Don't Miss!
- Sports
ಸಾಧು ಸಂತರಿಗೆ ಅನ್ನದಾನ ಮಾಡಿ ಆಶೀರ್ವಾದ ಪಡೆದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
- News
Assembly Election 2023: ಎಎಪಿಯ ಯೋಜನೆಗಳನ್ನೇ ಬಿಜೆಪಿ, ಕಾಂಗ್ರೆಸ್ ಅನುಸರಿಸುತ್ತಿವೆ: ಶಾಸಕಿ ಆರೋಪ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಹುಭಾಷಾ ನಟ ಅನಂತ್ ನಾಗ್ ಅವರಿಗೆ ಗೌರವ ಡಾಕ್ಟರೇಟ್: ಎಲ್ಲಿ ಯಾವಾಗ?
ಕನ್ನಡ ಸೇರಿದಂತೆ ಮರಾಠಿ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಅನಂತ್ ನಾಗ್. ಅದರಲ್ಲೂ ಕನ್ನಡ ಚಿತ್ರರಂಗಕ್ಕೆ ಅನಂತ್‌ನಾಗ್ ನೀಡಿದ ಕೊಡುಗೆ ಮರೆಯಲು ಸಾಧ್ಯವೇ ಇಲ್ಲ. ಸಿನಿಮಾ ಕ್ಷೇತ್ರಕ್ಕೆ ಅನಂತ್ ನಾಗ್ ಇನ್ನೂ ಸೇವೆ ಸಲ್ಲಿಸುತ್ತಲೇ ಇದ್ದಾರೆ. ಇಂತಹ ಮೇರು ನಟನ ಕಿರೀಟಕ್ಕೆ ಮತ್ತೊಂದು ಗರಿ ಸೇರಿ ಸೇರಿಕೊಂಡಿದೆ.
ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಆನಂತ್ ನಾಗ್ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಆದ್ರೀಗ ಇವರ ಸಾಧನೆ ಹಾಗೂ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಘೋಷಣೆಯಾಗಿದೆ.
ಹಿರಿಯ ನಟ ಆನಂತ್ ನಾಗ್‌ಗೆ ಗೌರವ ಡಾಕ್ಟರೇಟ್
ಈಗಾಗಲೇ ಕನ್ನಡದ ಮೇರು ನಟರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಆದರೆ, ಇದೂವರೆಗೂ ಆನಂತ್ ನಾಗ್ ಅವರಿಗೆ ಈ ಗೌರವ ಸಿಕ್ಕಿರಲಿಲ್ಲ. ಈಗ ಬೆಂಗಳೂರಿನ ಉತ್ತರ ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ. ಬೆಂಗಳೂರು ಉತ್ತರ ವಿವಿಯ ಎರಡನೇ ಘಟಿಕೋತ್ಸವದಲ್ಲಿ ಅನಂತ್ ನಾಗ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಬೆಂಗಳೂರು ಉತ್ತರ ವಿವಿಯ ಎರಡನೇ ಘಟಿಕೋತ್ಸವ ಕೋಲಾರದ ನಂದಿನಿ ಪ್ಯಾಲೇಸ್‌ನಲ್ಲಿ ನಡೆಯಲಿದೆ. ಇದೇ ಶುಕ್ರವಾರ (ಜುಲೈ 15) ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಈ ಸಮಾರಂಭದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ನೀಡಿ ಗೌರವಿಸಲಿದ್ದಾರೆ.
ಇನ್ನೂ ಇಬ್ಬರಿಗೆ ಗೌರವ ಡಾಕ್ಟರೇಟ್
ಕನ್ನಡದ ಹಿರಿಯ ನಟ ಅನಂತ್ ನಾಗ್ ಸೇರಿದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಇನ್ನೂ ಇಬ್ಬರು ಸಾಧಕರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ಅನ್ನು ಘೋಷಿಸಿದೆ. ಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ ಶಿಷ್ಯ ಪದ್ಮಶ್ರೀ ಎಸ್. ಬಲ್ಲೇಶ್ ಭಜಂತ್ರಿ ಜೊತೆಗೆ ತಂತ್ರಜ್ಞಾನ ಕ್ಷೇತ್ರಕ್ಕೆ ಸೇವೆ ಸಲ್ಲಿಸಿರುವ ಶರತ್ ಶರ್ಮಾ ಅವರಿಗೆ ಹಿರಿಯ ನಟ ಅನಂತ್ ನಾಗ್ ಅವರೊಂದಿಗೆ ಗೌರವ ಡಾಕ್ಟರೇಟ್ ನೀಡಲಿದೆ.

ಕನ್ನಡ ಮೇರು ನಟರಾದ ಡಾ.ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಡಾ. ರವಿಚಂದ್ರನ್, ಡಾ.ಶಿವರಾಜ್‌ಕುಮಾರ್ ಸೇರಿದಂತೆ ಹಲವು ಗಣ್ಯರಿಗೆ ಈಗಾಗಲೇ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಈಗ ಅನಂತ್ ನಾಗ್ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ.