ರಂಜನೆ ಒದಗಿಸಲು ಪ್ರಯತ್ನಿಸುತ್ತದೆ.

  ಈ ಮೂರು ದಿನಗಳ ಸಿನಿಮಾ ಹಬ್ಬದಲ್ಲಿ ಒಟ್ಟಾರೆ 9 ಚಲನಚಿತ್ರಗೋಳು ಪ್ರದರ್ಶನಗೊಳ್ಳಲಿವೆ. ಸುಭಾಷಿಶ್ ಮುಖರ್ಜಿ ಮತ್ತು ಜಾಯ್‌ ಸೇನ್‌ಗುಪ್ತ ನಟನೆಯ ಶೊಹೊರರ್‌ ಉಪೊಂಕೊಟ, ಅರ್ಪಣ ಸೇನ್‌ ಅವರ ಬಹೋಮಾನ್‌ ಹಾಗೂ ಋತುಪರ್ಣ ಸೇನ್‌ಗುಪ್ತಾ ನಟನೆಯ ಬ್ಯೂಟಿಫುಲ್‌ ಲೈಫ್‌ ಅಂತಹ ಮೊದಲಾದ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

  ಈ 9 ಪ್ರಮುಖ ಚಲನಚಿತ್ರಗಳ ಹೊರತಾಗಿ, ಬೊಧೋನ್‌ ಮತ್ತು ಓಕಾಯ್ಗಾರಿ ಅಂತಹ 7 ಕಿರು ಚಿತ್ರಗಳನ್ನೂ ಈ ಸಿನಿ ಮಹೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಕೊಲಾಜ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ '1971' ಹೆಸರಿನ ಸಕ್ಷ್ಯಚಿತ್ರ ಕೂಡ ಪ್ರದರ್ಶನಗೊಳ್ಳಲಿದೆ.

  ಈ ಬಗ್ಗೆ ಮಾತನಾಡಿದ ಕೊಲಾಜ್‌ನ ಸಹ ಸಂಸ್ಥಾಪಕರು ಮತ್ತು ಕಾರ್ಯದರ್ಶಿ ಹಾಗೂ ಫಿಲ್ಮ್‌ ಫೆಸ್ಟಿವಲ್ ನಿರ್ದೇಶಕರಾದ ಅಬಿರ್‌ ಬ್ಯಾನರ್ಜಿ ಮಾತನಾಡಿ,"ಬಂಗಾಳಿಗರಿಗೆ ಬೆಂಗಳೂರು ಈಗ ಎರಡನೇ ಮನೆಯಂತಾಗಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 14 ಲಕ್ಷ ಬಂಗಾಳಿಗರು ಇದ್ದಾರೆ. ಸಿನಿಮಾ ಮಾಧ್ಯಮ ಬಂಗಾಳಿಗರ ದೈನಂದಿನ ಜೀವನದ ಒಂದು ಭಾಗ. ಬಂಗಾಳಿಗರ ದೈನಂದಿನ ಜೀವನದ ಭಾಗವಾಗಲು ಈ ಚಲನಚಿತ್ರ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಇರುವ ಬಂಗಾಳಿಗರ ಜೀವನಕ್ಕೆ ಬಹಳ ಹತ್ತಿರವಾದ ಕಥೆಗಳನ್ನು ಒಳಗೊಂಡ ಹಾಗೂ ಬಂಗಾಳಿ ಭಾಷೆಯ ತಾರೆಗಳ ಸಿನಿಮಾಗಳನ್ನು ಈ ಸಿನಿ ಮಹೋತ್ಸವದಲ್ಲಿ ಕಾಣಬಹುದಾಗಿದೆ," ಎಂದಿದ್ದಾರೆ.

  "ಬಂಗಾಳಿ ಸಿನಿಮಾಗಳ ವೀಕ್ಷಕರ ಬಳಗವನ್ನು ಈ ಸಿನಿ ಮಹೋತ್ಸವ ಹೆಚ್ಚಿಸಲಿದೆ. ಬಂಗಾಳಿ ಸಿನಿಮಾ ಉದ್ಯಮಕ್ಕೆ ಇದು ಬಹುದೊಡ್ಡ ಉತ್ತೇಜನ ನೀಡಲಿದೆ. ತಮ್ಮ ನಗರದಲ್ಲಿ ಬಂಗಾಳಿ ಸಿನಿಮಾ ವೀಕ್ಷಣೆಯ ಅವಕಾಶ ಸಿಕ್ಕಿರುವುದು ಜನರಿಗೆ ಲಾಭದಾಯಕ. ಜೊತೆಗೆ ಬಂಗಾಳಿ ಸಿನಿಮಾ ಉದ್ಯಮದ ಜನಪ್ರಿಯತೆ ಕೂಡ ಹೆಚ್ಚಾಗಲಿದೆ" ಎಂದು ಹೇಳಿದ್ದಾರೆ.

  Recommended Video

  KGF | ನೋಡಿಲ್ಲವಂತೆ ಈ ಹಾಟ್ ನಟಿ, ದಕ್ಷಿಣದ ಈ ನಟ ಬಲು ಇಷ್ಟವಂತೆ | Urfi Javed | Yash

  ಈ ಸಿನಿ ಉತ್ಸವದಲ್ಲಿ ಜನಪ್ರಿಯ ನಟರಾದ ಮೂನ್ಮೂನ್‌ ಸೇನ್‌, ಋತುಪರ್ಣ ದಾಸ್‌, ಸ್ವಾಸ್ಥಿಕಾ ಮುಖರ್ಜಿ, ಶ್ರೀಲೇಖಾ ಮಿತ್ರಾ, ರುದ್ರನೈಲ್ ಘೋಶ್, ಜಾಯ್‌ ಸೇನ್‌ಗುಪ್ತಾ, ಸೌರವ್‌ ದಾಸ್‌, ರಿತಬ್ರತಾ ಮುಖರ್ಜಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅತಿಥಿಯಾಗಿ ಪಶ್ಚಿಮ ಬಂಗಾಳದ ವಿಧಾನಸಭೆಯ ಸದಸ್ಯ ಅಗ್ನಿಮಿತ್ರ ಪಾಲ್ ಕೂಡ ಆಗಮಿಸಲಿದ್ದಾರೆ.

  English summary
  Kolaj organized Bengali film fest from April 08 in Bengaluru. Bengali film fest organized in Bengluru for the first time.
  Thursday, April 7, 2022, 17:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X