twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರಶಸ್ತಿ ಪಡೆದ ಕನ್ನಡ ಸಿನಿಮಾಗಳಿವು

    |

    ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ನಿನ್ನೆ (ಮಾರ್ಚ್ 10)ರಂದು ಕೊನೆಯಾಗಿದೆ. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಿನಿಮೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡು ವಿಜೇತವಾದ ಸಿನಿಮಾಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.

    ಏಷ್ಯಾ ವಿಭಾಗ, ಕನ್ನಡ ಸಿನಿಮಾ, ಅತ್ಯುತ್ತಮ ಕನ್ನಡ ಮನರಂಜನಾ ಸಿನಿಮಾ, ಭಾರತೀಯ ಸಿನಿಮಾ ಹೀಗೆ ಹಲವು ವಿಭಾಗಗಳಲ್ಲಿ ಸಿನಿಮಾಗಳು ಪರಸ್ಪರ ಸ್ಪರ್ಧೆ ಮಾಡಿದ್ದವು, ಕೆಲವು ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ.

    ಮಾರ್ಚ್ 03 'ವಿಶ್ವ ಕನ್ನಡ ಸಿನಿಮಾ ದಿನ': ಸಿಎಂ ಘೋಷಣೆ ಮಾರ್ಚ್ 03 'ವಿಶ್ವ ಕನ್ನಡ ಸಿನಿಮಾ ದಿನ': ಸಿಎಂ ಘೋಷಣೆ

    2020 ಹಾಗೂ 2021 ರ ಸಾಲಿನ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದ್ದು, 2020 ನೇ ಸಾಲಿನಲ್ಲಿ ಕನ್ನಡದ 'ಪಿಂಕಿ ಎಲ್ಲಿ?', 'ದಾರಿ ಯಾವುದಯ್ಯ ವೈಕುಂಟಕ್ಕೆ', 'ಓ ನನ್ನ ಚೇತನ' ಸಿನಿಮಾಗಳು ಕ್ರಮವಾಗಿ ಮೊದಲ, ಎರಡನೇ ಹಾಗೂ ತೃತೀಯ ಸ್ಥಾನ ಪಡೆದುಕೊಂಡರೆ 'ಮಸಣದ ಹೂವು' ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ.

    Bengaluru International Film Fest Award Winning Movie List

    2021 ನೇ ಸಾಲಿನ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಕನ್ನಡದ 'ದೊಡ್ಡ ಹಟ್ಟಿಯ ಬೋರೇಗೌಡ' ಸಿನಿಮಾ ಪಡೆದುಕೊಂಡಿದೆ. ಎರಡನೇ ಪ್ರಶಸ್ತಿಯನ್ನು 'ದಂಡಿ', ಮೂರನೇ ಪ್ರಶಸ್ತಿಯನ್ನು 'ದೇವದ ಕಾಡ್' ಸಿನಿಮಾ ಪಡೆದುಕೊಂಡಿದೆ. 'ಕೇಕ್' ಸಿನಿಮಾ ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದುಕೊಂಡಿದೆ.

    ದರ್ಶನ್ ಅಭಿಮಾನಿಗಳ ಜೋರಿಗೆ ಸಿಎಂ ಸುಸ್ತು!ದರ್ಶನ್ ಅಭಿಮಾನಿಗಳ ಜೋರಿಗೆ ಸಿಎಂ ಸುಸ್ತು!

    2020ನೇ ಸಾಲಿನ ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲಿ, ಕನ್ನಡದ 'ದಿಯಾ' ಮೊದಲ ಸ್ಥಾನ, 'ಶಿವಾಜಿ ಸುರತ್ಕಲ್' ಎರಡನೇ ಸ್ಥಾನ ಪಡೆದುಕೊಂಡಿದೆ. 'ಲವ್ ಮಾಕ್ಟೆಲ್' ಸಿನಿಮಾ ಮೂರನೇ ಸ್ಥಾನ ಪಡೆದುಕೊಂಡಿದೆ. 2021ನೇ ಸಾಲಿನ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು 'ಯುವರತ್ನ', ಎರಡನೇ ಪ್ರಶಸ್ತಿಯನ್ನು ದರ್ಶನ್ ನಟನೆಯ 'ರಾಬರ್ಟ್' ಮೂರನೇ ಸ್ಥಾನವನ್ನು 'ಕೋಟಿಗೊಬ್ಬ 3' ಪಡೆದುಕೊಂಡಿದೆ. ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ ಪಡೆದುಕೊಂಡಿದೆ.

    2020ನೇ ಸಾಲಿನ ಭಾರತೀಯ ಸಿನಿಮಾ ವಿಭಾಗದಲ್ಲಿ ದಿಮಾನ ಭಾಷೆಯ 'ಸೆಮ್ ಖೊರೊ' ಅತ್ಯುತ್ತಮ ಸಿನಿಮಾ ಆಗಿ ಆಯ್ಕೆಯಾಗಿದೆ. ದ್ವಿತೀಯ ಪ್ರಶಸ್ತಿಯನ್ನು ಮಲಯಾಳಂನ 'ತಾಹಿರಾ' ಮೂರನೇ ಸ್ಥಾನವನ್ನು ಅಸ್ಸಾಮಿ ಸಿನಿಮಾ 'ಬ್ರಿಡ್ಜ್' ಗಳಿಸಿಕೊಂಡಿದೆ. 2021 ನೇ ಸಾಲಿನಲ್ಲಿ ಮಲಯಾಳಂನ 'ಮೇಪಡಿಯಾನ್' ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಆಯ್ಕೆಯಾಗಿದೆ. ಗುಜರಾತಿಯ 'ಗಾಂಧಿ ಆಂಡ್ ಕಂ' ಎರಡನೇ ಸ್ಥಾನ, 'ಆಡಿಯು ಗೊಡಾರ್ಡ್' ಮೂರನೇ ಸ್ಥಾನ ಪಡೆದುಕೊಂಡಿದೆ.

    ಏಷ್ಯಾ ವಿಭಾಗದಲ್ಲಿ ಶ್ರೀಲಂಕಾದ 'ದಿ ನ್ಯೂಸ್ ಪೇಪರ್', ಭಾರತದ 'ಗಾಡ್ ಆನ್‌ ದಿ ಬಾಲ್ಕನಿ' ಕ್ರಮವಾಗಿ ಮೊದಲ ಹಾಗೂ ಎರಡನೇ ಪ್ರಶಸ್ತಿಗೆ ಭಾಜನವಾಗಿವೆ. ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು 'ದಿ ವಂಡರ್‌ ಲಸ್ಟ್ ಆಫ್ ಅಪು' ಸಿನಿಮಾ ಪಡೆದುಕೊಂಡಿದೆ.

    English summary
    Many Kannada and other language movies won awards in Bengaluru International Film Fest 2022. Here is the list.
    Saturday, March 12, 2022, 9:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X